ಅಯೋಧ್ಯಾ ರಾಮನಿಗೆ ಉಡುಪಿಯಿಂದ ಶಂಖನಾದ- ಬಿಜೆಪಿ ಯುವಮೋರ್ಚಾ

ಕಾರ್ಕಳ : ಐದು ಶತಮಾನಗಳಿಂದ ಲಕ್ಷಾಂತರ ಹಿಂದುಗಳ ಹೋರಾಟ, ತ್ಯಾಗ, ಬಲಿದಾನದಿಂದಾಗಿ ರಾಮನ ಜನ್ಮಸ್ಥಳ ಅಯೋಧ್ಯೇಯಲ್ಲಿ ಭವ್ಯ ಮಂದಿರ ನಿರ್ಮಾಣಕ್ಕೆ ಆ. 5ರಂದು ಭೂಮಿ ಪೂಜೆ ನಡೆಯಲಿದೆ. ಈ ಐತಿಹಾಸಿಕ ಕಾರ್ಯಕ್ರಮದ ಸಂದರ್ಭ ಪ್ರತಿ ಗ್ರಾಮದ ದೇವಸ್ಥಾನಗಳ ಆವರಣದಲ್ಲಿ ರಾಮನ ಹೆಸರಲ್ಲಿ ಅಶ್ವತ್ಥ ಗಿಡ ಅಥವಾ ಬಿಲ್ವಪತ್ರೆ ಗಿಡವನ್ನು ನೆಟ್ಟು ಶಂಖ, ಗಂಟೆ ಹಾಗೂ ಜಾಗಟೆ ನಾದ ಮೊಳಗಿಸಿ ಭಕ್ತಿತರ್ಪಣ ಅರ್ಪಿಸುವಂತೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಳ್ಳಲಾಗಿದೆ.
ಗೌರವಿಸಿ
ರಾಮಜನ್ಮ ಭೂಮಿ ಹೋರಾಟದಲ್ಲಿ ಕರಸೇವಕರಾಗಿ ಭಾಗವಹಿಸಿದ್ದ ರಾಮಭಕ್ತರಿಗೆ ಇದೇ ಸಂದರ್ಭ ಗೌರವ ಸಮರ್ಪಣೆ ಸಲ್ಲಿಸುವಂತೆಯೂ ಯುವ ಮೋರ್ಚಾ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಳ್ಳಲಾಗುವುದು ಎಂದು ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ವಿಖ್ಯಾತ್‌ ಶೆಟ್ಟಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
error: Content is protected !!
Scroll to Top