ರಾಜ್ಯ ಜಾನಪದ ಪ್ರಶಸ್ತಿ ಪುರಸ್ಕೃತ ಕಬ್ಬಿನಾಲೆ ಗುಲಾಬಿಗೆ ಅಭಿನಂದನೆ

ಹೆಬ್ರಿ : ರಾಜ್ಯ ಮಟ್ಟದ ಕರ್ನಾಟಕ ಜಾನಪದ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತರಾದ ಕಬ್ಬಿನಾಲೆ ಗುಲಾಬಿ ಗೌಡ ಅವರಿಗೆ ಕಾರ್ಕಳ ಬಿಜೆಪಿ ವತಿಯಿಂದ ಸನ್ಮಾನಿಸಲಾಯಿತು.
ಈ ವೇಳೆ ಮಾತನಾಡಿದ ರವೀಂದ್ರ ಕುಮಾರ್ ಅವರು, ಹಿಂದುಳಿದ ಗ್ರಾಮ ಕಬ್ಬಿನಾಲೆಯಲ್ಲಿ ಮಲೆಕುಡಿಯ ಸಮುದಾಯದ ಬಡಕುಟುಂಬದಲ್ಲಿ ಹುಟ್ಟಿ ಬೆಳೆದ ಗುಲಾಬಿ ಅವರು ಕಳೆದ 50 ವರ್ಷಗಳಿಂದ ನಾಟಿ ವೈದ್ಯ ಪದ್ಧತಿಯಲ್ಲಿ ಔಷಧಿ ನೀಡುತ್ತಾ ಬಂದಿರುತ್ತಾರೆ. ಆಸ್ಪತ್ರೆಗಳು ವಿರಳವಾಗಿದ್ದ ಆ ಕಾಲದಲ್ಲಿ 200ಕ್ಕೂ ಅಧಿಕ ಮಹಿಳೆಯರಿಗೆ ಹೆರಿಗೆ ಮಾಡಿಸಿರುತ್ತಾರೆ. ಬದುಕಿನುದ್ದಕ್ಕೂ ನಿಸ್ವಾರ್ಥ ಸೇವೆಗೈದ 89 ವರ್ಷ ವಯಸ್ಸಿನ ಗುಲಾಬಿ ಅವರನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಸಂತಸದ ವಿಚಾರವೆಂದರು.
ಕ್ಷೇತ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಶೆಟ್ಟಿ, ಸತೀಶ್ ಪೂಜಾರಿ ಬೋಳ, ಮಹಿಳಾ ಮೋರ್ಚಾದ ಅಧ್ಯಕ್ಷೆ ವಿನಯ ಡಿ. ಬಂಗೇರ, ಜಿಲ್ಲಾ ಉಪಾಧ್ಯಕ್ಷ ಮಾಲಿನಿ ಶೆಟ್ಟಿ, ಪ್ರಮುಖರಾದ ಜ್ಯೋತಿ ಹರೀಶ್, ಸಂತೋಷ್ ಶೆಟ್ಟಿ, ಯುವ ಮೋರ್ಚಾದ ಅಧ್ಯಕ್ಷ ರಾಕೇಶ್ ಶೆಟ್ಟಿ, ಜಗದೀಶ್ ಪೂಜಾರಿ, ಗಂಗಾಧರ್ ಗೌಡ, ವಿಠಲ್ ಕೋಟ್ಯಾನ್, ಕೃಷ್ಣ ಪ್ರಸಾದ್ ಭಟ್, ವಿಠಲ ಗೌಡ, ಸುಮಾಕೇಶವ್‌, ಸುಮರವಿಕಾಂತ್, ಮಮತಾ ಸುವರ್ಣ, ಪಲ್ಲವಿ ಪ್ರವೀಣ್, ಭಾರತಿ ಅಮೀನ್, ಸುಚಿತ್ರಾ ಶೆಟ್ಟಿ, ಲಕ್ಷ್ಮೀ ಕಿಣಿ, ಮಮತಾ ನಾಯಕ್, ಗೀತಾ ಕಲ್ಲೊಟ್ಟೆ , ಶಿವಾನಿ ದೇವಾಡಿಗ, ಸುಜಾತಾ, ಸುಶೀಲಾ, ಯಮುನಾ, ಸುವರ್ಣ, ಪ್ರಭಾವತಿ ಉಪಸ್ಥಿತರಿದ್ದರು.































































































error: Content is protected !!
Scroll to Top