ನಿತ್ಯ ಭವಿಷ್ಯ -30-08-2020

ಮೇಷ

ಉತ್ತಮ ದೈವಾನುಗ್ರಹವಿದ್ದರೂ ನೀವು ಆರ್ಥಿಕವಾಗಿ ಲಾಭ-ನಷ್ಟ ಸರಿಯಾಗಿ ಯೋಚಿಸಲೇಬೇಕಾದ ಸಮಯವಿದು .  ಕುಜ  ನಿಮ್ಮ ಆರೋಗ್ಯವನ್ನು ಏರುಪೇರು ಮಾಡಲಿದ್ದಾನೆ .ಮುಂದಿನ ದಿನಗಳಲ್ಲಿ ಇಡೀ ಕುಟುಂಬವನ್ನು ನಿರ್ವಹಿಸಬೇಕಾದ ಅನಿವಾರ್ಯತೆ ನಿಮ್ಮ ಜವಾಬ್ದಾರಿಗೆ ಬರಲಿದೆ. ದೇವಸ್ಥಾನ ದೈವಸ್ಥಾನಗಳ ಬಗ್ಗೆ ಕೀಳು ಭಾವನೆ ಬೇಡ. ನಿಮಗೆ ಮನಸಿದ್ದರೇ ಹೋಗಿ, ಸಚ್ಚಾರಿತ್ರ್ಯ ಇರುವವರ ಸಂಪರ್ಕ ಆದಷ್ಟು ಬೆಳೆಸಿಕೊಳ್ಳಿರಿ.

ವೃಷಭ 

ನಿಮ್ಮ ಎಲ್ಲ ವ್ಯವಹಾರಗಳಲ್ಲಿ ಒಮ್ಮೆ ಸಿಂಹಾವಲೋಕನ ಮಾಡಿಕೊಳ್ಳುವ ಸಮಯವಿದು. ಎಲ್ಲಿ ತಪ್ಪಿದೆ ಯಾಕೆ ತಪ್ಪಿದೆ ಹೇಗೆ ಸರಿಪಡಿಸಿಕೊಳ್ಳಬಹುದು ಇತ್ಯಾದಿ. ನವೆಂಬರ್ 20 ರ ನಂತರ ಪೂರ್ಣ ಚಂದ್ರನಂತೆ ಬೆಳಗಲಿದ್ದೀರಿ .  ಇದರಲ್ಲಿ ಕೆಲವೊಂದು ಸಮಸ್ಯೆಗಳಿಗೆ ಮಾತ್ರ ಪರಿಹಾರ ಸಿಗಲಿದೆ .ಕೆಲವನ್ನು ನಾವೇ ಸರಿಮಾಡಿಕೊಂಡು ಹೋಗಬೇಕು .ಕೌಟುಂಬಿಕವಾಗಿ ಎಲ್ಲವೂ ನಾಟಕೀಯವಾಗಿಯೇ ಇರುತ್ತದೆ.

ಮಿಥುನ

ವ್ಯರ್ಥ ಸ್ವಾಭಿಮಾನಕ್ಕೆ ಒಳಗಾಗಿ ನಿಮ್ಮ ಉನ್ನತಿಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.  ನಿಮಗೆ ಗುರು ಸಪ್ತಮದಲ್ಲಿದ್ದರೂ ಕೇತು ಜೊತೆಗಿದ್ದು ನಿಮಗೆ ಪೂರ್ಣ ಅನುಗ್ರಹ ಸಿಗಲು ಬಿಡುವುದಿಲ್ಲ ವೈವಾಹಿಕ ಜೀವನ ಆರಂಬಿಸಲು ಕಾದು ಕುಳಿತವರಿಗೆ  ಒಳ್ಳೆಯ ಅವಕಾಶ. ಜನ್ಮದ ರಾಹು ನಿಮ್ಮಲ್ಲಿ ಆಲಸ್ಯ ಮಾನಸಿಕ ನೋವು ಬರುವಂತೆ ಮಾಡಲಿದ್ದಾನೆ.  ವಿದ್ಯಾರ್ಥಿಗಳು ಪರಿಸ್ಥಿತಿಗೆ ತಕ್ಕಂತೆ ಓದುವುದನ್ನು ಮರೆಯಬೇಡಿ.

ಕರ್ಕಾಟಕ

ನಿಮಗೆ ಬಹಳಷ್ಟು ಆಯ್ಕೆ ಅವಕಾಶಗಳು ಒದಗಿ ಬರಲಿವೆ. ಯುವಕ ಯುವತಿಯರು ಖಂಡಿತವಾಗಿಯೂ ದಾರಿ ತಪ್ಪುವ ಸಾಧ್ಯತೆಯನ್ನು ಶುಕ್ರ ಮತ್ತು ಶನಿ ತೋರಿಸುತ್ತಿದ್ದಾರೆ.ಪ್ರತಿ ನಿತ್ಯ 108 ಬಾರಿ ಓಂ ದುರ್ಗಾಯೈನಮಹ ಹೇಳುತ್ತಾ ಬರಬೇಕು. ಕುಂಕುಮಾರ್ಚನೆ ದೇವಿ ಕ್ಷೇತ್ರದಲ್ಲಿ ಪ್ರತೀ ಶುಕ್ರವಾರ ಮಾಡಿಸಬೇಕು .ಖರ್ಚು ವೆಚ್ಚದ ಬಗ್ಗೆ ಹಿಡಿತ ನಿಮಗಿರಲಿ.

ಸಿಂಹ

ನಿಮ್ಮ ಸಂಸಾರದ ಗತಿ ಉತ್ತಮ ರೀತಿಯಲ್ಲಿ ಸಾಗಲಿದೆ .ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ . ಶನಿಯು ಅನೇಕ ಮೂಲಗಳಿಂದ ಧನಾಗಮನವನ್ನು ತರಿಸಲಿದ್ದಾನೆ. ನಿಮ್ಮ ವಾಹನದ ಬಗ್ಗೆ ತಾಯಿಯವರ ಬಗ್ಗೆ ಗಮನವಿರಲಿ . ನಿಮ್ಮ ಸಹೋದರಿಯೊಬ್ಬರು ಸಮಸ್ಯೆಗೆ  ಸಿಲುಕಲಿದ್ದಾರೆ. ಭೂತಕಾಲದ ವಿಷಯ ಮರೆತು ವರ್ತಮಾನ ಭವಿಷ್ಯತ್ಕಾಲ ದ ಬಗ್ಗೆ ಚಿಂತನೆ ನಡೆಸಿರಿ.

ಕನ್ಯಾ

ದೇವರೇ ಇಲ್ಲ ಎಂದು ವಾದಮಾಡುತ್ತಾ ಬಂದು ಈಗ ಧಾರ್ಮಿಕ ಚಿಂತನೆಗೆ ಒಳಗಾಗಿದ್ದೀರಿ . ತುಂಬಾ ಸಂತೋಷದ ವಿಷಯ. ಕಷ್ಟ ಬಂದಾಗ ವೆಂಕಟರಮಣ .ಎಲ್ಲಿ ಪ್ರೀತಿ ವಿಶ್ವಾಸ ಇದೆಯೋ ಅಲ್ಲಿ ಸುಖ ಸಂಸಾರ ಇದೆ   .ಕರ್ತವ್ಯಪ್ರಜ್ನೆ ನಿಮ್ಮನ್ನು ಎಚ್ಚರಿಸಲಿದೆ. ನಿಮ್ಮ ಪುಣ್ಯವೋ ಏನೋ ಸರಿಯಾದ ಕಾಲಕ್ಕೆ ಸರಿಯಾದ ಮಾರ್ಗದರ್ಶನ ಸಿಗುತ್ತಿದೆ. ರಾಜಕೀಯದಲ್ಲಿ ವಿವಾದಕ್ಕೆ ಸಿಲುಕದಂತೆ ಎಚ್ಚರವಹಿಸಿ.

ತುಲಾ

ನಿಮ್ಮ ಎಲ್ಲ ವ್ಯವಹಾರದಲ್ಲಿ ಖರ್ಚು ವೆಚ್ಚಗಳು ಜಾರು ಹಾದಿಯಲ್ಲಿವೆ .ಯಾವುದೇ ವಿವಾದಕ್ಕೆ  ಸಿಲುಕದಿರಿ.ಸುಖ ಸ್ಥಾನದಲ್ಲಿ ಶನಿಯಿರುವುದರಿಂದ  ಆರ್ಥಿಕವಾಗಿ ನೀವು ತೆಗೆದುಕೊಳ್ಳುವ ತೀರ್ಮಾನ  ನೀವು ಓಡಿಸುವ ವಾಹನದ ವೇಗ ಎಲ್ಲವೂ ನಿಮ್ಮ ಹಿಡಿತದಲ್ಲಿರಬೇಕು ,ಕೌಟುಂಬಿಕವಾಗಿ ಸಂಬಂಧಗಳು ಅಂತರ ವಾಗದಂತೆ ಎಚ್ಚರವಹಿಸಬೇಕು.

ವೃಶ್ಚಿಕ

ಹಲವಾರು ವರ್ಷಗಳಿಂದ ಬಹಳ ಜವಾಬ್ದಾರಿಯಿಂದ ನನ್ನ ಸಂಸಾರ ಎಂದು ದುಡಿದ ನಿಮಗೆ ಈಗ ಮನಸ್ಸಿಗೆ ನೆಮ್ಮದಿ ಸಿಗುತ್ತಿದೆ. ಈಗ ಸಧ್ಯದಲ್ಲಿ ಶುಭಕಾರ್ಯಗಳ ತಯಾರಿ ಮನೆಯಲ್ಲಿ ಆರಂಭವಾಗಲಿದೆ. ನೀವು ಖರ್ಚು ಮಾಡುವ ಹಣಕ್ಕೆ ಸರಿಯಾದ ಲೆಕ್ಕಾಚಾರವಿರಲೇಬೇಕು ಸೆಪ್ಟೆಂಬರ್ 23 ತಾರೀಕಿನವರೆಗೆ ಏನಾದರೊಂದು ಮಾನಸಿಕ ಕಿರಿಕಿರಿಯಲ್ಲಿ ಆರೋಗ್ಯ ಸಮಸ್ಯೆಯಲ್ಲಿ ಸಿಲುಕಿ ಕಷ್ಟ ಪಡಲಿದ್ದೀರಿ  ನಾಗ ದೇವರ ಮೂಲ ಮಂತ್ರ ಪಠಣ ಒಂದೇ ಇದಕ್ಕೆ ಪರಿಹಾರವಾಗಿದೆ.

ಧನು

ಅಷ್ಟಮದಲ್ಲಿರುವ ಶುಕ್ರ ದೇಹದಲ್ಲಿರುವ ಶಕ್ತಿಯನ್ನು ಕುಂದಿಸುತ್ತಾ ಬರುತ್ತಿದೆ ಖರ್ಚು ವೆಚ್ಚ ಏರುತ್ತಿದೆ . ಬರುವ ಹಣ ಕಡಿಮೆಯಾಗುತ್ತಿದೆ  ಆತಂಕ ವಾಗಲಿದೆ. ಅಧ್ಯಾಪಕ ವೃತ್ತಿಯವರಾದರೆ ಅವರಲ್ಲಿ ಸುಧಾರಣೆ ಕಂಡು ಬರಲಿದೆ. ಸಾರ್ವಜನಿಕ ಮನ್ನಣೆ ಸಿಗಲಿದೆ  ವಿಧ್ಯಾರ್ಥಿಗಳು ಯಶಸ್ವಿಯಾಗಲಿದ್ದಾರೆ. ಧಾರ್ಮಿಕ ಪ್ರವೃತ್ತಿಯವರು ಬಹಳವಾಗಿ ಸಂಪ್ರದಾಯಗಳ ಹಿಂದೆಯೇ ಹೋಗುವುದನ್ನು ಬಿಟ್ಟರೆ ಒಳ್ಳೆಯದು .ಕೆಲವೊಮ್ಮೆ ವಾಸ್ತವಿಕವಾಗಿಯೂ ನಾವು ಯೋಚಿಸಬೇಕು.

ಮಕರ

ಜನ್ಮದಲ್ಲಿ ಶನಿಯಿದ್ದಾಗಲೂ ನಿಮ್ಮ ಎಲ್ಲ ವ್ಯವಹಾರಗಳು ಯಶಸ್ವಿಯಾ ಕಡೆಗೆ ಸಾಗಲಿದೆ   ಸಂಸಾರದಲ್ಲಿ ಸಂಶಯವನ್ನು ಬಿಟ್ಟು ನಂಬಿಕೆಯನ್ನು ಬೆಳಿಸಿ . ಪಿತ್ರಾರ್ಜಿತ ಆಸ್ತಿಯ ಬಗ್ಗೆ ಚರ್ಚೆ ಕಲಹ ಬೇಡ . ರವಿ ಮತ್ತು ಬುಧ ಅಷ್ಟಮದಲ್ಲಿ ಇರುವುದರಿಂದ ಮುಖ್ಯವಾಗಿ ಆರೋಗ್ಯದ ಕಡೆಗೆ ಪ್ರತಿಕ್ಷಣ ಗಮನವಿರಬೇಕು. .ಈಶ್ವರ ದೇವರ ಪ್ರಾರ್ಥನೆ ನಿತ್ಯ ಬೇಕು .

ಕುಂಭ

ನಮಗೆ ಮರ್ಯಾದೆ ಸಿಗದಿರುವ ಜಾಗದಲ್ಲಿ ನಮ್ಮ ಚಪ್ಪಲಿಯನ್ನು ಕೂಡಾ ಬಿಡಬಾರದು ಎಂಬ ಮಾತಿದೆ.  ನಿಮ್ಮ ಯಾವುದೇ ವ್ಯವಹಾರದಲ್ಲಿ ನಿಮ್ಮ ಸ್ವಾಭಿಮಾನಕ್ಕೆ ತೊಂದರೆ ಬಂದಾಗ ರಾಜಿ ಆಗಬೇಡಿ .ಅನೇಕ ಮೂಲಗಳಿಂದ ತಕ್ಕ ಮಟ್ಟಿಗೆ ಧನಾಗಮನ ಆಗುತ್ತಿರುತ್ತದೆಕರೋನ ದ ಕಾರಣ ನಮಗೆಲ್ಲ ತಿಳಿದೇ ಇದೆ .ಹಳೆಯ ಸಂಬಂಧಗಳೆಲ್ಲ ಪುನ: ಮತ್ತೆ ಚಿಗುರಲು ಆರಂಭ ವಾಗಲಿದೆ.

ಮೀನ

ಯಾವಾಗಲೂ ಯಾವುದೇ ವಿಷಯದಲ್ಲಿ ಈ ಕಾಲದಲ್ಲಿ ಅಪಾರ ನಂಬಿಕೆ ಇಟ್ಟುಕೊಳ್ಳಬಾರದು .ಆಗ ನಿರಾಶೆ ಆಗುವ ಸಾಧ್ಯತೆಯೂ ಇರುತ್ತದೆ .ಸಾಂಸಾರಿಕವಾಗಿ ಕೆಲವೊಮ್ಮೆ ಕೆಲವರನ್ನು ಏನು ಮಾಡಿದರೂ ಬದಲಾಯಿಸಲು ಸಾಧ್ಯವಿಲ್ಲ .ಉದಾಸೀನವೇ ಇದಕ್ಕೆ ಮದ್ದು..ಆಗ ಸಾಧ್ಯವಾದಷ್ಟು ಹೊಂದಾಣಿಕೆಯೇ ಇದಕ್ಕೆ ಪರಿಹಾರವಾಗಿದೆ. ಒಣಜಗಳ ಮುಜುಗರದ ಸನ್ನಿವೇಶ ದ ಅನುಭವ ನಿಮಗೆ ಈಗಾಗಲೇ ಅನುಭವಕ್ಕೆ ಬಂದು ಅಭ್ಯಾಸ ವಾಗಿರುತ್ತದೆ.

ಜ್ಯೋತಿಷ್ಯರು

ಕೆ.ಸುಬ್ರಹ್ಮಣ್ಯ ಆಚಾರ್ಯ

ಶ್ರೀ ಕಾರಿಂಜೇಶ್ವರ ಜ್ಯೋತಿಷ್ಯಾಲಯ

ಹಿರಿಯಂಗಡಿ, ಕಾರ್ಕಳ

ಸಂಪರ್ಕ : 97414 89529/ 80739 73603



































































































error: Content is protected !!
Scroll to Top