ಕಾರ್ಕಳ : ಕಾರ್ಕಳ ರೋಟರಿ ಕ್ಲಬ್ ನೇತೃತ್ವದಲ್ಲಿ ಕಾರ್ಕಳದ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಸಹಯೋಗದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಆಚರಣೆ ಅಂಗವಾಗಿ ಆ. 6ರಂದು ಆಸ್ಪತ್ರೆಯಲ್ಲಿ ವಿಶೇಷ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಆಸ್ಪತ್ರೆಯ ಮಕ್ಕಳ ತಜ್ಞೆ ಡಾ. ಸೌಜನ್ಯ ಶಿಶುವಿನಲ್ಲಿ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಆರೋಗ್ಯ ಕಾಪಾಡಲು ಸ್ತನ್ಯಪಾನದ ಅಗತ್ಯತೆ ಕುರಿತಂತೆ ವಿಶೇಷ ಮಾಹಿತಿ ನೀಡಿದರು.
ರೋಟರಿ ಕ್ಲಬ್‌ನ ಅಧ್ಯಕ್ಷ ಕೆ. ವಿಜೇಂದ್ರ ಕುಮಾರ್, ವಲಯ 5ರ ಸಹಾಯಕ ಗವರ್ನರ್ ಸುರೇಶ್ ನಾಯಕ್ ಸಂರ್ದಭೋಚಿತವಾಗಿ ಮಾತನಾಡಿ ಮಹಿಳಾ ಮತ್ತು ಶಿಶುವಿನ ಆರೋಗ್ಯಕ್ಕೆ ಸಂಬಂಧಪಟ್ಟಂತೆ ರೋಟರಿ ಇಂಟರ್‌ನ್ಯಾಷನಲ್ ಸಂಸ್ಥೆಯು ಹಮ್ಮಿಕೊಂಡಿರುವ ವಿವಿಧ ಯೋಜನೆಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ದಂತ ವೈದ್ಯಾಧಿಕಾರಿ ಡಾ. ಅನಾಲಿನಿ, ಆಸ್ಪತ್ರೆಯ ಶುಶ್ರೂಷಕ ಪ್ರಭಾರ ಅಧೀಕ್ಷಕಿ ವೀಣಾ ಭಾಸ್ಕರ್, ಹಿರಿಯ ಶುಶ್ರೂಷಕ ಅಧಿಕಾರಿ ಶಾಂತಿ, ರೋಟರಿ ಕ್ಲಬ್‌ನ ಜೋನಲ್ ಲರ್ನಿಂಗ್ ಫೆಸಿಲಿಟೇಟರ್ ಶೈಲೇಂದ್ರ ರಾವ್, ಕ್ಲಬ್‌ನ ಕಾರ್ಯದರ್ಶಿ ಉದಯ ಕುಮಾರ್ ಕಡಂಬ, ಶಿವಕುಮಾರ್, ಬಾಲಕೃಷ್ಣ ದೇವಾಡಿಗ, ಪ್ರಭಾಕರ ಬಂಗೇರ, ರಾಜೇಶ್ ಕಲ್ಲೊಟ್ಟೆ, ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು. ಸುಮಾರು 150 ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.




























