2021ಕ್ಕೂ ಮೊದಲು ಕೊರೊನಾ ಲಸಿಕೆ ಇಲ್ಲ

ದಿಲ್ಲಿ: ಕೊರೊನಾ ವೈರಸ್‌ ಗೆ ಲಸಿಕೆ ಶೋಧ ಎನ್ನುವುದು ಇದೀಗ ಇನ್ನಷ್ಟು ಜಟಿಲವಾಗಲಿದೆ. ಆ.೧೫ರಂದು ಕೊವ್ಯಾಎಸಿನ್‌ ಎಂಬ ಲಸಿಕೆ ಬಿಡುಗಡೆಯಾಗುತ್ತದೆ ಎಂದು ನಿರೀಕ್ಷೆ ಇತ್ತಾದರೂ ಅದೀಗ ಹುಸಿಯಾಗುವ ಸಾಧ್ಯತೆ ಕಾಣಿಸಿದೆ.  ಕೇಂದ್ರ ಸಂಸದೀಯ ಸಮಿತಿ ಸಭೆಯಲ್ಲಿ ಅಧಿಕಾರಿಗಳು 2021ಕ್ಕೂ ಮೊದಲು ಲಸಿಕೆ ಲಭ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಇತ್ತೀಚೆಗಷ್ಟೆ   ಕೊರೋನಾಗೆ ಆಗಸ್ಟ್ 15ರೊಳಗೆ ಕೋವ್ಯಾಕ್ಸಿನ್ ಲಭ್ಯವಾಗಲಿದೆ ಎಂಬ ಶುಭಸುದ್ದಿ ಸಿಕ್ಕಿತ್ತು. ಕೇಂದ್ರ ಸರ್ಕಾರದ ವಿಜ್ಞಾನ, ತಂತ್ರಜ್ಞಾನ, ಪರಿಸರ ಮತ್ತು ಹವಾಮಾನ ಬದಲಾವಣೆ ಇಲಾಖೆಯ ಸಂಸದೀಯ ಸಮಿತಿ ಸಭೆಗೆಅಧಿಕಾರಿಗಳು ಇಂಥ ನಿರಾಶಾದಾಯಕ ಮಾಹಿತಿ ನೀಡಿದ್ದಾರೆ.

ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ನೇತೃತ್ವದಲ್ಲಿ ಜುಲೈ 10ರಂದು ನಡೆದ ಸಂಸದೀಯ ಸಮಿತಿ ಸಭೆಯಲ್ಲಿ  ಕೇಂದ್ರ ಸರ್ಕಾರದ ಅಧಿಕಾರಿಗಳು 2021ಕ್ಕೂ ಮೊದಲು ಕೊರೋನಾಗೆ ಯಾವುದೇ ರೀತಿಯ ಲಸಿಕೆ ಲಭ್ಯವಾಗುವುದಿಲ್ಲ. ಅದಕ್ಕೆ ಹೆಚ್ಚಿನ ಸಮಯ ಬೇಕಾಗುತ್ತದೆ ಎಂದು ತಿಳಿಸಿದ್ದಾರೆ.


ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್ ಸಹಯೋಗದಲ್ಲಿ‌ ಭಾರತ್ ಬಯೋಟೆಕ್ ಇಂಟರ್​​ನ್ಯಾಷನಲ್ ಲಿಮಿಟೆಡ್ ಈಗಾಗಲೇ ಕೋವ್ಯಾಕ್ಸಿನ್ ಸಂಶೋಧನಾ ಕಾರ್ಯದಲ್ಲಿ ತೊಡಗಿದೆ. ಭಾರತ್ ಬಯೋಟೆಕ್ ಇಂಟರ್‌ನ್ಯಾಶನಲ್ ಲಿಮಿಟೆಡ್ ಗೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ  1 ಮತ್ತು 2ನೇ ಹಂತದ ಕ್ಲಿನಿಕಲ್ ಮತ್ತು ಮಾನವ ಪ್ರಯೋಗ ನಡೆಸಲು ಅನುಮತಿ ನೀಡಿದೆ.

ಈ ನಡುವೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್ ಡೈರೆಕ್ಟರ್ ಜನರಲ್ ಡಾ. ಬಲರಾಮ್ ಭಾರ್ಗವ ಭಾರತ್ ಬಯೋಟೆಕ್ ಇಂಟರ್‌ನ್ಯಾಷನಲ್ ಲಿಮಿಟೆಡ್​ಗೆ‌ ಪತ್ರ ಬರೆದು‌ ಆಗಸ್ಟ್ 15ರೊಳಗೆ ಸಂಶೋಧನೆ ಪೂರ್ಣಗೊಳಿಸುವಂತೆ ಸೂಚಿಸಿದ್ದರು. ಆದರೆ, ಈ ವಿಷಯ ಭಾರತದಲ್ಲಿ ಆಗಸ್ಟ್ 15ರೊಳಗೆ ಕೊರೋನಾಗೆ ಕೋವ್ಯಾಕ್ಸಿನ್ ಲಸಿಕೆ ಲಭ್ಯ ಆಗೇಬಿಟ್ಟಿತು ಎಂದು ಬಿಂಬಿತವಾಗಿತ್ತು. ಆದರೀಗ ಕೇಂದ್ರ ಸಂಸದೀಯ ಸಮಿತಿ ಸಭೆಯಲ್ಲಿ ಅಧಿಕಾರಿಗಳು 2021ಕ್ಕೂ ಮೊದಲು ಲಸಿಕೆ ಲಭ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.





































error: Content is protected !!
Scroll to Top