ಎರ್ಪಪಾಡಿ-ದ್ವಿಚಕ್ರ ಅಪಘಾತ

ಕಾರ್ಕಳ : ಎರ್ಲಪಾಡಿ ಗ್ರಾಮದ ಕೊಡಂಗೆ ಜಡ್ಡು ಬಳಿ ಜು. 31ರಂದು ದ್ವಿಚಕ್ರ ಅಪಘಾತಕ್ಕೀಡಾಗಿ ಇದೇ ಗ್ರಾಮದ ಸುಜಾತ ಎಂ ಆಚಾರ್ಯ ( 36) ಗಾಯಗೊಂಡಿರುತ್ತಾರೆ. ಸುಜಾತ ಅವರು ತನ್ನ ಅಳಿಯ ಪ್ರಶಾಂತ್‌ ಅವರೊಂದಿಗೆ ಬೈಕ್‌ನಲ್ಲಿ ಸಹಸವಾರೆಯಾಗಿ ಸಾಗುತ್ತಿದ್ದ ಸಂದರ್ಭ ಅವಘಡ ಸಂಭವಿಸಿದೆ. ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದ್ದು, ಈ ಕುರಿತು ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

 error: Content is protected !!
Scroll to Top