• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಕಾರ್ಕಳ ಸುದ್ದಿ

ರಕ್ಷಾ ಬಂಧನದ ಪ್ರಯುಕ್ತ ಫೋಟೋ ಸ್ಪರ್ಧೆ

ಕಾರ್ಕಳ: ರಕ್ಷಾ ಬಂಧನದ ಪ್ರಯುಕ್ತ ರೋಟರಿ ಆನ್ಸ್‌ ಕ್ಲಬ್‌ ವತಿಯಿಂದ ಆ. 3ರಂದು ವಿಶೇಷ ಸ್ಪರ್ಧೆ ಏರ್ಪಡಿಸಲಾಗಿದೆ. ತಮ್ಮ ತಮ್ಮ ಸಹೋದರನಿಗೆ ರಾಖಿ ಕಟ್ಟುವ ಒಂದು ಸುಂದರವಾದ ಫೋಟೋವನ್ನು 7892038011 ನಂಬರ್‌ಗೆ ವ್ಯಾಟ್ಸಪ್‌ ಮಾಡಿದಲ್ಲಿ ಅದನ್ನು ರೋಟರಿ ಆನ್ಸ್‌ ಕ್ಲಬ್‌ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಲಾಗುವುದು. ಅತಿ ಹೆಚ್ಚು ಲೈಕ್ಸ್ ಪಡೆದ ಫೋಟೋಗಳಿಗೆ ಬಹುಮಾನ ನೀಡಲಾಗುವುದು. ಸ್ಪರ್ಧೆಗೆ ಯಾವುದೇ ವಯಸ್ಸಿನ ಮಿತಿಯಿಲ್ಲ. ಒಬ್ಬರು ಒಂದು ಫೋಟೋ ಮಾತ್ರ ಕಳುಹಿಸಬಹುದು ಎಂದು ರೋಟರಿ ಆನ್ಸ್‌ ಕ್ಲಬ್‌ […]

ರಕ್ಷಾ ಬಂಧನದ ಪ್ರಯುಕ್ತ ಫೋಟೋ ಸ್ಪರ್ಧೆ Read More »

ಅಪಘಾತ : ಸುಂದರ ರೈ ಮಂದಾರ ಪಾರು

ಮಂಗಳೂರು, ಆ. 2: ಬಂಟ್ವಾಳ  ತಾಲೂಕಿನ ಸೂರಿಕುಮೇರು ಸಮೀಪದ ದಾಸಕೋಡಿ ಎಂಬಲ್ಲಿ ಇಂದು ಮಧಾಹ್ನ ಕಾರು ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಇಬ್ಬರು ಕಲಾವಿದರು ಪವಾಡಸದೃಶವಾಗಿ ಪಾರಾಗಿದ್ದಾರೆ. ತುಳು ಚಲನಚಿತ್ರ ಹಾಸ್ಯ ನಟರಾದ ಸುಂದರ ರೈ ಮಂದಾರ ಮತ್ತು ಚಂದ್ರಹಾಸ ಅನಂತಾಡಿ ಅವರು ಕಾರಿನಲ್ಲಿ ಮಂಗಳೂರಿನಿಂದ ಮಾಣಿಯ ಕಡೆಗೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಅತಿಯಾದ ಮಳೆ ಸುರಿಯುತ್ತಿದ್ದ ಕಾರಣ ಚಾಲಕನಿಗೆ ರಸ್ತೆ ಸರಿಯಾಗಿ ಕಾಣದೆ ಅಪಘಾತ ಸಂಭವಿಸಿದೆಯೇ  ಅಥವಾ ಕಾರಿನ ತಾಂತ್ರಿಕ ದೋಷದಿಂದ

ಅಪಘಾತ : ಸುಂದರ ರೈ ಮಂದಾರ ಪಾರು Read More »

ಪತ್ರಕರ್ತ ಶರತ್‌ ಶೆಟ್ಟಿ ಅವರಿಗೆ ಶ್ರೀನಿವಾಸ್‌ ಭಟ್‌ ಪ್ರಶಸ್ತಿ

ಕಾರ್ಕಳ : ಪತ್ರಕರ್ತ, ನಾಟಕ ಕಲಾವಿದ ಶರತ್‌ ಶೆಟ್ಟಿ ಸಂಕಲಕರಿಯ ಅವರು ಯಕ್ಷಲಹರಿ ಸ್ಥಾಪಕಾಧ್ಯಕ್ಷ ದಿ. ಇ. ಶ್ರೀನಿವಾಸ್‌ ಭಟ್‌ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕಲಾವಿದರಿಗೆ ಪ್ರತಿವರ್ಷ ಕೊಡಮಾಡುವ ಶ್ರೀನಿವಾಸ್‌ ಭಟ್‌ ಪ್ರಶಸ್ತಿಗೆ ಈ ವರ್ಷ  ಶರತ್‌ ಅವರು ಆಯ್ಕೆಗೊಂಡಿದ್ದು, ಆ. 3ರಂದು ಮೂಡಬಿದ್ರೆಯ ಧನುಲಕ್ಷ್ಮೀ ನಿವಾಸದ ವೇದಿಕೆಯಲ್ಲಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ವಿಜಯ ಕಲಾವಿದರು ಕಿನ್ನಿಗೋಳಿ ತಂಡದ ಸಂಚಾಲಕರಾಗಿರುವ ಇವರು ರಾಜ್ಯ ಮಾತ್ರವಲ್ಲದೇ ದೇಶದ ವಿವಿಧೆಡೆ ನಾಟಕ ಪ್ರದರ್ಶನ ಮಾಡಿರುತ್ತಾರೆ. ಸಂಘ-ಸಂಸ್ಥೆಗಳಲ್ಲಿ, ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ

ಪತ್ರಕರ್ತ ಶರತ್‌ ಶೆಟ್ಟಿ ಅವರಿಗೆ ಶ್ರೀನಿವಾಸ್‌ ಭಟ್‌ ಪ್ರಶಸ್ತಿ Read More »

ಉಡುಪಿ :ಕೊರೊನಾ ಅಪ್‌ಡೇಟ್‌ 02-08-2020

ಪಾಸಿಟಿವ್‌ 182 ನೆಗೆಟಿವ್‌ 625 () ಆಸ್ಪತ್ರೆಯಿಂದ ಬಿಡುಗಡೆ 2696 ಸಕ್ರಿಯ ಪ್ರಕರಣ 1943 ಇದುವರೆಗೆ ಮೃತರಾದವರು 35 ಉಡುಪಿ ಇಂದಿನ ಪಾಸಿಟಿವ್‌ 75 ಕುಂದಾಪುರ 55 ಕಾರ್ಕಳ 51 ಪುರುಷರು 107 ಮಹಿಳೆಯರು 75

ಉಡುಪಿ :ಕೊರೊನಾ ಅಪ್‌ಡೇಟ್‌ 02-08-2020 Read More »

ನಂದಳಿಕೆ : ಕಾರು-ಬಸ್‌ ಢಿಕ್ಕಿ

ಬೆಳ್ಮಣ್‌, ಆ.2 : ನಂದಳಿಕೆ ಕ್ರಾಸ್‌ ನಲ್ಲಿಂದು ಬಸ್‌ ಮತ್ತು ಕಾರಿನ ನಡುವೆ ಢಿಕ್ಕಿ ಸಂಭವಿಸಿದೆ. ಕಾರಿನ ಮುಂಭಾಗ ಜಖಂಗೊಂಡಿದೆ.  ಯಾವುದೇ ಗಂಭೀರ ಹಾನಿ ಸಂಭವಿಸಿಲ್ಲ. ಕಾರು  ಮತ್ತು ಬಸ್ಸಿನಲ್ಲಿದ್ದವರು ಸುರಕ್ಷಿತವಾಗಿ ಪಾರಾಗಿದ್ದಾರೆ.

ನಂದಳಿಕೆ : ಕಾರು-ಬಸ್‌ ಢಿಕ್ಕಿ Read More »

ಅಯೋಧ್ಯಾ ರಾಮನಿಗೆ ಉಡುಪಿಯಿಂದ ಶಂಖನಾದ- ಬಿಜೆಪಿ ಯುವಮೋರ್ಚಾ

ಕಾರ್ಕಳ : ಐದು ಶತಮಾನಗಳಿಂದ ಲಕ್ಷಾಂತರ ಹಿಂದುಗಳ ಹೋರಾಟ, ತ್ಯಾಗ, ಬಲಿದಾನದಿಂದಾಗಿ ರಾಮನ ಜನ್ಮಸ್ಥಳ ಅಯೋಧ್ಯೇಯಲ್ಲಿ ಭವ್ಯ ಮಂದಿರ ನಿರ್ಮಾಣಕ್ಕೆ ಆ. 5ರಂದು ಭೂಮಿ ಪೂಜೆ ನಡೆಯಲಿದೆ. ಈ ಐತಿಹಾಸಿಕ ಕಾರ್ಯಕ್ರಮದ ಸಂದರ್ಭ ಪ್ರತಿ ಗ್ರಾಮದ ದೇವಸ್ಥಾನಗಳ ಆವರಣದಲ್ಲಿ ರಾಮನ ಹೆಸರಲ್ಲಿ ಅಶ್ವತ್ಥ ಗಿಡ ಅಥವಾ ಬಿಲ್ವಪತ್ರೆ ಗಿಡವನ್ನು ನೆಟ್ಟು ಶಂಖ, ಗಂಟೆ ಹಾಗೂ ಜಾಗಟೆ ನಾದ ಮೊಳಗಿಸಿ ಭಕ್ತಿತರ್ಪಣ ಅರ್ಪಿಸುವಂತೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಗೌರವಿಸಿ ರಾಮಜನ್ಮ ಭೂಮಿ ಹೋರಾಟದಲ್ಲಿ ಕರಸೇವಕರಾಗಿ

ಅಯೋಧ್ಯಾ ರಾಮನಿಗೆ ಉಡುಪಿಯಿಂದ ಶಂಖನಾದ- ಬಿಜೆಪಿ ಯುವಮೋರ್ಚಾ Read More »

ಎರ್ಪಪಾಡಿ-ದ್ವಿಚಕ್ರ ಅಪಘಾತ

ಕಾರ್ಕಳ : ಎರ್ಲಪಾಡಿ ಗ್ರಾಮದ ಕೊಡಂಗೆ ಜಡ್ಡು ಬಳಿ ಜು. 31ರಂದು ದ್ವಿಚಕ್ರ ಅಪಘಾತಕ್ಕೀಡಾಗಿ ಇದೇ ಗ್ರಾಮದ ಸುಜಾತ ಎಂ ಆಚಾರ್ಯ ( 36) ಗಾಯಗೊಂಡಿರುತ್ತಾರೆ. ಸುಜಾತ ಅವರು ತನ್ನ ಅಳಿಯ ಪ್ರಶಾಂತ್‌ ಅವರೊಂದಿಗೆ ಬೈಕ್‌ನಲ್ಲಿ ಸಹಸವಾರೆಯಾಗಿ ಸಾಗುತ್ತಿದ್ದ ಸಂದರ್ಭ ಅವಘಡ ಸಂಭವಿಸಿದೆ. ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದ್ದು, ಈ ಕುರಿತು ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.  

ಎರ್ಪಪಾಡಿ-ದ್ವಿಚಕ್ರ ಅಪಘಾತ Read More »

ಕೊರೊನಾ ಪಾಸಿಟಿವ್‌ ಬಾಧಿತರಿಗೆ ಚಿಕಿತ್ಸೆ ನೀಡಿರುವ ಡಾ. ಜ್ಯೋತ್ಸ್ನಾ ಅವರೊಂದಿಗೆ ವಿಶೇಷ ಸಂದರ್ಶನ

ಕಾರ್ಕಳ : ಕಾರ್ಕಳ ತಾಲೂಕಿನಲ್ಲಿ ಕೊರೊನಾ ಸಾಂಕ್ರಾಮಿಕ ಪಿಡುಗು ಕಾಲಿಡುತ್ತಿದ್ದೆಂತೆಯೇ ಸಾರ್ವಜನಿಕ ತಾ. ಆಸ್ಪತ್ರೆ ಸಕಲ ಸಿದ್ಧತೆಗಳೊಂದಿಗೆ ಅದನ್ನು ಎದುರಿಸಲು ಸನ್ನದ್ಧವಾಗಿತ್ತು. ಕೊರೊನಾ ಬಾಧಿತರಿಗೆ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಯಾವೊಂದು ಸಮಸ್ಯೆಯಾಗದ ರೀತಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು. ಇಲ್ಲಿನ ವೈದ್ಯರು, ಸಿಬ್ಬಂದಿ ಸೇವೆ ಪ್ರಶಂಸನೀಯ. ಕೋವಿಡ್‌ ವಾರ್ಡ್‌ನಲ್ಲಿ ಚಿಕಿತ್ಸೆ ನೀಡುವಲ್ಲಿ ಮುಂಚೂಣಿಯಲ್ಲಿ ನಿಂತು ಕಾರ್ಯನಿರ್ವಹಿಸಿದವರಲ್ಲಿ ಓರ್ವರಾದ ಡಾ. ಜ್ಯೋತ್ಸ್ನಾ  ಅವರೊಂದಿಗೆ ನ್ಯೂಸ್‌ ಕಾರ್ಕಳ. ಕಾಂ. ವಿಶೇಷ ಸಂದರ್ಶನ. ಈ ಸಂಚಿಕೆಯ ಪ್ರಾಯೋಕರು ಡಿ. ಆರ್.‌ ರಾಜು (ಅಧ್ಯಕ್ಷರು, ತಾ.

ಕೊರೊನಾ ಪಾಸಿಟಿವ್‌ ಬಾಧಿತರಿಗೆ ಚಿಕಿತ್ಸೆ ನೀಡಿರುವ ಡಾ. ಜ್ಯೋತ್ಸ್ನಾ ಅವರೊಂದಿಗೆ ವಿಶೇಷ ಸಂದರ್ಶನ Read More »

ಕೊರೊನಾ : ಉಡುಪಿಯಲ್ಲಿ 136 ಪೊಸಿಟಿವ್‌

ಉಡುಪಿ , ಆ. 1: ಉಡುಪಿ ಜಿಲ್ಲೆಯಲ್ಲಿಂದು 136 ಮಂದಿಯಲ್ಲಿ ಕೊರೊನಾ ಪೊಸಿಟಿವ್‌ ಪತ್ತೆಯಾಗಿದೆ. 716 ಮಂದಿಯಲ್ಲಿ ನೆಗೆಟಿವ್‌ ವರದಿ ಬಂದಿದೆ. ಈ  ವರೆಗೆ ಉಡುಪಿಯಲ್ಲಿ 4492 ಮಂದಿಯಲ್ಲಿ ಕೊರೊನಾ ಪೊಸಿಟಿವ್‌ ಬಂದಿದ್ದು, 2646 ಮಂದಿ ಸಂಪೂರ್ಣ  ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 1811 ಸಕ್ರಿಯ ಪ್ರಕರಣಗಳಿವೆ. ಈ ವರೆಗೆ 35 ಮಂದಿ ಕೊರೊನಾ ಸೋಂಕಿನಿಂದ ಮೃತರಾಗಿದ್ದಾರೆ.

ಕೊರೊನಾ : ಉಡುಪಿಯಲ್ಲಿ 136 ಪೊಸಿಟಿವ್‌ Read More »

ಕೊರೊನಾ ಹಗರಣ : ನ್ಯಾಯಾಂಗ ತನಿಖೆಗೆ ರಮಾನಾಥ ರೈ ಒತ್ತಾಯ

ಮಂಗಳೂರು, ಆ. 1:  ಕೊರೊನಾ ಕಿಟ್‌ಗಳ ಖರೀದಿಯಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಮಾಜಿ ಸಚಿವ ರಮಾನಾಥ  ರೈ ಒತ್ತಾಯಿಸಿದ್ದಾರೆ. ಮಡಿಕೇರಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ದುಪ್ಪಟ್ಟು ಹಣ ಕೊಟ್ಟು ಆರೋಗ್ಯ ಉಪಕರಣಗಳನ್ನು ಖರೀದಿಸಲಾಗಿದೆ. ಇದರ ಬಗ್ಗೆ ಧ್ವನಿ ಎತ್ತಿದ ಬಳಿಕ ಸಚಿವರುಗಳು ದ್ವಂದ್ವ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದರು. ಭ್ರಷ್ಟಾಚಾರದ ಬಗ್ಗೆ ಸುಪ್ರಿಂ ಕೋರ್ಟ್ ಛೀಮಾರಿ ಹಾಕಿದೆ. ಕೇಂದ್ರದಲ್ಲಿರುವುದು

ಕೊರೊನಾ ಹಗರಣ : ನ್ಯಾಯಾಂಗ ತನಿಖೆಗೆ ರಮಾನಾಥ ರೈ ಒತ್ತಾಯ Read More »

error: Content is protected !!
Scroll to Top