ಸಂಪಾದಕೀಯ

ಸಂಪಾದಕೀಯ- ರಾಜಕೀಯದಲ್ಲೂ ಸಿಂಗಂ ಆಗಿ ಮೆರೆಯಲಿ ಅಣ್ಣಾಮಲೈ

   ಪೊಲೀಸ್‌ ಇಲಾಖೆಯಲ್ಲಿ ದಕ್ಷತೆ ಮತ್ತು ನಿರ್ಭೀತಿಯಿಂದ ಕಾರ್ಯವೆಸಗಿ ಹೆಸರುವಾಸಿಯಾಗಿದ್ದ  ಯುವ ಐಪಿಎಸ್‌ ಅಧಿಕಾರಿ ಅಣ್ಣಾಮಲೈ ಅವರು ಬಿಜೆಪಿಗೆ ಸೇರುವುದರೊಂದಿಗೆ  ಅವರ ರಾಜಕೀಯ ನಿಲುವುಗಳ ಕುರಿತಾಗಿ ಹರಡಿದ್ದ ಊಹಾಪೋಹಗಳಿಗೆ ತೆರೆ ಬಿದ್ದಂತಾಗಿದೆ. ಪೊಲೀಸ್‌  ಇಲಾಖೆ ಮಾತ್ರವಲ್ಲ ಜನಸಾಮಾನ್ಯರಿಗೂ ಅಣ್ಣಾಮಲೈ ಎಂಬ ಹೆಸರು ಮಿಂಚು ಹರಿಸುತ್ತದೆ. ಇದಕ್ಕೆ ಕಾರಣ ಅವರು ಪೊಲೀಸ್‌ ಇಲಾಖೆಯ ಸೇವೆಯಲ್ಲಿರುವಾಗ  ತೋರಿಸಿದ ವೃತ್ತಿ ನಿಷ್ಠೆ ಮತ್ತು ದಿಟ್ಟತನ. ಯಾವುದೇ ರಾಜಕೀಯ ಲಾಬಿ, ಒತ್ತಡಗಳಿಗೆ ಮಣಿಯದೆ ತನ್ನ ಕರ್ತವ್ಯವನ್ನು ನಿಷ್ಠೆಯಿಂದ ಮಾಡುವ ಮೂಲಕ ಅವರು ಪೊಲೀಸ್‌ […]

ಸಂಪಾದಕೀಯ- ರಾಜಕೀಯದಲ್ಲೂ ಸಿಂಗಂ ಆಗಿ ಮೆರೆಯಲಿ ಅಣ್ಣಾಮಲೈ Read More »

ಸಂಪಾದಕೀಯ- ಗಲಭೆ ಆರೋಪಿಗಳಿಂದಲೇ ನಷ್ಟ ವಸೂಲು ಮಾಡುವ ಮೊದಲು…

ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ಆ. 11ರಂದು ನಡೆದ ಹಿಂಸಾಚಾರದ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಆಗಿರುವ ನಷ್ಟವನ್ನು ಗಲಭೆ ಮಾಡಿದ ಆರೋಪಿಗಳಿಂದಲೇ ವಸೂಲು ಮಾಡಲು ಸರಕಾರ ನಿರ್ಧರಿಸಿರುವುದು  ಸ್ವಾಗತಾರ್ಹ ನಡೆ. ಈಗೀಗ ಪ್ರತಿಭಟನೆ ಸಂದರ್ಭದಲ್ಲಿ ಸಾರ್ವಜನಿಕ ಸೊತ್ತುಗಳನ್ನು ಒಡೆದು  ಹಾಕುವುದು, ಸುಟ್ಟು ಹಾಕುವುದೆಲ್ಲ ಒಂದು ಪರಿಪಾಠವೇ ಆಗಿದೆ. ಒಂದಷ್ಟು ವಾಹನಗಳ ಗಾಜು ಮುರಿಯದಿದ್ದರೆ, ಅಂಗಡಿಗಳಿಗೆ ಕಲ್ಲು ಎಸೆಯದಿದ್ದರೆ, ಟಯರ್‌ ಸುಡದಿದ್ದರೆ… ಪ್ರತಿಭಟನೆ ತೀವ್ರವಾಗುವುದಿಲ್ಲ ಎಂಬ ಕಲ್ಪನೆ ಪ್ರತಿಭಟನೆಕಾರರಲ್ಲಿದೆ. ಹೀಗೆ ಸೊತ್ತು ನಾಶ ಮಾಡುವವರಿಗೆ ತಕ್ಕ

ಸಂಪಾದಕೀಯ- ಗಲಭೆ ಆರೋಪಿಗಳಿಂದಲೇ ನಷ್ಟ ವಸೂಲು ಮಾಡುವ ಮೊದಲು… Read More »

ಸಂಪಾದಕೀಯ – ರೈನಾ ರೈಸಲು ಇನ್ನೂ ಬಾಕಿಯಿತ್ತು…

ಧೋನಿಯ ಗೆಳೆತನಕ್ಕಾಗಿ ಆತನೊಂದಿಗೆ ನಿವೃತ್ತಿ ಘೋಷಣೆ ಮಾಡಿದ  ಸುರೇಶ್‌ ರೈನಾ ಅವಸರದ ನಿರ್ಧಾರ ಮಾಡಿದರೋ ಎಂದನಿಸುತ್ತಿದೆ. ಅವರಿಗಿನ್ನೂ 33 ವರ್ಷ. ಮಧ್ಯಮ ಕ್ರಮಾಂಕದ ಅತ್ಯಂತ ಆಕ್ರಮಣಕಾರಿ ಎಡಗೈ ಆಟಗಾರ, ಕ್ರಿಕಟಿನ ಮೂರೂ ಆವೃತಿಗಳಲ್ಲಿ ಶತಕ ಬಾರಿಸಿದ ಏಕೈಕ ಭಾರತೀಯ. ಅತಿ ಹೆಚ್ಚು ಏಕದಿನ ಸಿಕ್ಸರ್‌ ಬಾರಿಸಿದ ಭಾರತೀಯ.ಏಕದಿನ ಪಂದ್ಯಗಳಲ್ಲಿ 5,500ಕ್ಕೂ ಹೆಚ್ಚು ರನ್‌ ಗಳನ್ನು ಪೇರಿಸಿದ   ಒಬ್ಬ ಬಲಿಷ್ಠ ಆಲ್‌ ರೌಂಡರ್‌, ಒಬ್ಬ ಉತ್ತಮ ಆಫ್ ಸ್ಪಿನ್ನರ್‌ ಮತ್ತು ಜಗತ್ತಿನ ಅತ್ಯತ್ತಮ ಪೀಲ್ಡರ್‌ಗಳಲ್ಲಿ ಒಬ್ಬರಾಗಿದ್ದ ಸುರೇಶ್‌ ರೈನಾ 

ಸಂಪಾದಕೀಯ – ರೈನಾ ರೈಸಲು ಇನ್ನೂ ಬಾಕಿಯಿತ್ತು… Read More »

ಸಂಪಾದಕೀಯ – ಒಂದು ವಿದಾಯ ಪಂದ್ಯಕ್ಕೆ ಧೋನಿ ಅರ್ಹರಾಗಿರಲಿಲ್ಲವೇ?

ಧೋನಿ ಪಾಲಿಗೆ ಅದು ಒಂದು ಮಾಮೂಲು ಇನ್‌ಸ್ಟಾಗ್ರಾಂ ಪೋಸ್ಟ್‌. ಆದರೆ  ಆ ಪೋಸ್ಟ್‌ ಇಡೀ ಕ್ರಿಕೆಟ್‌ ಜಗತ್ತು ಒಂದು ಗಳಿಗೆ ದಂಗು ಬಡಿಯುವಂತೆ ಮಾಡಿತು. ಕ್ಯಾಪ್ಟನ್‌ ಕೂಲ್‌ ಖ್ಯಾತಿಯ ಧೋನಿ ಮೈದಾನದಲ್ಲಿ ಯಾವುದೇ ಉದ್ವೇಗವಿಲ್ಲದೆ ಎಷ್ಟು ಕೂಲ್‌ ಆಗಿರುತ್ತಿದ್ದರೋ  ಅಷ್ಟೇ ಕೂಲ್‌ ಆಗಿ ತನ್ನ 16 ವರ್ಷಗಳ ಸುದೀರ್ಘ ಕ್ರಿಕೆಟ್‌ ಜೀವನಕ್ಕೂ ಆಗಿ ವಿದಾಯ ಹೇಳಿದರು. ಈ ಮೂಲಕ ಒಂದು ಪರಿಪೂರ್ಣ ಕ್ರಿಕೆಟ್‌ ಕಥನ ದಿಢೀರ್‌  ಎಂದು ಕೊನೆಗೊಂಡಂತಾಯಿತು. ಧೋನಿ ನಿವೃತ್ತಿ ಕಳೆದ ಹಲವಾರು ತಿಂಗಳಿಂದ  ಕ್ರಿಕೆಟ್‌

ಸಂಪಾದಕೀಯ – ಒಂದು ವಿದಾಯ ಪಂದ್ಯಕ್ಕೆ ಧೋನಿ ಅರ್ಹರಾಗಿರಲಿಲ್ಲವೇ? Read More »

ಸಂಪಾದಕೀಯ – ಗಲಭೆಯ ಹಿಂದಿನ ಸೂತ್ರಧಾರರನ್ನು ಹಿಡಿಯಬೇಕು

ಬೆಂಗಳೂರಿನ ಡಿಜೆ ಹಳ್ಳಿ, ಕೆಜೆ ಹಳ್ಳಿ ಮತ್ತು ಸುತ್ತಮುತ್ತಲಿನ  ಪರಿಸರದಲ್ಲಿ ಮಂಗಳವಾರ ರಾತ್ರಿಯಿಂದೀಚೆಗೆ ನಡೆದ ಹಿಂಸಾಚಾರಕ್ಕೆ  ನಾಗರಿಕ ಸಮಾಜ  ತಲೆ ತಗ್ಗಿಸಬೇಕು. ಕಾಂಗ್ರೆಸ್‌ ಶಾಸಕರೊಬ್ಬರ ಬಂಧು ಫೇಸ್ ಬುಕ್‌ನಲ್ಲಿ ಪ್ರವಾದಿ ಪೈಗಂಬರರ ಕುರಿತಾಗಿ ಹಾಕಿದ ಒಂದು ಪೋಸ್ಟ್‌ ಅನ್ನು ನೆಪಮಾಡಿಕೊಂಡು ಒಂದು ಕೋಮಿನ ಜನರು ನಡೆಸಿದ ಕೃತ್ಯಕ್ಕೆ ಆ ಇಡೀ ಸಮುದಾಯವನ್ನು ದೂಷಿಸುವುದು ಸರಿಯಲ್ಲ ಎನ್ನುವುದು ಒಪ್ಪತಕ್ಕ ವಾದ ಹೌದು. ಆದರೆ ಈ ಮಾದರಿಯ ಘಟನೆಗಳು ಪದೆಪದೇ ಸಂಭವಿಸುವುದು ಮತ್ತು ಅದರಲ್ಲಿ ಬಹುತೇಕ ಒಂದು ಸಮುದಾಯದವರೆ ಭಾಗಿಯಾಗುತ್ತಿರುವುದು

ಸಂಪಾದಕೀಯ – ಗಲಭೆಯ ಹಿಂದಿನ ಸೂತ್ರಧಾರರನ್ನು ಹಿಡಿಯಬೇಕು Read More »

ಉಳ್ಳವರಿಗೆ ಐಷಾರಾಮಿ ಆಸ್ಪತ್ರೆ; ಬಡವರಿಗೆ…?

ನ್ಯೂಸ್‌ ಕಾರ್ಕಳ ಡಾಟ್‌ ಕಾಮ್‌  ವಿಶ್ಲೇಷಣೆ  ರಾಜ್ಯದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಇಬ್ಬರೂ ಒಂದು  ದಿನದ ಅಂತರದಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಇಬ್ಬರೂ ಒಂದೇ ಆಸ್ಪತ್ರೆಯ ಒಂದೇ ಮಾಳಿಗೆಯಲ್ಲಿದ್ದಾರೆ.ಅಲ್ಲಿಗೆ ಕೊರೊನಾ ವೈರಸ್‌ ಗೆ  ಸಿರಿವಂತ, ಬಲಾಢ್ಯ, ಪ್ರಭಾವಿ, ಬಡವ, ನಿರ್ಗತಿಕ ಎಂಬಿತ್ಯಾದಿ ಬೇಧ ಇಲ್ಲ ಎಂದಾಯಿತು. ತನ್ನ ಸಂಪರ್ಕಕ್ಕೆ ಬಂದವರನ್ನು ಅದು ಕಾಡಿಯೇ ಕಾಡುತ್ತದೆ. ರಾಜ್ಯದ ಇಬ್ಬರು ಪ್ರಮುಖ ರಾಜಕೀಯ ಮುಖಂಡರು ಕೊರೊನಾ ಸೋಂಕಿಗೆ ತುತ್ತಾಗಿರುವುದು ದುರದೃಷ್ಟಕರವೇ. ಅವರು ಬೇಗ ಗುಣಮುಖರಾಗಿ

ಉಳ್ಳವರಿಗೆ ಐಷಾರಾಮಿ ಆಸ್ಪತ್ರೆ; ಬಡವರಿಗೆ…? Read More »

error: Content is protected !!
Scroll to Top