10 ದಿನ ನವಿ ಮುಂಬಯಿ ಪೂರ್ಣ ಲಾಕ್‌ ಡೌನ್‌

ಮುಂಬಯಿ: ಕೊರೊನಾ ವೈರಸ್‌ ಅಂಕೆ ಮೀರಿ ಹರಡುತ್ತಿರುವ ಕಾರಣ  ವಿವಿಧ ನಗರಗಳು ಮತ್ತೊಮ್ಮು ಲಾಕ್‌ ಡೌನ್‌ ಮೊರೆ ಹೋಗುತ್ತಿವೆ. ಈ ನಿಟ್ಟಿನಲ್ಲಿ ನವಿ ಮುಂಬಯಿ ಮಹಾನಗರಪಾಲಿಕೆ ಜು.3 ರಿಂದ 13 ರ ತನಕ ಸಂಪೂರ್ಣ ಲಾಕ್‌ ಡೌನ್‌ ಜಾರಿಗೊಳಿಸಲಿದೆ.

ಅಗತ್ಯ ವಸ್ತುಗಳ ಸಾಗಾಟ ಹೊರತುಪಡಿಸಿ ಉಳಿದೆಲ್ಲ ಸಂಚಾರವನ್ನು ನಿರ್ಭಂಧಿಸಲಾಗಿದೆ.ಅಗತ್ಯ ಸೇವೆ ಹೊರತುಪಡಿಸಿ ಉಳಿದ ಅಂಗಡಿಗಳನ್ನು ಮುಚ್ಚಲು ನಗರಪಾಲಿಕೆ ಆದೇಶಿಸಿದೆ. ಹಾಲು ತರಕಾರಿ, ಪಡಿತರ ಸಾಮಾಗ್ರಿಗಳು ಬೆಳಗ್ಗೆ 9 ರಿಂದ ಸಂಜೆ 5 ರ ತನಕ ಸಿಗಲಿವೆ. ಸದ್ಯ ಅಗತ್ಯ ಸಿಬಂದಿಗಳ ಪ್ರಯಾಣಕ್ಕಾಗಿ ಪ್ರಾರಂಭಿಸಿರುವ ಲೋಕಲಿ ರೈಲು ಹೊರತುಪಡಿಸಿ ಬೇರೆ ಯಾವುದೇ ವಾಹನಗಳ ಓಡಾಟವಿರುವುದಿಲ್ಲ. ಟ್ಯಾಕ್ಸಿ, ರಿಕ್ಷಾಗಳೂ ಸಂಚರಿಸುವುದಿಲ್ಲ.  

error: Content is protected !!
Scroll to Top