ಬೆಂಗಳೂರು, ಆ. 28 : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರು ಇಂದು “ಶಿಕ್ಷಕ ಮಿತ್ರ” ಮೊಬೈಲ್ ಆ್ಯಪ್, ವಿದ್ಯಾವಿನೀತ ಹಾಗೂ ಶಿಕ್ಷಣ ಯಾತ್ರೆ ಪುಸ್ತಕಗಳನ್ನು ಬಿಡುಗಡೆ ಮಾಡಿದರು. ಶಿಕ್ಷಕ ಮಿತ್ರ ಮೊಬೈಲ್ ಆ್ಯಪ್ ಮೂಲಕ ಶಿಕ್ಷಕರು ಕಚೇರಿ ಕೆಲಸಗಳಿಗೆ ಅನಾವಶ್ಯಕ ಅಲೆದಾಡುವುದನ್ನು ತಪ್ಪಿಸುತ್ತದೆ ಮತ್ತು ಈ ಶಿಕ್ಷಕ ಮಿತ್ರ ಮೊಬೈಲ್ ಆ್ಯಪ್ ಮೂಲಕವೇ ಸಾರ್ವತ್ರಿಕ ವರ್ಗಾವಣೆ ಅರ್ಜಿಗಳನ್ನು ಕೂಡ ಆನ್ ಲೈನ್ ಮೂಲಕವೇ ಸಲ್ಲಿಸಬಹುದು. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ ಸಚಿವ ಎಸ್.ಸುರೇಶ್ ಕುಮಾರ್ ಉಪಸ್ಥಿತರಿದ್ದರು.
ಶಿಕ್ಷಕರ ನೆರವಿಗೆ ಶಿಕ್ಷಕ ಮಿತ್ರ app































