• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಸಂಪಾದಕೀಯ

ಸಂಪಾದಕೀಯ: ಟೋಕಿಯೋ ಒಲಿಂಪಿಕ್ಸ್ ಭಾರತಕ್ಕೆ ಕಭೀ ಖುಷಿ, ಕಭೀ ಗಂ!

ಈಗ ನಡೆಯುತ್ತಿರುವ ಟೋಕಿಯೋ ಒಲಿಂಪಿಕ್ಸ್ ಕೂಟದಲ್ಲಿ ಭಾರತವು ನಿರೀಕ್ಷೆ ಮಾಡಿದ್ದ ಫಲಿತಾಂಶ ಬರ್ತಾ ಇಲ್ಲ ಅನ್ನುವುದು ಗೋಡೆ ಬರಹದಷ್ಟೆ ಸತ್ಯ! ಭಾರತ ಸರಕಾರದ ಕ್ರೀಡಾ ಫೆಡರೇಶನ್ ಕಳೆದ ಐದು ವರ್ಷಗಳಲ್ಲಿ ಕ್ರೀಡಾಪಟುಗಳ ಆಯ್ಕೆ, ತರಬೇತಿಗೆ ಮತ್ತು ಟೋಕಿಯೋ ಪ್ರವಾಸಕ್ಕೆ ಖರ್ಚು ಮಾಡಿದ ಹಣ 1091.52 ಕೋಟಿ ರೂ. ಎಂದು ಭಾರತ ಸರಕಾರ ತಿಳಿಸಿದೆ. ಸಾಕಷ್ಟು ಗಾಳಿಸಿ ಗಾಳಿಸಿ ಭಾರತ ಆರಿಸಿದ್ದು ಬರೋಬ್ಬರಿ 127 ಕ್ರೀಡಾಪಟುಗಳನ್ನು. ಅದು 18 ಕ್ರೀಡಾ ವಿಭಾಗದಲ್ಲಿ! ಇದು ಹಿಂದಿನ ಒಲಿಂಪಿಕ್ಸ್ ಕೂಟಗಳಿಗೆ ಹೋಲಿಕೆ

ಸಂಪಾದಕೀಯ: ಟೋಕಿಯೋ ಒಲಿಂಪಿಕ್ಸ್ ಭಾರತಕ್ಕೆ ಕಭೀ ಖುಷಿ, ಕಭೀ ಗಂ! Read More »

ಸಂಪಾದಕೀಯ: ಸಂಪುಟ ರಚನೆ ಎಂಬ ಹಗ್ಗದ ಮೇಲಿನ ನಡಿಗೆ

ಕರ್ನಾಟಕದ ಮಟ್ಟಿಗೆ ಸಿಎಂ ಆಯ್ಕೆ ಎಷ್ಟು ಕಠಿಣವೊ ಅದಕ್ಕಿಂತ ಕಠಿಣ ಆದದ್ದು ಸಂಪುಟ ರಚನೆ. ಇದು ಯಾವುದೇ ಮುಖ್ಯಮಂತ್ರಿಗೂ ಹಗ್ಗದ ಮೇಲಿನ ನಡಿಗೆಯೇ ಸರಿ. ಕರ್ನಾಟಕದ ಇತಿಹಾಸವನ್ನು ನೋಡಿದಾಗ ಎಂಭತ್ತರ ದಶಕದವರೆಗೆ ರಾಜಕೀಯವು ಜಾತಿ ಆಧಾರಿತ ಆಗಿರಲಿಲ್ಲ. ಹಾಗೆ ಆಗಿದ್ದರೆ ಬ್ರಾಹ್ಮಣರಾದ ರಾಮಕೃಷ್ಣ ಹೆಗಡೆ, ಅತ್ಯಂತ ಕಡಿಮೆ ಮತದಾರರನ್ನು ಹೊಂದಿರುವ ಸಮುದಾಯದಿಂದ ಬಂದ ವೀರಪ್ಪ ಮೊಯ್ಲಿ ಅವರು ಸಿಎಂ ಆಗಲು ಸಾಧ್ಯವೇ ಇರಲಿಲ್ಲ. ಅವರೆಲ್ಲರೂ ಮುಖ್ಯಮಂತ್ರಿ ಆಗಿದ್ದು ತಮ್ಮ ಸಾಮರ್ಥ್ಯ, ಶಕ್ತಿಯಿಂದ ಹೊರತು ಸಮುದಾಯದ ಬೆಂಬಲದಿಂದ ಅಲ್ಲ.

ಸಂಪಾದಕೀಯ: ಸಂಪುಟ ರಚನೆ ಎಂಬ ಹಗ್ಗದ ಮೇಲಿನ ನಡಿಗೆ Read More »

ಸಂಪಾದಕೀಯ – ಕೊರೋನಾ ನಾವು ಮರೆತೇ ಬಿಟ್ಟೆವು, ಆದರೆ ಅದು ನಮ್ಮನ್ನು ಮರೆತಿಲ್ಲ!

ಪಬ್ಲಿಕ್ ಮೆಮೊರಿ ಭಾರಿ ಶಾರ್ಟ್ ಅನ್ನುವುದು ನಮ್ಮಲ್ಲಿ ತುಂಬಾ ಸಲ ಬಳಕೆಯಾದ ಮಾತು. ಕೊರೋನಾ ಮಟ್ಟಿಗೆ ಅದು ನೂರಕ್ಕೆ ನೂರು ಸತ್ಯ ಎಂದು ಸಾಬೀತಾಗಿದೆ. ಮೊದಲ ಬಾರಿಗೆ ಮಹಾ ಮಾರಿ ಭಾರತವನ್ನು ಅಪ್ಪಳಿಸಿದಾಗ ಇಡೀ ದೇಶದಲ್ಲಿ ಮೂರು ವಾರಗಳ ಲಾಕ್ ಡೌನ್ ಘೋಷಣೆ ಆಗಿತ್ತು. ಜನತೆ ಬೆಚ್ಚಿ ಬೀಳುವ ಸುದ್ದಿಗಳು ಪ್ರತಿ ದಿನ ಪ್ರಕಟ ಆಗುತ್ತಿದ್ದವು. ಒಂದು ಸಣ್ಣ ಮಗು ಪಾಸಿಟಿವ್ ಬಂದದ್ದಕ್ಕೆ ಇಡೀ ಬಂಟ್ವಾಳ ತಾಲೂಕಿನ ಒಂದು ಇಡೀ ಗ್ರಾಮವೇ ವಾರಗಟ್ಟಲೆ ಲಾಕ್ ಡೌನ್ ಆಯಿತು.

ಸಂಪಾದಕೀಯ – ಕೊರೋನಾ ನಾವು ಮರೆತೇ ಬಿಟ್ಟೆವು, ಆದರೆ ಅದು ನಮ್ಮನ್ನು ಮರೆತಿಲ್ಲ! Read More »

ಸಂಪಾದಕೀಯ- ಸವಾಲುಗಳ ಬೆಟ್ಟದ ಎದುರು ಬೊಮ್ಮಾಯಿ

ಹಲವು ದಿನಗಳ ರಾಜಕೀಯ ಅನಿಶ್ಚಿತತೆ ಸರಿದು ಹೊಸ ಮುಖ್ಯಮಂತ್ರಿ ಆಯ್ಕೆ ಆಗಿದ್ದಾರೆ. ಲಿಂಗಾಯತ ಸಮುದಾಯವನ್ನು ಮತ್ತು ಯಡಿಯೂರಪ್ಪ ಅವರನ್ನು ಖುಷಿ ಪಡಿಸುವ ಪ್ರಯತ್ನದಲ್ಲಿ ಬಿಜೆಪಿ ಹೈಕಮಾಂಡ್ ಸದ್ಯಕ್ಕಂತೂ ಗೆದ್ದಿದೆ. ಬಸವರಾಜ ಬೊಮ್ಮಾಯಿ ನೂತನ ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಅಲ್ಲಿಗೆ ಎಲ್ಲಾ ಸಮಸ್ಯೆಗಳು ಬಗೆಹರಿದವು ಎಂದು ನೆಮ್ಮದಿ ತಾಳುವಂತೆ ಇಲ್ಲ. ಬೆಟ್ಟದಷ್ಟು ಸವಾಲುಗಳು ನೂತನ ಸಿಎಂ ಮುಂದೆ ಇದೆ. ಮೇಲ್ನೋಟಕ್ಕೆ ಎಲ್ಲವೂ ಚೆನ್ನಾಗಿದೆ ಎಂದು ಕಾಣುತ್ತಿದ್ದರೂ ಹಲವು ಸೀನಿಯರ್ ಬಿಜೆಪಿ ನಾಯಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಮಾಜಿ

ಸಂಪಾದಕೀಯ- ಸವಾಲುಗಳ ಬೆಟ್ಟದ ಎದುರು ಬೊಮ್ಮಾಯಿ Read More »

ಸಂಪಾದಕೀಯ-ಕೋಲು ಮುರಿಯಲಿಲ್ಲ,ಹಾವು ಸಾಯಲಿಲ್ಲ

ನೀನು ಹೊಡೆದ ಹಾಗೆ ಮಾಡು, ನಾನು ಬಿದ್ದ ಹಾಗೆ ಮಾಡ್ತೇನೆ.ಇದು ಕರ್ನಾಟಕ ರಾಜಕಾರಣದ ಒಂದು ವಾಕ್ಯದ ಶರಾ ಅಂದ್ರೂ ತಪ್ಪಿಲ್ಲ! ಎರಡು ದಿನಗಳ ಅವಧಿಯಲ್ಲಿ ನಡೆದ ನಾಟಕೀಯ ವಿದ್ಯಮಾನವನ್ನು ಗಮನಿಸಿದಾಗ ಎಲ್ಲವೂ ಪೂರ್ವ ಯೋಜಿತ ಮತ್ತು ಬಿಜೆಪಿ ಹೈಕಮಾಂಡ್ ಸ್ಕ್ರಿಪ್ಟೆಡ್ ಎನ್ನುವುದು ಯಾರಿಗಾದರೂ ಅರ್ಥ ಆಗಬೇಕು. ಇದಕ್ಕೆ ತುಂಬಾ ದೊಡ್ಡ ರಾಜನೀತಿ ಶಾಸ್ತ್ರದ ಜ್ಞಾನ ಬೇಕಾಗಿಲ್ಲ. ಎರಡು ತಿಂಗಳ ಹಿಂದೆ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರನ್ನು ದಿಲ್ಲಿಗೆ ಕರೆಸಿ ರಾಜೀನಾಮೆ ಕೊಡುವಂತೆ ಕೇಳಿಕೊಂಡಿತು. ಅದಕ್ಕೆ ಅವರು ಕೊಟ್ಟ

ಸಂಪಾದಕೀಯ-ಕೋಲು ಮುರಿಯಲಿಲ್ಲ,ಹಾವು ಸಾಯಲಿಲ್ಲ Read More »

ಸಂಪಾದಕೀಯ: ಯಡಿಯೂರಪ್ಪ ನಿರ್ಗಮನ ಅನಿವಾರ್ಯವಾಗಿತ್ತೆ ?

ಬಿಜೆಪಿಯ ಮಾಸ್ ಲೀಡರ್, ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ಕೊಟ್ಟಿದ್ದಾರೆ. ಬಿಜೆಪಿ ಪಕ್ಷದ ಪಾಲಿಸಿ ಪ್ರಕಾರ ಅವರು ಇನ್ನು ಯಾವತ್ತೂ ಮುಖ್ಯಮಂತ್ರಿ ಆಗುವಂತಿಲ್ಲ. ಆದರೆ, ಪದಚ್ಯುತಿ ಮತ್ತು ಪದತ್ಯಾಗ ಗೊಂದಲ ಹಾಗೆಯೇ ಮುಂದುವರೆಯಲಿದೆ.2014ರಲ್ಲಿ ಅಧಿಕಾರಕ್ಕೆ ಬಂದ ಕೇಂದ್ರ ಬಿಜೆಪಿ ಸರಕಾರ ವಿಶೇಷವಾಗಿ ಮೋದಿ-ಶಾ ಜೋಡಿ ಹಿರಿಯರಾದ ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಜಸ್ವಂತ್ ಸಿಂಗ್ ಅವರನ್ನು ಅಧಿಕಾರದಿಂದ ದೂರ ಇಡಲು ಆರಿಸಿಕೊಂಡದ್ದು 75 ವರ್ಷಗಳ ಸೂತ್ರ. ವಯಸ್ಸಾದವರು ಕಿರಿಯರಿಗೆ ಅಧಿಕಾರವನ್ನು ಬಿಟ್ಟುಕೊಡಬೇಕು ಅನ್ನುವುದು ಉತ್ತಮ ಆಶಯ ಎನ್ನಲು ಅಡ್ಡಿಯಿಲ್ಲ.

ಸಂಪಾದಕೀಯ: ಯಡಿಯೂರಪ್ಪ ನಿರ್ಗಮನ ಅನಿವಾರ್ಯವಾಗಿತ್ತೆ ? Read More »

ಕಾರ್ಕಳದ ನೂತನ ಬ್ರಾಂಡ್ – ಬಿಳಿ ಬೆಂಡೆ

ಕಾರ್ಕಳ : ಬೇರೆ ಬೇರೆ ಊರುಗಳಿಗೆ ಬೇರೆ ಬೇರೆ ಕೃಷಿಯ ಬ್ರಾಂಡ್‌ಗಳಿವೆ. ಉದಾಹರಣೆಗೆ ಮಟ್ಟು ಗುಳ್ಳ, ಶಂಕರಪೂರ ಮಲ್ಲಿಗೆ, ನಂಜನಗೂಡು ಪುಟ್ಟ ಬಾಳೆ, ತಿಪಟೂರು ತೆಂಗಿನಕಾಯಿ, ಬೆಳಗಾಂ ಹತ್ತಿ, ಮಂಡ್ಯ ಕಬ್ಬು ಇತ್ಯಾದಿ. ಆದರೆ ನಮ್ಮ ಕಾರ್ಕಳಕ್ಕೆ ಏನು ? ಈ ಪ್ರಶ್ನೆಗೆ ಉತ್ತರ ನೀಡುವ ನಿಟ್ಟಿನಲ್ಲಿ ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ಮುಂದಾಗಿದ್ದಾರೆ. ಅದೇ ಕಾರ್ಲ ಕಜೆ ಮತ್ತು ಬಿಳಿ ಬೆಂಡೆ. 6 ತಿಂಗಳ ಹಿಂದೆ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರನ್ನು ಕಾರ್ಕಳಕ್ಕೆ

ಕಾರ್ಕಳದ ನೂತನ ಬ್ರಾಂಡ್ – ಬಿಳಿ ಬೆಂಡೆ Read More »

ಸಂಪಾದಕೀಯ-ಜಾರ್ಜ್ ಫರ್ನಾಂಡಿಸ್ ಅವರನ್ನು ನೆನೆದು

ಇಂದು ಕೇಂದ್ರದ ಮಾಜಿ ರಕ್ಷಣಾ ಮಂತ್ರಿ ಜಾರ್ಜ್ ಫರ್ನಾಂಡಿಸ್ ಅವರ ಹುಟ್ಟಿದ ಹಬ್ಬ. ಅವರ ಕೊಡುಗೆಯನ್ನು ನಾವು ಮರೆಯುವ ಹಾಗೆಯೇ ಇಲ್ಲ. ಅವರು ರೈಲ್ವೆ ಮಂತ್ರಿ ಆಗಿ ಉಡುಪಿಯಲ್ಲಿ ಕೊಂಕಣ ರೈಲ್ವೇ ನಿಲ್ದಾಣಕ್ಕೆ ಶಂಕು ಸ್ಥಾಪನೆ ಮಾಡಿದಾಗ ಹೇಳಿದ ಮಾತುಗಳು – ನಾನು ಸಚಿವನಾಗಿ ಇರಲಿ, ಇಲ್ಲದಿರಲಿ. ಎರಡು ವರ್ಷಗಳ ಒಳಗೆ ಮಂಗಳೂರು ಮುಂಬೈ ನಡುವೆ ರೈಲು ಓಡುವುದನ್ನು ನೀವು ನೋಡುತ್ತೀರಿ. ಅವರು ಹೇಳಿದ್ದು ಮಾತ್ರವಲ್ಲ, ಈ. ಶ್ರೀಧರನ್ ಎಂಬ ಇಂಜಿನಿಯರ್ ಎಂಬ ಇಂಜಿನಿಯರ್ ಮತ್ತು ಅವರ

ಸಂಪಾದಕೀಯ-ಜಾರ್ಜ್ ಫರ್ನಾಂಡಿಸ್ ಅವರನ್ನು ನೆನೆದು Read More »

ಸಂಪಾದಕೀಯ : ನಮಗೇಕೆ ಇದು ಸಾಧ್ಯವಾಗುವುದಿಲ್ಲ?

ಉತ್ತರ ಕೊರಿಯಾದಲ್ಲಿ ಕೂಡ ಕೋರೊನಾ ನಮ್ಮ ಹಾಗೆ ತೊಂದರೆ ಕೊಟ್ಟಿತ್ತು. ಆದರೆ ಅವರು ಈ ವರೆಗೆ ಲಾಕ್ ಡೌನ್ ಮಾಡಿಲ್ಲ! ಯಾವ ಕಾರ್ಖಾನೆ ಕೂಡ ಮುಚ್ಚಿಲ್ಲ! ಜನರು ನಿರಾತಂಕವಾಗಿ ತಮ್ಮ ಕೆಲ್ಸ ಮಾಡಿಕೊಂಡು ಇದ್ದಾರೆ! ಶಾಲೆ ಕಾಲೇಜುಗಳು ಬಂದ್ ಆಗಿಲ್ಲ! ಯಾವ ಕರ್ಫ್ಯೂ ಕೂಡ ಹೇರಿಲ್ಲ! ಆಶ್ಚರ್ಯ ಆಗ್ತಾ ಇದೆಯಾ? ಮುಂದೆ ಓದಿ. ಅಲ್ಲಿ ಕೊರೋನಾ ಮೊದಲ ಕೇಸ್ ಬರಲು ಆರಂಭವಾದ ಕೂಡಲೇ ಸರಕಾರ ಎಚ್ಚೆತ್ತುಕೊಂಡಿತು. ಜನರನ್ನು ತುಂಬಾ ನಾಜೂಕಾಗಿ ಎಜುಕೇಟ್ ಮಾಡಿತು. ಎಲ್ಲಾ ಪತ್ರಿಕೆ, ಟಿವಿ

ಸಂಪಾದಕೀಯ : ನಮಗೇಕೆ ಇದು ಸಾಧ್ಯವಾಗುವುದಿಲ್ಲ? Read More »

ಸಂಪಾದಕೀಯ – ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆ ಹೀಗೂ ನಡೆಸಬಹುದು

ಶಿಕ್ಷಣ ಕ್ಷೇತ್ರದಲ್ಲಿ ಇಂದು ಕಣ್ಣಿಗೆ ಬಟ್ಟೆ ಕಟ್ಟಿ ಕತ್ತಲೆಯ ಕೋಣೆಯಲ್ಲಿ ಬಿಟ್ಟ ಹಾಗಿದೆ ಪರಿಸ್ಥಿತಿ. ಒಂದೂವರೆ ವರ್ಷದ ಅವಧಿಯಲ್ಲಿ ಕೊರೋನಾ ಕಾರಣಕ್ಕೆ ಸರಿಯಾದ ಪಾಠಗಳು ನಡೆದಿಲ್ಲ. ವಿದ್ಯಾಗಮ, ಆನ್ಲೈನ್ ಕ್ಲಾಸುಗಳು ತಕ್ಕ ಮಟ್ಟಿಗೆ ನಡೆದರೂ ಅವುಗಳು ವಿದ್ಯಾರ್ಥಿಗಳನ್ನು ಪೂರ್ಣವಾಗಿ ತಲುಪಿಲ್ಲ ಎಂದು ನಮಗೆಲ್ಲ ಗೊತ್ತಿದೆ. ಕಳೆದ ಜನವರಿ ತಿಂಗಳಿಂದ ಏಪ್ರಿಲ್ ತನಕ ಆಫ್ಲೈನ್ ತರಗತಿಗಳು ನಡೆದಿವೆ. ಮಕ್ಕಳು ತಕ್ಕ ಮಟ್ಟಿಗೆ ಪರೀಕ್ಷೆಗೆ ಮಾನಸಿಕವಾಗಿ ತಯಾರಿ ಆಗಿದ್ದರು. ಆದರೆ ನಂತರ ಲಾಕ್ ಡೌನ್ ಘೋಷಣೆ ಆಗಿ ಮತ್ತೆ ಶಿಕ್ಷಣದ

ಸಂಪಾದಕೀಯ – ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆ ಹೀಗೂ ನಡೆಸಬಹುದು Read More »

error: Content is protected !!
Scroll to Top