Wednesday, December 7, 2022
spot_img
Homeಕ್ರೀಡೆವನಿತೆಯರಿಗೂ ನಡೆಯಲಿದೆ ಐಪಿಎಲ್

ವನಿತೆಯರಿಗೂ ನಡೆಯಲಿದೆ ಐಪಿಎಲ್

ನವಂಬರ್‌ ನಲ್ಲಿ ನಡೆಯುವ ಸಾಧ್ಯತೆ

ದಿಲ್ಲಿ, ಆ. 2 : ಬಿಸಿಸಿಐ  ಪುರುಷರ ಐಪಿಲ್ ಕ್ರಿಕೆಟ್ ಲೀಗ್ ನಂತೆಯೇ ವನಿತೆಯರ  ಐಪಿಎಲ್ ಟೂರ್ನಿಯನ್ನೂ ಕೂಡ ಆಯೋಜನೆ ಮಾಡಲಿದೆ. ಈ ವಿಚಾರವನ್ನು ಸ್ವತಃ   ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಗಂಗೂಲಿ  ಮಹಿಳಾ ಐಪಿಎಲ್ ಅಥವಾ ಅದೇ ರೀತಿಯ ಚಾಲೆಂಜರ್ ಟೂರ್ನಿ ಆಯೋಜನೆಗೆ ಬಿಸಿಸಿಐ ಸಿದ್ಧವಾಗಿದೆ. ಈ ಬಗ್ಗೆ ನಾವು ಚರ್ಚೆ ಮಾಡುತ್ತಿದ್ದು, ಶೀಘ್ರದಲ್ಲೇ ಮಹಿಳಾ ಐಪಿಎಲ್ ಟೂರ್ನಿಯ ಕುರಿತು ವೇಳಾಪಟ್ಟಿ ಯೋಜಿಸುತ್ತೇವೆ ಎಂದು ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ಹೇಳಿದ್ದಾರೆ.

ಮಹಿಳಾ ಐಪಿಎಲ್ ಟೂರ್ನಿಯನ್ನು ನವೆಂಬರ್ 1-10 ಅವಧಿಯಲ್ಲಿ ಆಯೋಜಿಸುವ ಕುರಿತು ಬಿಸಿಸಿಐ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ. ಕೊರೊನಾ ಸಾಂಕ್ರಾಮಿಕದಿಂದಾಗಿ ಮನೆಯಲ್ಲಿರುವ ಆಟಗಾರ್ತಿಯರಿಗೆ ತರಬೇತಿ ಕ್ಯಾಂಪ್ ಆಯೋಜಿಸುವ ಕುರಿತೂ ಕೂಡ ಸೌರವ್ ಗಂಗೂಲಿ ನಿರ್ಧರಿಸಿದ್ದಾರೆ. ಈ ವರೆಗೂ ನಮ್ಮ ಯಾವುದೇ ಕ್ರಿಕೆಟಿಗರೂ ಸೋಂಕಿಗೆ ತುತ್ತಾಗಿಲ್ಲ. ಅಂತೆಯೇ ಪುರುಷ ಕ್ರಿಕೆಟಿಗರಿಗರಾಗಲಿ, ಮಹಿಳಾ ಆಟಗಾರ್ತಿಯರಾಗಿರಲಿ ಆಟಗಾರರ ಸುರಕ್ಷತೆ ಮುಖ್ಯ ಎಂದು ಗಂಗೂಲಿ ಹೇಳಿದ್ದಾರೆ.

 

LEAVE A REPLY

Please enter your comment!
Please enter your name here

Most Popular

error: Content is protected !!