ರಷ್ಯಾದ ಲಸಿಕೆ ಆ.10ಕ್ಕೆ ಬಿಡುಗಡೆ

ಮಾಸ್ಕೊ, ಆ.2:  ವಿಶ್ವದಲ್ಲಿ ಪ್ರಸ್ತುತ ಕೊರೊನಾ  ಪೀಡಿತ ದೇಶಗಳಲ್ಲಿ 4ನೆ ಸ್ಥಾನದಲ್ಲಿರುವ ರಷ್ಯಾ ಲಸಿಕೆ ಕಂಡುಹಿಡಿಯುವ ನಿಟ್ಟಿನಲ್ಲಿ ಭಾರಿ ಯಶಸ್ಸು ಕಂಡಿದೆ. ಕೊರೊನಾ ಲಸಿಕೆಯನ್ನು ಆಗಸ್ಟ್ 10ರೊಳಗೆ ಸಾರ್ವಜನಿಕವಾಗಿ ಬಿಡುಗಡೆ ಮಾಡಲು ರಷ್ಯಾ ಮುಂದಾಗಿದೆ.

ಈಗಾಗಲೇ ಸೇನಾ ಯೋಧರು ಹಾಗೂ ಸಾರ್ವಜನಿಕರ ಮೇಲೆ ಈ ಲಸಿಕೆ ಪ್ರಯೋಗ ನಡೆಸಿ ಅದು ಫಲ ನೀಡಿದೆ. ಮುಂದಿನ 15 ದಿನಗಳೊಳಗೆ ಲಸಿಕೆಯನ್ನು ಸಾರ್ವಜನಿಕರಿಗಾಗಿ ಬಿಡುಗಡೆ ಮಾಡಲಿದ್ದೇವೆ ಎಂದು  ರಷ್ಯಾದ  ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.

ಇದೇ ವೇಳೆ  ರಷ್ಯಾದ ಹಿರಿಯ ಅಧಿಕಾರಿಗಳು  ಆ.10ರ ವೇಳೆಗೆ ಲಸಿಕೆ ಸಿಗುವ ಸಾಧ್ಯತೆ ಇದೆ ಎಂದು ಹೇಳುತ್ತಿದ್ದಾರೆ.ಈ ಹಿಂದೆ ಅಮೆರಿಕ ಅಧ್ಯಕ್ಷ ಟ್ರಂಪ್ ರಷ್ಯಾಗಿಂತ ಮೊದಲು ನಾವು ಮದ್ದು ಕಂಡುಹಿಡಿದು ಅಚ್ಚರಿ ಮೂಡಿಸುತ್ತೇವೆ ಎಂದು ಹೇಳಿದ್ದರು.

 

error: Content is protected !!
Scroll to Top