ಕಾರ್ಕಳ; ಜು. 31 : ಕೊರೊನಾ ವೈರಾಣು ಈಗ ಗ್ರಾಮೀಣ ಭಾಗಗಳಲ್ಲೂ ಹಾವಳಿ ಶುರುವಿಟ್ಟುಕೊಂಡಿದೆ. ಸುರಕ್ಷಿತವಾಗಿದ್ದ ಕಾರ್ಕಳ ತಾಲೂಕಿನಲ್ಲಿ ಅಲ್ಲಲ್ಲಿ ಕೊರೊನಾ ಪ್ರಕರಣಗಳಿರುವುದು ವರದಿಯಾಗುತ್ತಿದೆ.
ಇದೀಗ ತಾಲೂಕಿನ ಬೆಳ್ಮಣ್ ಪೇಟೆಯನ್ನು ಕೊರೊನಾ ಕಾರಣದಿಂದ ಭಾಗಶಃ ಸೀಲ್ ಡೌನ್ ಮಾಡಲಾಗಿದೆ. ಪೇಟೆಯಲ್ಲಿ 46 ಮನೆಗಳು, 88 ಅಂಗಡಿಗಳು ಸೀಲ್ ಡೌನ್ ಆಗಿವೆ. ಪೇಟೆಯ ಓರ್ವ ಖಾಸಗಿ ವೈದ್ಯರು, ಓರ್ವಖ ಹೊಟೀಲ್ ಮಾಲಕರು, ಓರ್ವ ಬೇಕರಿ ಮಾಲಕರು ಕೊರೊನಾ ಸೋಂಕಿತರಾಗಿದ್ದಾರೆ.