ಕೊರೊನಾ ಲಸಿಕೆ ವಿತರಣೆಗೆ ಮೋದಿ 4 ಸೂತ್ರ

ದಿಲ್ಲಿ: ಕೊರೊನಾ ವೈರಸ್ ಗೆ ಲಸಿಕೆ ನೀಡಲು ಕೈಗೊಳ್ಳುತ್ತಿರುವ ಸಿದ್ಧತೆಗಳನ್ನು ಪರಿಶೀಲಿಸಲು ಮತ್ತು ಲಸಿಕೆ ಲಭ್ಯವಾಗುವ ಸಂದರ್ಭದಲ್ಲಿ ಕೈಗಪಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೀಸಲು ನಡೆದ ಸಭೆಯಲ್ಲಿ  ಪ್ರಧಾನಿ ಭಾಗವಹಿಸಿದರು.

ಸಮಯಕ್ಕೆ ಸರಿಯಾಗಿ ಲಸಿಕೆ ನೀಡುವುದನ್ನು ಖಚಿತಪಡಿಸಿಕೊಳ್ಳಲು ವಿವಿಧ ತಂತ್ರಜ್ಞಾನ ಸಾಧನಗಳ ಮೌಲ್ಯಮಾಪನ ಮಾಡಲು ಪಿಎಂಒ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಇಂತಹ ದೊಡ್ಡ ಪ್ರಮಾಣದ ಲಸಿಕೆ ಕಾರ್ಯಕ್ರಮದ ಬಗ್ಗೆ ವಿವರವಾದ ಯೋಜನೆಯನ್ನು ಕೂಡಲೇ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.ಸಭೆಯಲ್ಲಿ ಭಾರತೀಯ ಮತ್ತು ಜಾಗತಿಕ ಲಸಿಕೆ ಅಭಿವೃದ್ಧಿ ಪ್ರಯತ್ನಗಳ ಸ್ಥಿತಿಗತಿಯನ್ನು ಪರಿಶೀಲಿಸಲಾಯಿತು. ಕೊರೊನಾ ವಿರುದ್ಧದ ಜಾಗತಿಕ ಲಸಿಕೆ ಪ್ರಯತ್ನಗಳಲ್ಲಿ ಸಕ್ರಿಯ ಪಾತ್ರ ವಹಿಸುವ ಜಾಗತಿಕ ಸಮುದಾಯಕ್ಕೆ ಭಾರತದ ಜವಾಬ್ದಾರಿ ಮತ್ತು ಬದ್ಧತೆಯನ್ನು ಪ್ರಧಾನಿ ಒತ್ತಿಹೇಳಿದ್ದಾರೆ.

”ಭಾರತದ ವಿಶಾಲ ಮತ್ತು ವೈವಿಧ್ಯಮಯ ಜನಸಂಖ್ಯೆಗೆ ಲಸಿಕೆಯ ಪೂರೈಕೆ ಸರಪಳಿಗಳ ನಿರ್ವಹಣೆ, ಅಪಾಯದಲ್ಲಿರುವ ಜನಸಂಖ್ಯೆಯ ಆದ್ಯತೆ, ಪ್ರಕ್ರಿಯೆಯಲ್ಲಿ ತೊಡಗಿರುವ ವಿವಿಧ ಏಜೆನ್ಸಿಗಳ ನಡುವಿನ ಸಮನ್ವಯ ಮತ್ತು  ಈ ರಾಷ್ಟ್ರೀಯ ಪ್ರಯತ್ನದಲ್ಲಿ ಖಾಸಗಿ ವಲಯ ಮತ್ತು ನಾಗರಿಕ ಸಮಾಜದ ಪಾತ್ರಗಳ ಕುರಿತು ಪ್ರಧಾನಿ ಹೇಳಿದರು.ಈ ರಾಷ್ಟ್ರೀಯ ಪ್ರಯತ್ನದ ಅಡಿಪಾಯವನ್ನು ರೂಪಿಸುವ ನಾಲ್ಕು ಮಾರ್ಗದರ್ಶಿ ಸೂತ್ರಗಳನ್ನು ಪ್ರಧಾನಿ ಮೋದಿ ವಿವರಿಸಿದರು.

ಮೊದಲನೆಯದಾಗಿ  ದುರ್ಬಲ ಗುಂಪುಗಳನ್ನು ಗುರುತಿಸಿ ಅವರಿಗೆ ಆರಂಭಿಕ ಲಸಿಕೆಗೆಗೆ ಆದ್ಯತೆ ನೀಡಬೇಕು, ಉದಾಹರಣೆಗೆ ವೈದ್ಯರು, ದಾದಿಯರು, ಆರೋಗ್ಯ ಕಾರ್ಯಕರ್ತರು, ವೈದ್ಯಕೀಯೇತರ ಮುಂಚೂಣಿಯ ಕೊರೊನಾ ಯೋಧರು ಮತ್ತು ಆರ್ಥಿಕವಾಗಿ ದುರ್ಬಲ ಜನರಿಗೆ ದೊರೆಯುವಂತೆ ಮಾಡುವುದು.ಎರಡನೆಯದಾಗಿ, ಯಾರಾದರೂ, ಎಲ್ಲಿಯಾದರೂ ಲಸಿಕೆಯನ್ನು ಪದೆಯುಂತಾಗಬೇಕು, ಅಂದರೆ ಲಸಿಕೆ ಪಡೆಯಲು ಯಾವುದೇ ನಿವಾಸ ಸಂಬಂಧಿತ ನಿರ್ಬಂಧಗಳನ್ನು ವಿಧಿಸಕೂಡದು.

ಮೂರನೆಯದಾಗಿ, ಆ ಲಸಿಕೆ ಕೈಗೆಟುಕುವ ದರದಲ್ಲಿರಬೇಕು ಅಲ್ಲದೆ ಸಾರ್ವತ್ರಿಕವಾಗಿರಬೇಕು. ಅದು ಯಾವ ವ್ಯಕ್ತಿಯನ್ನು ಕೂಡ ಕೈಬಿಡುವಂತಿಲ್ಲ.ಮತ್ತು ನಾಲ್ಕನೆಯದಾಗಿ, ಉತ್ಪಾದನೆಯಿಂದ  ಪೂರೈಕೆವರೆಗಿನ ಸಂಪೂರ್ಣ ಪ್ರಕ್ರಿಯೆಯನ್ನು ತಂತ್ರಜ್ಞಾನದ ಬಳಕೆಯೊಂದಿಗೆ ಕ್ಲಪ್ತ ಸಮಯದಲ್ಲಿ ಮೇಲ್ವಿಚಾರಣೆ ಮಾಡಬೇಕು.ಇದಕ್ಕೂ ಮೊದಲು ಪಿಎಂ-ಕೇರ್ಸ್ (ಪ್ರಧಾನ ಮಂತ್ರಿಗಳ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಪರಿಹಾರ) ಫಂಡ್ ಟ್ರಸ್ಟ್ ಈ ಹಿಂದೆ ಕೊರೊನಾ ವೈರಸ್ ಲಸಿಕೆ ಅಭಿವೃದ್ಧಿಗೆ 100 ಕೋಟಿ ರೂ.ಗಳನ್ನು ಮೀಸಲಿಟ್ಟಿತ್ತು. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್ (ಐಸಿಎಂಆರ್) ಮತ್ತು ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್ಐವಿ) ಸಹಯೋಗದೊಂದಿಗೆ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಕೊರೊನಾಕ್ಕಾಗಿ ಲಸಿಕೆ ಕೋವಾಕ್ಸಿನ್ ಅನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದೆ.

error: Content is protected !!
Scroll to Top