ಮೂರೂರು ಬಿ.ಎಂ. ಶಾಲೆಯ ಅಧ್ಯಕ್ಷರಾಗಿ ಪ್ರಕಾಶ್ ಜಿ. ನಾಯ್ಕ್‌ – ಉಪಾಧ್ಯಕ್ಷರಾಗಿ ಪ್ರಕಾಶ್ ಶೆಟ್ಟಿ ಕುಂದೇಶ್ವರ

ಕಾರ್ಕಳ : ಬಿ. ಎಂ. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮೂರೂರು ಇದರ ಹಳೆ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಪ್ರಕಾಶ್ ಜಿ. ನಾಯ್ಕ್‌ ಹಾಗೂ ಉಪಾಧ್ಯಕ್ಷರಾಗಿ ಪ್ರಕಾಶ್ ಶೆಟ್ಟಿ ಕುಂದೇಶ್ವರ ಆಯ್ಕೆಯಾಗಿದ್ದಾರೆ.

ಮಾ. 22ರಂದು ಶಾಲೆಯಲ್ಲಿ ನಡೆದ ಹಳೆವಿದ್ಯಾರ್ಥಿ ಸಂಘದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಗೌರವ ಸಲಹೆಗಾರರಾಗಿ ಮಹಾವೀರ ಕಟ್ಟಡ, ಹರಿಶ್ಚಂದ್ರ ಕುಲಾಲ್ ಹಾಗೂ ಆಶಾ ಕ್ಲೇರಾ ವಾಸ್, ಗೌರವ ಅಧ್ಯಕ್ಷರಾಗಿ ಕೆ.ಪಿ. ಪದ್ಮಾವತಿ, ಪ್ರಧಾನ ಕಾರ್ಯದರ್ಶಿಯಾಗಿ ಹರಿಶ್ಚಂದ್ರ, ಜೊತೆ ಕಾರ್ಯದರ್ಶಿಯಾಗಿ ವಿಶಾಲ ನಾಯಕ್, ಖಚಾಂಜಿಯಾಗಿ ದೀಪ, ಸಂಘಟನಾ ಕಾರ್ಯದರ್ಶಿಯಾಗಿ ವಿನಯ್ ಕುಮಾರ್ ಹಾಗೂ ಶಶಿಕಲ ನಾಯಕ್, ಕ್ರೀಡ ಕಾರ್ಯದರ್ಶಿಯಾಗಿ ರೋಹಿತ್ ನಾಯಕ್ ಹಾಗೂ ಉಷಾ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸುಜಯ್ ಶೆಟ್ಟಿ ಕುಂದೇಶ್ವರ ಹಾಗೂ ಸುಪ್ರೀತಾ ಶಿವನಗರ ಆಯ್ಕೆಯಾದರು.

ಸದಸ್ಯರಾಗಿ ಅನಿಲ್ ಶೆಟ್ಟಿ, ಅಶೋಕ್ ಪೂಜಾರಿ, ದಿನೇಶ್ ನಾಯಕ್, ನಿತಿನ್, ವಿತೇಶ್ ಶೆಟ್ಟಿ, ಮನೋಜ್ ಹಾರ್ಜಡ್ಡು, ನಿತ್ಯಾನಂದ ತೆಂಡುಲ್ಕರ್, ಸುಭಾಷ್ ನಾಯಕ್, ವಿದ್ಯಾನಂದ ತೆಂಡೂಲ್ಕರ್, ಸುಗಂಧಿ ಕುಲಾಲ್, ಗೀತಾ ಚಂದ್ರಕಾಂತ ಆಚಾರ್ಯ, ರೋಹಿಣಿ ಶೆಟ್ಟಿ, ಶ್ರೀಕಾಂತ ನಾಯಕ್‌, ಪ್ರವೀಣ್ ಕುಮಾರ್ ರಾಜೀವನಗರ, ಸುನಿಲ್ ಶೆಟ್ಟಿ ವಿಠೋಬ ನಗರ, ಉಮಾಶಂಕರ್, ನಿತೇಶ್ ಆಚಾರ್ಯ, ಭವ್ಯ ಸುಪ್ರಿಯ ರಾಜೀವ ನಗರ, ಜಹೀರ್ ಅಹ್ಮದ್ ಅವರನ್ನು ಆಯ್ಕೆ ಮಾಡಲಾಯಿತು.









































































































error: Content is protected !!
Scroll to Top