ಕೃಷಿ ಪ್ರಶಸ್ತಿಗೆ ಅರ್ಜಿ ಆಹ್ವಾನ

0
ಸಾಂದರ್ಭಿಕ ಚಿತ್ರ

ಉಡುಪಿ, ಆ. 17: ಕೃಷಿಕರನ್ನು ಉತ್ತೇಜಿಸುವ ಸಲುವಾಗಿ  ಆತ್ಮ ನಿರ್ಭರ್‌ ಯೋಜನೆಯಡಿ ಜಿಲ್ಲಾ, ತಾಲೂಕು ಶ್ರೇಷ್ಠ  ಕೃಷಿಕ ಪ್ರಶಸ್ತಿ ಹಾಗೂ ಶ್ರೇಷ್ಠ ಆಸಕ್ತ ಕೃಷಿಕ ಗುಂಪು ಪ್ರಶಸ್ತಿಗೆ ಹನ್ನೆರಡು ವಿಭಾಗಗಳಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗಾಗಿ ಆಯ್ಕೆಯಾದ ಜಿಲ್ಲೆಯ 10 ಮಂದಿ ರೈತರಿಗೆ ತಲಾ 25000 ರೂ.  ಹಾಗೂ ತಾಲೂಕು ಮಟ್ಟದ ಚಟುವಟಿಕೆಗಳಡಿ ಆಯ್ಕೆಯಾದ ಆಯಾಯ ತಾಲೂಕಿನ 5 ಮಂದಿ ರೈತರಿಗೆ ತಲಾ 10,000 ರೂ. ನಗದು ವಿತರಿಸಲಾಗುವುದು.

ಕೃಷಿಯಲ್ಲಿ ಸಮಗ್ರ ಬೆಳೆ ಪದ್ಧತಿ, ಸಮಗ್ರ ನೀರು ನಿರ್ವಹಣೆ, ಸಾವಯವ ಕೃಷಿ ಅಭಿವೃದ್ಧಿ, ವೈಜ್ಞಾನಿಕ ಯಂತ್ರೋಪಕರಣಗಳ ಬಳಕೆ, ತೋಟಗಾರಿಕೆ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಮೀನುಗಾರಿಕೆ, ರೇಷ್ಮೆ ಬೇಸಾಯ, ಹೈಟೆಕ್ ತಂತ್ರಜ್ಞಾನ ಅಳವಡಿಕೆ, ಕೃಷಿ ಸಂಸ್ಕರಣೆ, ಹಾಗೂ ಅರಣ್ಯ ಕೃಷಿ, ಆಡು, ಕುರಿ, ಮೊಲ, ಇತ್ಯಾದಿ ಸಾಕಾಣಿಕೆ ಚಟುವಟಿಕೆಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದು.

ಜಿಲ್ಲೆಗಳ ಪ್ರಗತಿಪರ ರೈತರ ಗುಂಪುಗಳ ಸಾಧನೆಗಳನ್ನು ಗುರುತಿಸಿ ಪುರಸ್ಕರಿಸುವ ನಿಟ್ಟಿನಲ್ಲಿ ರೈತರ ಗುಂಪುಗಳಿ0ದ ಆಸಕ್ತ ಗುಂಪು ಪ್ರಶಸ್ತಿಗೆ ಗರಿಷ್ಟ 5 ರೈತರ ಗುಂಪುಗಳಿಗೆ ಪ್ರಶಸ್ತಿ ನೀಡಲು ಅವಕಾಶವಿದ್ದು, ತಲಾ 20,000  ರೂ. ನಗದು ಬಹುಮಾನವಿದೆ.
ಆಸಕ್ತ ರೈತರು ಅರ್ಜಿಗಳನ್ನು ಆಯಾಯ ತಾಲೂಕಿನ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಅಥವಾ ರೈತ ಸಂಪರ್ಕ ಕೇಂದ್ರದಲ್ಲಿ ಪಡೆದು ಭರ್ತಿ ಮಾಡಿ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸೆಪ್ಟೆಂಬರ್ 7 ರ ಸಂಜೆ 5.30 ರೊಳಗೆ ತಲುಪಿಸಬೇಕು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಲು ಜಂಟಿ ಕೃಷಿ ನಿರ್ದೇಶಕರ ಪ್ರಕಟನೆ ತಿಳಿಸಿದೆ.

 ---
Previous articleಉಡುಪಿ ಜಿಲ್ಲೆಯಲ್ಲಿಂದು 270 ಪಾಸಿಟಿವ್‌ : ಕಾರ್ಕಳದ ಮಹಿಳೆ ಸಾವು
Next articleಪಂಡಿತ್‌ ಜಸ್‌ರಾಜ್‌ ನಿಧನ  

LEAVE A REPLY

Please enter your comment!
Please enter your name here