70 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ
ಕಾರ್ಕಳ : ಕುಕ್ಕುಂದೂರು ಗ್ರಾಮದ ಆನಂದಿ ಮೈದಾನ ನಕ್ರೆ ಪೊಸನಟ್ಟು ಸಂಪರ್ಕ ರಸ್ತೆ ದುರಸ್ತಿಯ ಬಗ್ಗೆ ಸ್ಥಳೀಯರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿದ ಶಾಸಕ ವಿ. ಸುನಿಲ್ ಕುಮಾರ್ ಅವರು ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸುಮಾರು 70 ಲಕ್ಷ ರೂ. ಅನುದಾನವನ್ನು ಒದಗಿಸಿ ಮೇ 27 ರಂದು ನಮನಪುರ ಪೊಸನೊಟ್ಟು ಕ್ರಾಸ್ ಬಳಿ ಗುದ್ದಲಿ ಪೂಜೆ ನೆರವೇರಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು. ಇದೇ ಸಂದರ್ಭ ಜ್ಯೋತಿ ನಗರ ಕೊಂಡೇನಾಕ್ಯಾರು ಗುಳಿಗ ಸ್ಥಾನ ರಸ್ತೆ ಕಾಮಗಾರಿಗೆ 55 ಲಕ್ಷ ರೂಪಾಯಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಯಿತು.
ಈ ಸಂದರ್ಭ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ರವೀಂದ್ರ ಕುಮಾರ್, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಅಂತೋನಿ ಡಿಸೋಜಾ ಹಾಗೂ ಶಶಿಮಣಿ ಸಂಪತ್, ಪ್ರಶಾಂತ್ ಶೆಟ್ಟಿ, ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಶೆಟ್ಟಿ, ಯೊಗೀಶ್ ಸಾಲ್ಯಾನ್, ಶೇಖರ್ ಸುವರ್ಣ, ಪ್ರಸಾದ್, ಪ್ರಾಣೇಶ್ ಶೆಟ್ಟಿ, ಹರೀಶ್ ಕುಂದರ್, ಜಯಕರ ಮಡಿವಾಳ ಮಧುಕರ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು

























