ನಿತ್ಯ ಭವಿಷ್ಯ – 01-09-2020

ಮೇಷ

ಗುರು ಮತ್ತು ಕೇತು ನವಮದಲ್ಲಿ ಇರುವುದರಿಂದ ಬೇರೆ ಎಲ್ಲ ಗ್ರಹರಿಂದ ಬರುವ ದೋಷಗಳು ಕಡಿಮೆಯಾಗುತ್ತವೆ . ಅದರಲ್ಲೂ ಧನು ರಾಶಿಯ ಗುರುವಿಗೆ ಬಹಳ ವಿಶೇಷವಿದೆ.ಅಷ್ಟಮಾದಿತ್ಯ ಕುಜ ಲಗ್ನದಲ್ಲಿದ್ದಾನೆ ಆದರೆ ಮೇಷ ರಾಶಿಯ ಕುಜನಿಗೆ ಅಷ್ಟಮಾಧಿಪತ್ಯದೋಷ ಕಾಡುವುದಿಲ್ಲ ದೈವಾನುಗ್ರಹವಿದ್ದು ಧನಾಗಮನ ವಿಶೇಷವಿದ್ದು ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಿದೆ.ಗುರುಹಿರಿಯರ ಸಲಹೆ ಸಹಕಾರದೊಂದಿಗೆ ಮುನ್ನೆಡೆದಾಗ  ಎಲ್ಲವೂ ಯಶಸ್ವಿಯಾಗಲಿದೆ.

ವೃಷಭ

ಗುರು  ಕೇತುವಿನೊಂದಿಗೆ. ಅಷ್ಟಮದಲ್ಲಿ ಇರುವುದರಿಂದ ಅದೃಷ್ಟಕ್ಕೆ ತೊಂದರೆ .ಪಾಪಗ್ರಹರ ಯುತಿ ಪಡೆದರೆ ದಾಂಪತ್ಯಕ್ಕೆ ಆರ್ಥಿಕ ಸ್ಥಿತಿಗೆ ತೊಂದರೆಯಾಗುತ್ತದೆ. ನೀವು ಎಚ್ಚರವಹಿಸಬೇಕು .ನವಮದಲ್ಲಿರುವ ಶನಿ ವೈರಾಗ್ಯ ತೀರ್ಥಯಾತ್ರೆಯನ್ನು ತಿಳಿಸುತ್ತಿದ್ದಾನೆ .ಜೀವನವೆಂದರೆ ಇಷ್ಟೇನಾ ಎಂಬ ಭಾವನೆ ಏನು ಮಾಡಿದರೇನು ಬರುವಾಗ ಏನು ತರಲಿಲ್ಲ ಹೋಗುವಾಗ ಏನು ತೆಗೆದುಕೊಂಡು ಹೋಗುವುದಿಲ್ಲ ಎಂಬ ಭಾವನೆ ಮೂಡುವುದು.

ಮಿಥುನ

ನಿಮಗೆ ಮತ್ತು ನಿಮ್ಮ ಹಿರಿಯರಿಗೆ ಸಾಲಸೋಲವನ್ನು ಉಂಟುಮಾಡುತ್ತಾನೆ  ಆಯುಷ್ಯಕ್ಕೆ ತೊಂದರೆ ಇಲ್ಲ ಆದರೆ ನರಳಾಟ ಇರುತ್ತದೆ  ಮೂಲವ್ಯಾಧಿ ಹಸಿವೆ ದೇಶಾಂತರವಾಸ ಇರುತ್ತದೆ .ಸಪ್ತಮದಲ್ಲಿ ಗುರು ಕೇತುವಿನೊಂದಿಗೆ ಇರುವುದರಿಂದ ಬರುವ ಕಷ್ಟದಲ್ಲಿ ಪ್ರಮಾಣ ಕಡಿಮೆಯಿರುತ್ತದೆ ಆದರೆ ಇಲ್ಲಿ ಕೇತು ಇರುವುದರಿಂದ ಹೆಂಡತಿಗೂ ಆರೋಗ್ಯದಲ್ಲಿ ಸಮಸ್ಯೆ ದಾಂಪತ್ಯದಲ್ಲಿ ವಿಯೋಗಾಡಿ ದುಖಗಳು ಬರುತ್ತವೆ. ಇದಕ್ಕೆ ಪರಿಹಾರವೆಂದರೆ ವಿಷ್ಣು ಸಹಸ್ರನಾಮ ಪಾರಾಯಣ ,ಇಬ್ಬರಲ್ಲಿ ಒಬ್ಬರು ಮೌನಧಾರಿಯಾಗಿರಬೇಕು.

ಕರ್ಕಾಟಕ

ಗುರು ಮತ್ತು ಕೇತು ಷಷ್ಟದಲ್ಲಿಇದ್ದಾರೆ  ಗುಲ್ಮ ರೋಗ ಕಿವಿಯ ರೋಗ  ಬ್ರಾಹ್ಮಣ -ದೇವ ಶಾಪ ರಕ್ತದೊತ್ತಡ  ಅತ್ಯಧಿಕ ಶತ್ರುಭಾಧೆ ಇರುತ್ತದೆ. ದೈವಾನುಗ್ರಹ ಅಭಾವ ಸೂಚಕನು .ಹೆಂಡತಿ ಮಕ್ಕಳೊಂದಿಗೆ ತಾನಾಗಿಯೇ ಹೊಂದಿಕೊಂಡು ಹೋಗಬೇಕಾಗುತ್ತದೆ .ಸಪ್ತಮದಲ್ಲಿ ಅಷ್ಟಮಾಡಿಪತಿ ಶನಿ ಇರುವಾಗ ಯುವಕ ಯುವತಿಯರು ಪ್ರೀತಿ ಪ್ರೇಮಕ್ಕೆ ಬಲಿಯಾಗುವುದು ಅಧಿಕವಾಗಿರುತ್ತದೆ. ಜೀವನಕ್ಕೆ ಅತೀ ಅಗತ್ಯವಾಗಿ ಬೇಕಾದ ವಿದ್ಯೆಯನ್ನು ಕಳೆದುಕೊಳ್ಳುತ್ತಾರೆ.ವಿಷ್ಣು ಸಹಸ್ರನಾಮ ನಿತ್ಯ ಪಾರಾಯಣ ಮಾಡಿರಿ.

ಸಿಂಹ

ಶನಿ ಶಷ್ಟದಲ್ಲಿ ಇರುವುದರಿಂದ ನಿಮ್ಮನ್ನು ಅತೀ ಪ್ರಭ ಲನನ್ನಾಗಿ ಮಾಡಲಿದ್ದಾನೆ. ಕಬ್ಬಿಣವೆ ಮೊದಲಾದ ಗಣಿ ಉದ್ಯಮಕ್ಕೆ ಲೋಕೋಪಯೋಗಿ ಮೊದಲಾದ ಗುತ್ತಿಗೆದಾರರಿಗೂ ವಿಶೇಷ ಲಾಭವನ್ನು ಕೊಡಲಿದ್ದಾನೆ. ಆದರೆ ಶನಿ ಕಾಲಿನ ನೋವು ಆಲಸ್ಯ ನಿದ್ರಾಭಾವ ಬೆವರುವಿಕೆ ಇತ್ಯಾದಿ ಸಮಸ್ಯೆಯನ್ನು ತರಲಿದ್ದಾನೆ .ಪಂಚಮದಲ್ಲಿ ಗುರು ಇರುವುದರಿಂದ ಸಂತಾನ ವಿಷಯದಲ್ಲಿ ಸ್ವಲ್ಪ ಚಿಂತೆಯನ್ನು ತರಲಿದ್ದಾನೆ.ವಿಶೇಷವಾದ ದೈವಾನುಗ್ರಹ  ಉಳ್ಳವರಾಗುತ್ತೀರಿ .

ಕನ್ಯಾ

ಶನಿಯು ಪಂಚಮದಲ್ಲಿ ಇದ್ದಾನೆ .ಮಕ್ಕಳ ವಿಷಯದಲ್ಲಿ ಚಿಂತೆಯುಳ್ಳವರಾಗುತ್ತೀರಿ ನಾಸ್ತಿಕ ಬುದ್ಧಿ ಕಲಹವಿರುತ್ತದೆ .ಗುರು ಸುಖ ಸ್ಥಾನದಲ್ಲಿ ಇದ್ದರೂ ಕೇತು ಜೊತೆಯಲ್ಲಿ ಇರುವುದರಿಂದ ಭೂಮಿ ತಾಯಿ ಸುಖಗಳಿಗೆ ತೊಂದರೆಯಾಗಲಿದೆ ಅಪವಾದ ಕೇಳಬೇಕಾಗುತ್ತದೆ .ಧನುವಿನ ಕೇತು ಪರದೇಶದಲ್ಲಿ ಸಂತಾನ ಸಂಪತ್ತನ್ನು ನೀಡುತ್ತಾನೆ ಎಂದು ಮಾನಸಾಗರಿಯಲ್ಲಿ ಫಲ ಹೇಳಲ್ಪಟ್ಟಿದೆ .

ತುಲಾ

ತೃತೀಯದಲ್ಲಿ ಗುರು ಇರುವುದರಿಂದ ಒಳ್ಳೆಯ ಮನೋಭಾವದ ಸಹೋದರರನ್ನು ಹೋಡುತ್ತೀರಿ .ಆದರೆ ಕೇತು ಜೊತೆಯಲ್ಲಿ ಇರುವುದರಿಂದ  ಸ್ವಯಂ ದುರ್ಬುದ್ದಿ ಬೆಳೆಸಿಕೊಳ್ಳುತ್ತೀರಿ ಬಂಧುಗಳಿಂದ ತಿರಸ್ಕೃತನೂ ಆಗುವಿರಿ .ಕಫ ಕಿವಿನೋವು ಬರಲಿದೆ,   ಸುಖ ಸ್ಥಾನದ ಶನಿ ನಿರಾಶೆ ದುರಾಸೆಗಳಿಂದ ಕೌಟುಂಬಿಕ ಸುಖವಿರದು  .ನಯವಂಚಕರ ಸಹಯೋಗ ಚಾಡಿಮಾತು ಇತ್ಯಾದಿಗಳಿಂದ ದೂರವಿದ್ದಷ್ಟೂ ಉತ್ತಮ ಆರೋಗ್ಯದಲ್ಲಿ ಮಾತ್ರ ಕೊಂಚ ಏರುಪೇರು ಕಾಣಿಸಲಿದೆ.

ವೃಶ್ಚಿಕ

ಕುಜ ಷಷ್ಟ ದಲ್ಲಿದ್ದಾನೆ ಪಿತ್ತ ರಕ್ತ ಅಗ್ನಿಭಯ  ವಿಷಭಯ ಉಷ್ಣವಾಯು ಶಸ್ತ್ರ ಕ್ರಿಯೆ ಗಳನ್ನು ಸೂಚಿಸುತ್ತಿದ್ದಾನೆ  ನಾಗದೇವರ ಮೂಲ ಮಂತ್ರವನ್ನು ಹೇಳುತ್ತಾ ಬನ್ನಿರಿ .ಧನಕಾರಕ ಗುರು ಧನಸ್ಥಾನದಲ್ಲಿದ್ದರೆ ಜ್ಯೋತಿಷಿ ಅಧ್ಯಾಪಕ ವಕೀಲ ಧಾರ್ಮಿಕ ಮುಖಂಡ ಇವರಿಗೆ ತಮ್ಮ ತಮ್ಮ ವೃತ್ತಿಯಲ್ಲಿ ವಿಶೇಷ ಧನಾಗಮನ ವುಂಟಾಗುವುದು.ಕೇತು ಜೋತಿಯಲ್ಲಿ ಇರುವುದರಿಂದ ನಿಮ್ಮ ಮಾತಿನಲ್ಲಿ ಕುಹಕ ತಮಾಷೆ ವಂಚನೆ ಇರದಂತೆ ಎಚ್ಚರವಹಿಸಿ.

ಧನು

ಧನು ರಾಶಿಯಲ್ಲಿ ಗುರುವಿದ್ದಾಗ ಅತೀ ಶುಭ ಫಲವನ್ನು ಹೇಳಿದ್ದಾರೆ.ಶನಿಯು ದ್ವಿತೀಯದಲ್ಲಿರುವಾಗ ನೀವು ಕುಟುಂಬಸುಖ್ಕವನ್ನು ಅನುಭವಿಸಲಾರಿರಿ.ಮಾತಿನಿಂದಾಗಿ ವೈಮನಸ್ಸಿಗೆ ಪಾತ್ರರಾಗುತ್ತೀರಿ.ಮಕರದ ಶನಿ ಆರ್ಥಿಕ ಭದ್ರತೆಯನ್ನು ನೀಡಿದರೂ ಕಠಿಣವಾದ ದುಡಿಮೆಗೂ ಕಾರಣನಾಗುವನು .ಬೃಹಜ್ಜಾತಕದಲ್ಲಿ ಹೇಳಿರುವಂತೆ ಕುಜ ಪಂಚಮದಲ್ಲಿ ಇರುವಾಗ ಸಂತಾನದ ವಿಷಯದಲ್ಲಿ ಅನೇಕ ಸಮಸ್ಯೆಗಳು ಬರಲಿವೆ.ಅಗ್ನಿತತ್ವ ರಾಶಿಯಲ್ಲಿರುವಾಗ ದುಡುಕು ಸ್ವಭಾವ ನಿಮ್ಮಲ್ಲಿರುತ್ತದೆ.

ಮಕರ

ಜನ್ಮದಶನಿಯು ನಮಗೆ ಶುಭ ಫಲವನ್ನು  ನೀಡುತ್ತಾನೆ .ರಾಹು ಗ್ರಹ ಇಷ್ಟವಾದ ಷ್ಟಾನದಲ್ಲಿ ಸಂಚರಿಸುವುದರಿಂದ ಅದೃಷ್ಟವು ಕೂಡಿ ಬಂದು ಅನಿರೀಕ್ಷಿತ ರೀತಿಯಲ್ಲಿ ಕೆಲಸಕಾರ್ಯಗಳಲ್ಲಿ ಮುನ್ನೆಡೆ ತೋರಿಬರಲಿದೆ. ಧಾರ್ಮಿಕ ಕೆಲಸಗಳಲ್ಲಿ ಶ್ರದ್ಧೆ ಆಸಕ್ತಿ ಸರ್ವ ಪ್ರಕಾರದ ಲಾಭ , ವ್ಯವಹ್ಹರಗಳಲ್ಲಿ ಧನ ಸಂಪಾದನೆ ಋಣಭಾಧೆ ನಿವಾರಣೆ ಯಾಗಲಿದೆ ವ್ಯಯದಲ್ಲಿ ಗುರು ಕೇತು ಇರುವುದು “ವ್ಯಯ:ವಿತರಣಪ್ರಾಯ: ನ ತು ದುಷ್ಟ ವ್ಯಯ: ಧಾರ್ಮಿಕ ಕೆಲಸಗಳಿಗೆ ಖರ್ಚು ಬರಲಿದೆ.

ಕುಂಭ 

ಶನಿ ವ್ಯಯದಲ್ಲಿ ಮಕರ ರಾಶಿಯಲ್ಲಿ ಇರುವುದರಿಂದ ಹೆಚ್ಚು ತೊಂದರೆಯನ್ನು ಕೊಡಲಾರನು .ಎಲುಬು ನರಕ್ಕೆ ಸಂಬಂಧ ಪಟ್ಟ ನೋವು ವಾತರೋಗ ಬರಲಿದೆ. ಸಾಲ ಮಾಡಬೇಕಾದ  ಸಂದರ್ಭ ಬರಲಿದೆ ,ಗುರು ಗ್ರಹ ನಿಮಗೆ ಅನುಕೂಲ ಶ್ತೀತಿಯಲ್ಲಿದ್ದು ಆರ್ಥಿಕವಾಗಿ ವ್ಯಾವಹಾರಿಕವಾಗಿ ಮುಂದುವರಿಯಲು ಪೂರಕವಾಗಲಿದೆ ಯುವಕ ಯುವತಿಯರು ವಿವಾಹ ಸಂಬಂಧ ಮಾತುಕತೆ ನಡೆಸುವರು .ನವೆಂಬರ್ 20 ರ ನಂತರ ವಿವಾಹವಾಗಲಿ .

ಮೀನ

ದಶಮದಲ್ಲಿರುವ ಗುರು ನಿಮ್ಮ ಉದ್ಯೋಗದ ಮೇಲೆ ಪ್ರಭಾವ ಬೀರುವನು .ಕೇತು ಜೊತೆಯಲ್ಲಿ ಇರುವುದರಿಂದ ಏರುಪೇರು ನಡೆಯುತ್ತಲೇ ಇರುತ್ತದೆ .ನಾವು ಆಫೀಸುನ್ನು ಮನೆಗೆ ತರಬಾರದು ,ಹಾಗೆಯೇ ಮನೆಯನ್ನು ಆಫೀಸಿಗೆ ಒಯ್ಯಬಾರದು. ಆಗ ನಮಗೂ ಮನೆಯವರಿಗೂ ನೆಮ್ಮದಿ .ಶುಭಕಾರ್ಯದಲ್ಲಿ ವೃತ್ತಿಕ್ಷೇತ್ರದಲ್ಲಿ ಸ್ವಲ್ಪ ಹಿನ್ನೆಡೆಯ ಅನುಭವ ನಿಮಗೆ ತೋರಿಬರಲಿದೆ.  ಶಿವ ಸ್ಮರಣೆ ಮಾಡಿರಿ. 

ಜ್ಯೋತಿಷ್ಯರು

ಕೆ. ಸುಬ್ರಹ್ಮಣ್ಯ ಆಚಾರ್ಯ

ಶ್ರೀ ಕಾರಿಂಜೇಶ್ವರ ಜ್ಯೋತಿಷ್ಯಾಲಯ

ಹಿರಿಯಂಗಡಿ, ಕಾರ್ಕಳ

ಸಂಪರ್ಕ : 97414 89529 / 80739 73603



































































































error: Content is protected !!
Scroll to Top