ಸಚ್ಚೇರಿಪೇಟೆ ಲಯನ್ಸ್‌ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕ ಜಿನ್ನಪ್ಪ ಪೂಜಾರಿ ನಿವೃತ್ತಿ

ಕಾರ್ಕಳ : ಶಿಕ್ಷಕನಾದರೂ ಆತ ನಿತ್ಯ ಹಲವರಿಂದ ಕಲಿಯಲು ಸಾಕಷ್ಟು ವಿಷಯಗಳಿರುವುದು. ಶಿಕ್ಷಕನೂ ಕಲಿಕೆಗೆ ಹೆಚ್ಚು ಒತ್ತು ನೀಡಬೇಕೆಂದು ಸಚ್ಚೇರಿಪೇಟೆ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಿಂದ ಮುಖ್ಯಶಿಕ್ಷಕ ಜಿನ್ನಪ್ಪ ಪೂಜಾರಿ ಅಭಿಪ್ರಾಯಪಟ್ಟರು. ಅವರು ಆ. 31ರಂದು ಸೇವೆಯಿಂದ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಏರ್ಪಡಿಸಲಾದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು. ಲಯನ್ಸ್ ಸೇವಾ ಟ್ರಸ್ಟ್‌ ಅಧ್ಯಕ್ಷ ಡಾ. ರಾಜಾರಾಮ ರೈ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸಂಚಾಲಕ ಸತ್ಯಶಂಕರ ಶೆಟ್ಟಿ, ಮುಂಡ್ಕೂರು-ಕಡಂದಲೆ ಲಯನ್ಸ್‌ ಅಧ್ಯಕ್ಷ ಅಶೋಕ್ ಶೆಟ್ಟಿ, ಮುಂಡ್ಕೂರು ವಿದ್ಯಾವರ್ಧಕ ಪ.ಪೂ. ಕಾಲೇಜಿನ ಸಂಚಾಲಕ ಡಾ. ಪಿ. ಬಾಲಕೃಷ್ಣ ಆಳ್ವ, ಕಡಂದಲೆ ಶ್ರೀ ಸುಬ್ರಹ್ಮಣ್ಯ ಪ್ರೌಢಶಾಲೆಯ ಸಂಚಾಲಕ ಸುದರ್ಶನ ಶೆಟ್ಟಿ, ಪೊಸ್ರಾಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸಂಚಾಲಕ ಸುಚರಿತ ಶೆಟ್ಟಿ, ಮುಂಡ್ಕೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶುಭಾ ಪಿ. ಶೆಟ್ಟಿ, ಲಯನ್ಸ್ ಶಾಲೆಯ ಸಲಹೆಗಾರ‌ ಬಿ. ಸೀತಾರಾಮ ಭಟ್ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕಿ ಸುಶೀಲಾ ಸ್ವಾಗತಿಸಿ, ಸತ್ಯಶಂಕರ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು. ಶಿಕ್ಷಕಿ ಜಯಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.









error: Content is protected !!
Scroll to Top