1976ರಲ್ಲಿ ಸುಮಾರು 100 ಚಿತ್ರಗಳು ನಿರ್ಮಾಣಗೊಂಡಿದ್ದವು.ಆದರೆ ಅವುಗಳಲ್ಲಿ ಕೇವಲ 10 ಚಿತ್ರಗಳು ಗೆದ್ದಿದ್ದವು.”ಅಮರ್ ಅಕ್ಬರ್ ಅಂತೋಣಿ ” ಸುಪರ್ ಡ್ಯುಪರ್ ಹಿಟ್ ಆಗಿತ್ತು.
ಅಂತೋಣಿ ಪಾತ್ರಕ್ಕೆ ಅಮಿತಾಭ್ ರನ್ನು ಆರಿಸಲಾಗಿತ್ತು.ಪಾತ್ರ ವಿವರಣೆಯನ್ನು ಕೇಳಿದ ಬಚ್ಚನ್ ತನಗೆ ಈ ಪಾತ್ರ ಅರ್ಥವಾಗಲಿಲ್ಲ ಎಂದರು.” ಈ ಚಿತ್ರದ ಬಳಿಕ ಜನ ನಿನ್ನನ್ನು ಅಂತೋಣಿ ಎಂಬುದಾಗಿಯೇ ಗುರುತಿಸುತ್ತಾರೆ ಎಂದು ನಿರ್ದೇಶಕ ಮನಮೋಹನ್ ದೇಸಾಯಿ ಭರವಸೆ ನೀಡಿದರು.
ಈ ಚಿತ್ರ ನಿರ್ಮಾಣದ ಮುಂಚೆ ಮನಮೋಹನ್ ದೇಸಾಯಿ ಅವರ ಪತ್ನಿ ನಿಧನ ಹೊಂದಿದರು. ಅವರು ಬಹಳವಾಗಿ ಖಿನ್ನರಾಗಿದ್ದರು.ಚಿತ್ರ ನಿರ್ಮಿಸುವ ಉಮೇದಿನಲ್ಲಿರಲಿಲ್ಲ. ಇದನ್ನು ಕಂಡ ದೇಸಾಯಿ ಪುತ್ರ ಕೇತನ್, ” ಅಪ್ಪ ನಿನ್ನ ಚಿತ್ರಗಳೆಲ್ಲಾ ಯಾಕೆ ಹಿಟ್ ಆಗುತ್ತವೆ ಗೊತ್ತಾ? ಚಿತ್ರದ ಸೆಕೆಂಡ್ ಹಾಫ್ ತುಂಬಾ ಮಜಾ ಆಗಿರುತ್ತವೆ ” ಎಂದ.ತಂದೆಗೆ ಇದು ಅರ್ಥವಾಗಲಿಲ್ಲ.” ಅಪ್ಪ ನೀನೀಗ ಚಿತ್ರ ಬದುಕಿನ ಸೆಕೆಂಡ್ ಹಾಫ್ ನಲ್ಲಿದ್ದೀಯಾ.ಆದ್ದರಿಂದ ಲವಲವಿಕೆಯಿಂದ ಚಿತ್ರ ನಿರ್ಮಿಸು”ಎಂದು ಹುರಿದುಂಬಿಸಿದರು. ಮಗನ ಮಾತು ಮನಸ್ಸಿಗೆ ನಾಟಿತು.ಪತ್ನಿಯ ನೆನಪನ್ನು ಮನಸ್ಸಿನಲ್ಲಿ ಇಟ್ಟು ಸಂಪೂರ್ಣ ಜೋಶ್ ನಿಂದ ಚಿತ್ರ ನಿರ್ಮಾಣಕ್ಕಿಳಿದರು.’ಅಮರ್ ಅಕ್ಬರ್ ಅಂತೋಣಿ’ ಚಿತ್ರ ತಯಾರಿಸಿದರು.

ಪತ್ನಿ ಸಾಯಿಬಾಬಾನ ಪರಮ ಭಕ್ತೆಯಾಗಿದ್ದರು.ಆದ್ದರಿಂದ ” ಶಿರಡಿವಾಲೆ ಸಾಯಿಬಾಬಾ….” ಎಂಬ ಗೀತೆಯನ್ನು ಚಿತ್ರದಲ್ಲಿ ಸೇರಿಸಿದರು.ಈ ಹಾಡು ಈಗಲೂ ಜನಪ್ರಿಯತೆಯನ್ನು ಉಳಿಸಿಕೊಂಡಿದೆ.
ಏಳಿಂಜೆ ನಾಗೇಶ್ (98929 80750)




















