ಮುಂಬಯಿ, ಆ.2: ಕೊರೊನಾ ಚಿಕಿತ್ಸೆಗಾಗಿ ನಗರದ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದ ಮೇರು ನಟ ಅಮಿತಾಭ್ ಬಚ್ಚನ್ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಆದರೆ ಅಮಿತಾಭ್ ಜೊತೆಗೆ ದಾಖಲಾಗಿದ್ದ ಅವರ ಪುತ್ರ ಅಭಿಷೇಕ್ ಬಚ್ಚನ್ ಇನ್ನೂ ಆಸ್ಪತ್ರೆಯಲ್ಲೇ ಇದ್ದಾರೆ.ಅಭಿಷೇಕ್ ಬಚ್ಚನ್ ಅವರೇ ಆಸ್ಪತ್ರೆಯಿಂದ ಟ್ವೀಟ್ ಮಾಡಿ ತಂದೆ ಬಿಡುಗಡೆಯಾಗಿರುವುದನ್ನು ಮತ್ತು ತಾನು ಇನ್ನೂ ಆಸ್ಪತ್ರೆಯಲ್ಲಿರುವುದನ್ನು ತಿಳಿಸಿದ್ದಾರೆ. ಐಶ್ವರ್ಯಾ ರೈ ಬಚ್ಚನ್ ಮತ್ತು ಆರಾಧ್ಯ ಬಚ್ಚನ್ ಕೆಲ ದಿನಗಳ ಹಿಂದೆಯಷ್ಟೇ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು.
ಅಮಿತಾಭ್ ವರದಿ ಇಂದು ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಅವರನ್ನು ಮನೆಗೆ ಕಳುಹಿಸಲಾಗಿದೆ. ಜಯಾ ಬಚ್ಚನ್ ಹೊರತುಪಡಿಸಿ ಬಚ್ಚನ್ ಪರಿವಾರದ ಎಲ್ಲರೂ ಕೊರೊನಾ ಸೋಂಕಿಗೆ ತುತ್ತಾಗಿದ್ದರು.