
ಮುಂಬಯಿ,ಆ.17 : ಶಾಸ್ತ್ರೀಯ ಸಂಗೀತದ ದಿಗ್ಗಜ ಪ<ಡಿತ್ ಜಸ್ ರಾಜ್ ಅವರು ಇಂದು ಅಮೆರಿಕದಲ್ಲಿ ನಿಧನರಾಗಿದ್ದಾರೆ. ಅವರಿಗೆ 90ವರ್ಷ ಪ್ರಾಯವಾಗಿತ್ತು.
ಪದ್ಮಶ್ರೀ, ಪದ್ಮ ಭೂಷಣ ಮತ್ತು ಪದ್ಮ ವಿಭೂಷಣ ಹೀಗೆ ಮೂರೂ ಪದ್ಮ ಪ್ರಶಸ್ತಿಗಳು ಅವರ ಮುಡಿಯನ್ನು ಅಲಂಕರಿಸಿದ್ದವು. ತಂದೆಯಿಂದ ಆರಂಭಿಕ ಶಿಕ್ಷಣ ಪಡೆದ ಜಸ್‌ರಾಜ್ ಅವರು ಹದಿನಾಲ್ಕನೇ ವರ್ಷ ಪ್ರಾಯದಲ್ಲಿ ಸಂಗೀತ ಕಛೇರಿ ಕೊಡಲು ಆರಂಭಿಸಿದ್ದರು. ಮಂಗಳ ಮತ್ತು ಗುರು ಗ್ರಹಗಳ ನಡುವಿನ ಒಂದು ಸಣ್ಣ ಗ್ರಹಕ್ಕೆ ಪಂಡಿತ್ ಜಸ್‌ರಾಜ್ ಹೆಸರು ಇಡಲಾಗಿದೆ. ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಹಿತ ಅನೇಕ ಡಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.