ಚೀನವೇ ವೈರಸ್‌ ಹರಡಿದ್ದು : ಮತ್ತೆ ಟ್ರಂಪ್‌ ಆರೋಪ

0

ವಾಷಿಂಗ್ಟನ್‌ : ಕೊರೊನಾ ಸೋಂಕಿಗೆ ಸಂಬಂಧಿಸಿ ಅವಕಾಶ ಸಿಕ್ಕಾಗಲೆಲ್ಲ ಚೀನ ಮೇಲೆ ದಾಳಿ ಮಾಡುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇದೀಗ ಚೀನ ಉದ್ದೇಶಪೂರ್ವಕ ಜಗತ್ತಿಗೆ ಕೊರೊನಾ ಹರಡಿದೆ ಎಂಬ  ಗಂಭೀರ ಅರೋಪವನ್ನು  ಮಾಡಿದ್ದಾರೆ.  

ಕೊರೊನಾದ ಉಗಮ ಸ್ಥಾನ ಚೀನ.ಅದು ಜಗತ್ತಿಗೆ ಹರಡದಂತೆ ಅವರು ತಡೆಯಬಹುದಿತ್ತು.ಆರಂಭದಲ್ಲಿ ತಡೆಯುವುದು ಸುಲಭವಿತ್ತು. ಆದರ ಅವರು ಹಾಗೇ ಮಾಡಲಿಲ್ಲ. ಜಗತ್ತಿಗೆ ವೈರಸ್‌ ಹರಡಬೇಕೆಂಬುದೇ ಅವರ ಉದ್ದೇಶವಾಗಿತ್ತು ಎಂದು ಚೀನದ ಮೇಲೆ ಗಂಭೀರವಾದ ಆರೋಪ ಹೊರಿಸಿದ್ದಾರೆ.

ಕೊರೊನಾ ಚೀನದಿ<ದ ಹರಡಿದೆ ಎನ್ನುವುದಕ್ಕೆ ನಮ್ಮ ಬಳಿ ಸಾಕ್ಷ್ಯಗಳಿವೆ.ಕೊರೊನಾ ಹರಡಿರುವುದರ ಹಿಂದೆ ಆರ್ಥಿಕವಾಗಿ ಜಗತ್ತನ್ನು ದುರ್ಬಲಗಪಳಿಸುವ ಹುನ್ನಾರವಿದೆ ಎಂದು ಆರೋಪಿಸಿದ್ದಾರೆ.

Previous articleಜು.30-31 : ರಾಜ್ಯದಲ್ಲಿ ಸಿಇಟಿ ಪರೀಕ್ಷೆ
Next articleಲಾಕ್‌ಡೌನ್‌ ತೆರವುಗೊಂಡ ಬಳಿಕ ಬೆಂಗಳೂರು ಜನಜೀವನ ಸಹಜತೆಯತ್ತ

LEAVE A REPLY

Please enter your comment!
Please enter your name here