ದಿಲ್ಲಿ, ಆ. 2 : ಮಾರಕ ಕೊರೊನಾ ವೈರಸ್ ಈಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೂ ವಕ್ಕರಿಸಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತನಗೆ ಕೊರೊನಾ ಸೋಂಕು ತಗಲಿರುವುದನ್ನು ಸ್ವತಃ ಶಾ ಟ್ವೀಟ್ ಮಾಡಿ ಹೇಳಿಕೊಂಡಿದ್ದಾರೆ.
ಕೊರೊನಾ ಪೊಸಿಟಿವ್ ಆಗಿರುವ ಕಾರಣ ಆ.5 ರಂದು ಜಡೆಯಲಿರುವ ಅಯೋಧ್ಯೆಯ ರಾಮ ಮಂದಿರದ ಭೂಮಿ ಪೂಜೆಯಲ್ಲಿ ಭಾಗವಹಿಸುವ ಅವಕಾಶ ಶಾಗೆ ಸಿಗುವುದಿಲ್ಲ.