ನಿತ್ಯ ಭವಿಷ್ಯ 27-08-2020

ಮೇಷ 

ಕುಜನ ಕಾರಣದಿಂದಾಗಿ “ತನು ಸೌಖ್ಯ ವಿವರ್ಜಿತ: ಎನ್ನುವಂತೆ ದೇಹಕ್ಲೇಶ  ಅಪವಾದಗಳೂ ಕಾಡಲಿವೆ.  ಸ್ವಯಂ ಸತ್ಯಪ್ರಿಯೋ ಧೀಮಾನ್ ಎಂಬಂತೆ ಶುಕ್ರ ಮನೆಯ ನೆಮ್ಮದಿಯನ್ನು ಹಾಳು ಮಾಡಲಿದ್ದಾನೆ.ರವಿಯಿಂದಾಗಿ ನೀವು ಆರೋಗ್ಯವಂತರೂ ಸ್ವಪ್ರಯತ್ನದಿಂದ ಉನ್ನತಿಯನ್ನು ಹೊಂದುವವರೂ ಆಗುತ್ತೀರಿ. ಗುರುವಿನಿಂದಾಗಿ ನೀವು ಭಾಗ್ಯವಂತರೂ, ವಿದೇಶ ಪ್ರಯಾಣ ಯೋಗವುಳ್ಳವರೂ ಆಗುತ್ತೀರಿ.

ವೃಷಭ

“ಸಿಂಹ ತುಲ್ಯ ಪರಾಕ್ರಮ: ಎಂಬಂತೆ ಶುಕ್ರನಿಂದಾಗಿ ನೀವು ಧೈರ್ಯವಂತರೂ ಸಹೋದರವರ್ಗದಿಂದ ಸಂಪತ್ತನ್ನು ಗಳಿಸುವವರೂ ಆಗುತ್ತೀರಿ .ರವಿಯಿಂದಾಗಿ ಚತುರ: ಶೀಲವಾನ್ ಮಾನೀ”ಎನ್ನುವಂತೆ ಚತುರರು ಗುಣವಂತರೂ ಆಗಿರುtತ್ತೀರಿ. ಗುರುವಿನಿಂದಾಗಿ ಒಟ್ಟಿಗೆ ಕೇತು ಇರುವುದರಿಂದ ದಾಂಪತ್ಯಕ್ಕೆ, ಆರ್ಥಿಕ ಸ್ಥಿತಿಗೆ  ತೊಂದರೆಯನ್ನು ಪಡೆಯುವವರಾಗುತ್ತೀರಿ. ವಿಷ್ಣು ಸಹಸ್ರನಾಮ  ಪಾರಾಯಣ ಮಾಡಿರಿ.

ಮಿಥುನ

ಜನ್ಮದಲ್ಲಿರುವ ರಾಹು “ಅಚಿರಾಯು:: ರೋಗಾನ್ವಿತ :ಎಂಬಂತೆ ಕಪಟ ಹಾಗೂ ಅನಾರೋಗ್ಯಕ್ಕೆ ಕಾರಣರಾಗುತ್ತೀರಿ. ರವಿಯಿಂದಾಗಿ ಸಹೋದರರ ಸುಖವುಳ್ಳವರೂ ಆಗುತ್ತೀರಿ..ಗುರು ಮತ್ತು ಕೇತುವಿನಿಂದಾಗಿ ಹೆಂಡತಿಗೆ ಆರೋಗ್ಯ ಸಮಸ್ಯೆ ಇರುತ್ತದೆ .ಹೊಂದಾಣಿಕೆಯಿಂದಲೇ ಮುಂದುವರಿಯಬೇಕು .ಈಶ್ವರ ಗಣಪತಿ ದೇವರನ್ನು ಸ್ಮರಿಸಲೆ ಬೇಕು .ಶನಿಯಿಂದಾಗಿ ಜಾತ:: :ದೀರ್ಘಾಯುಷ:  ಯುತ: ಉತ್ತಮ ಆಯುಷ್ಯ ಉಳ್ಳವರೂ ಆಗುತ್ತೀರಿ.

ಕರ್ಕಾಟಕ

ವಿದ್ಯಾ ಗುಣ ವಿಭೂಷಿತ: ಎನ್ನುವಂತೆ ಶುಕ್ರ ನಿಮಗೆ ತಾಯಿಯವರ ಸುಖ  ಮಾತ್ರ್ ವಂಶದ ಆಸ್ತಿ ನೀಡಲಿದ್ದಾನೆ .ರವಿಯಿಂದಾಗಿ “ಧನವಾನ್ ಗರ್ವ ಸಂಯುತ: ಎನ್ನುವಂತೆ ಶ್ರೀಮಂತಿಕೆ ಸ್ವಶಕ್ತಿಯಿಂದ ಹಣ ಸಂಪಾದನೆ ಮಾಡುವವರೂ ಆಗುತ್ತೀರಿ ಬುಧನೂ ಜೊತೆಯಲ್ಲಿ ಇರುವುದರಿಂದ ಉತ್ತಮ ಜ್ಮಾನ ವಂತರು ಆಗುವಿರಿ, ವೈರಮ್ ಸ್ವಜಾತಿ ಮಂಡಲಾತ್” ಎನ್ನುವಂತೆ ತನ್ನ ಜಾತಿ ಬಂಧುಗಳಲ್ಲಿ ವೈರತ್ವವೂ  ಅನ್ಯಾರೋದನೆ ಮೈತ್ರಿಯೂ ಏರ್ಪಡುತ್ತದೆ.

ಸಿಂಹ 

ರವಿಯು ಆರೋಗ್ಯವನ್ನು ಉನ್ನತಿಯನ್ನು ನೀಡಲಿದ್ದಾನೆ .ಗುರುವಿನೊಂದಿಗೆ ಕೇತು ಸೇರಿಕೊಂಡಿರುವುದರಿಂದ ಮಾನಸಿಕ ನೆಮ್ಮದಿ ಇರುವುದಿಲ್ಲ. ಚಾರಿತ್ರ್ಯಹೀನನಾಗುವುದು ಹಿತಶತ್ರುಗಳನ್ನು ಹೊಂದಿರುವುದು ಆಗಿರುತ್ತದೆ. ಕುಜ ಬಾಧಕಾಧಿಪತಿ ಆಗಿರುವುದರಿಂದ ತಂದೆಗೆ ಬೇಸರ ತರುವವನೂ ,ಪಿತೃ ವಂಶದ ಪಾಪ ಕೃತ್ಯವನ್ನು ಹೊಂದಿರುವವನೂ ಆಗಿರುತ್ತೀರಿ .

ಕನ್ಯಾ

ಶುಭ ಗ್ರಹನೊಂದಿಗೆ ಪಾಪ ಗ್ರಹ ಸೇರಿಕೊಂಡಾಗ ಅಶುಭ ಫಲವೇ ನಮಗೆ ಸಿಗುತ್ತದೆ. ಹಾಸಿಗೆ ಇದ್ದಷ್ಟೆ ಕಾಲು ಚಾಚಬೇಕು ಶನಿ ಯು  ಪಂಚಮದಲ್ಲಿ ಇರುವುದರಿಂದ ಮಕ್ಕಳ ವಿಷಯದಲ್ಲಿ ಯಾವುದಾದರೂ ರೀತಿಯಲ್ಲಿ ಕೊರಗು ಇರುತ್ತದೆ. ಕುಜ ನಿಮ್ಮ ಅದೃಷ್ಟಕ್ಕೆ ತೊಂದರೆ ತರುವವನಾಗಿರುವುದರಿಂದ ನಾಗಾರಾಧನೆ ಮಾಡುತ್ತಾ ಬರಬೇಕು.ರವಿ ಮತ್ತು ಬುಧ ಸತ್ಕರ್ಮಕ್ಕೆ ಹಣ ವ್ಯಯ ಮಾಡಿಸುತ್ತಾನೆ.

ತುಲಾ

ಶನಿಯನ್ನು ನಾವು ಪೂಜಿಸಿದಾಗ “ಚತುರ: ಶೀಲವಾನ್ ಮಾನೀ ” ಅಂದರೆ ಎಲ್ಲ ರೀತಿಯ ಭಾಗ್ಯವನ್ನು ಪಡೆದವರಾಗುತ್ತೇವೆ .ಇಲ್ಲವಾದರೆ ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳುತ್ತೇವೆ .ತಾಯಿಯವರ ಸುಖಹೀನರಾಗುತ್ತೇವೆ .ಹೆಚ್ಚಿನ ಖರ್ಚು ಎದುರಾಗಲಿದೆ . ದುಡಿಯುವ ದಾರಿಯನ್ನು ಕಂಡುಕೊಳ್ಳಿರಿ .ನೂತನ ಕಾರ್ಯಾರಂಭಕ್ಕೆ ಹೆಚ್ಚು ಆತುರ ಬೇಡ.

ವೃಶ್ಚಿಕ

ಹೊಸ ಚಿಂತನೆ ಹೊಸ ಕಾರ್ಯಗಳ ಆರಂಭಕ್ಕೆ ಅನುಕೂಲವಾದೀತು .ಅನಿರೀಕ್ಷಿತವಾಗಿ ಹೊಸ ಉದ್ಯೋಗಕ್ಕೆ ಹೋಗಲಿದ್ದೀರಿ.ಇದೊಂದು ಜೀವನ ಪರಿವರ್ತನೆಯ ಕಾಲ .ಎಲ್ಲಿಯೂ ದುಡುಕು ನಿರ್ಧಾರಗಳು ಬೇಡ.ಸತ್ಯವನ್ನು ಬಿಚ್ಚುಮಾತುಗಳಲ್ಲಿ ಹೇಳಲು ಹೋಗಿ ನಿಷ್ಟುರವಾದಿಗಳಾಗಬೇಡಿ.  ಆರೋಗ್ಯ ಭಾಗ್ಯಕ್ಕಾಗಿ ನಿಗದಿಪಡಿಸಿದ ಸಮಯದಲ್ಲಿ ಆಹಾರ ಸೇವನೆ ಅಗತ್ಯ.ನಿಮ್ಮೆದುರಿಗೆ ಸಂಭಾವಿತರೆಂದು ತೋರಿಸಿಕೊಡುವ ಹಿತಶತ್ರುಗಳಿಂದ ಮೋಸಹೋಗುವ ಪ್ರಸಂಗ ಬರಲಿದೆ .ಎಚ್ಚರವಿರಲಿ.

ಧನು

  ದೈವವು ಮುನಿಯಿತೆ ಅಯ್ಯೋ ವಿಧಿಯ ಆಟವೆ ಎಂಬೆಲ್ಲ ಕೈಲಾಗದ ಮಾತುಗಳು . ನೂತನ ಕಾರ್ಯಾರಂಭ ಈಗ ಬೇಡ. ಮಾತಿಗಿಂತ ಮೌನವೇ ಒಳ್ಳೆಯದು .ಧನಾಗಮನ  ವೇಗ ಗತಿಯನ್ನು ಕಳೆದುಕೊಂಡಿದೆ .ನೀವು ಉದ್ಯೋಗ ಮಾಡುವಲ್ಲಿ ಕಲಹ ಉದ್ವೇಗ ಬರಲಿದೆ. ಹಿತಶತ್ರುವಿನ ಸಮಯ ಸಾಧಕತನ ನಿಮ್ಮ ಗಮನಕ್ಕೆ ಬರಲೇ ಬೇಕು .ದೈಹಿಕವಾಗಿ ಆಗಾಗ ಆರೋಗ್ಯ ಕೊರತೆ ಕಾಣಿಸಲಿದೆ .ದೇವಿ ಆರಾಧನೆ ಮಾಡಿರಿ.

ಮಕರ

ಗುರು ಕೇತು ವ್ಯಯದಲ್ಲಿ ಇರುವುದು ಶನಿ ಜನ್ಮದಲ್ಲಿ ಇರುವುದು ನಿಮಗೆ ತಿಳಿದಿರಬೇಕು .ಬೆಂಕಿ ವಾಹನ ವಿದ್ಯುತ್  ಈ ವಿಷಯದಲ್ಲಿ ಅಂತರ ಕಾಯ್ದುಕೊಳ್ಳಿರಿ. ಸಾಮಾಜಿಕವಾಗಿ ನಿಮ್ಮ ಗೌರವಕ್ಕೆ ಚ್ಯುತಿ ಬರಲಿರುವುದರಿಂದ ಆದಷ್ಟು ಎಚ್ಚರಿಕೆವಹಿಸಬೇಕು.ಮನಬಂದಂತೆ ಮಾತನಾಡಬೇಡಿ .ಹಿತಶತ್ರುಗಳಿಂದಲೇ ಅಧಿಕವಾದ ತೊಂದರೆಗಳು ಎದುರಾಗಲಿದೆ.ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ.

ಕುಂಭ

ನವೆಂಬರ್ 20ರ ವರೆಗೆ ಗುರು ಲಾಭದಲ್ಲಿ ಇರುವುದರಿಂದ ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ಕಂಡು ಬರುವ ಕೊರತೆಗಳನ್ನು ಸಾಧ್ಯವಾದಷ್ಟು ಸರಿಪಡಿಸಿಕೊಳ್ಳಿರಿ. ಶನಿಯನ್ನು ಪೂಜಿಸಲು ಮರೆಯಬೇಡಿರಿ .ಗುರು ವ್ಯಯಕ್ಕೆ ಬರುವಾಗ ಮತ್ತು ರವಿ ಬುಧರ ಸ್ಥಾನ ಚಲನೆಯಿಂದ ದಾಂಪತ್ಯದಲ್ಲಿಯು ಕಿರಿಕಿರಿ ಬಂದಾಗ  ಸಹಿಸುವ ಶಕ್ತಿ ನಿಮಗೆ ಬರಬೇಕು.

ಮೀನ

ನಿಮ್ಮ ಅನೇಕ ಸಮಯದಿಂದ ನಿರೀಕ್ಷೆ ಮಾಡುತ್ತಾ ಬಂದ ಅನೇಕ ಕೆಲಸಗಳು ನೆರವೇರಲಿವೆ. ಅಡ್ಡಿ ಆತಂಕಗಳಿದ್ದರೂ ಸಹಿಸಿಕೊಳ್ಳುವ ಶಕ್ತಿ ಇತರರ ಸಹಕಾರ ನಿಮಗೆ ಸಿಗಲಿದೆ .ಹಿರಿಯರ ಮಾರ್ಗದರ್ಶನವನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಿರಿ. ಸಂಬಂಧಿಗಳ ಸಮಸ್ಯೆಗಳನ್ನು ಚಾತುರ್ಯದಿಂದ ಎದುರಿಸಿರಿ. ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರಿಂದ ಮೋಸ ಹೋಗಬೇಡಿ. ಯಾವುದಕ್ಕೂ ಮೋಸ ಹೋಗದೆ ಸಮಾಧಾನದಿಂದಿರಿ. 

ಜ್ಯೋತಿಷ್ಯರು

ಕೆ.ಸುಬ್ರಹ್ಮಣ್ಯ ಆಚಾರ್ಯ

ಶ್ರೀ ಕಾರಿಂಜೇಶ್ವರ ಜ್ಯೋತಿಷ್ಯಾಲಯ

ಹಿರಿಯಂಗಡಿ, ಕಾರ್ಕಳ

ಸಂಪರ್ಕ : 97414 89529/80739 73603



































































































error: Content is protected !!
Scroll to Top