ಕೊಡೆ ಇಟ್ಟು ವ್ಯಕ್ತಿಯೊಬ್ಬ ನೀರಿಗೆ ಹಾರಿದ ವ್ಯಕ್ತಿ
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಜೆಪ್ಪಿನಮೊಗರು ನೇತ್ರಾವತಿ ಸೇತುವೆಯ ಮೇಲೆ ಕೊಡೆ ಇಟ್ಟು ವ್ಯಕ್ತಿಯೊಬ್ಬರು ನೀರಿಗೆ ಹಾರಿದ ಘಟನೆ ಇಂದು ಸಂಭವಿಸಿದೆ.
ಮಂಗಳೂರಿನ ಉಳ್ಳಾಲದ ನೇತ್ರಾವತಿ ಸೇತುವೆ ಸುಸೈಡ್ ಪಾಯಿಂಟ್ ಆಗಿದ್ದು ಇಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆಯು ಹೆಚ್ಚುತ್ತಿದೆ.ಹಾರಿದ ವ್ಯಕ್ತಿಯ ವಿವರಗಳು ತಿಳಿದು ಬಂದಿಲ್ಲ.
ಉಳ್ಳಾಲ ಠಾಣಾ ಪೊಲೀಸರು ಕೊರೊನಾ ಸೋಂಕಿನಿಂದಾಗಿ ಕ್ವಾರಂಟೈನ್ ನಲ್ಲಿದ್ದಾರೆ. ನಗರದ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ.