ಕಾರ್ಕಳ : ಕೋಳಿ ಅಂಕಕ್ಕೆ ದಾಳಿ ಮಾಡಿಸಿರುವುದಾಗಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಘಟನೆ ಮಾ. 16ರಂದು ಹೆಬ್ರಿಯಲ್ಲಿ ನಡೆದಿದೆ. ನಾಲ್ಕೂರು ಗ್ರಾಮದ ವಿಠಲ ಎಂಬವರು ಮುದ್ದೂರಿಗೆ ಹೋಗುವಾಗ ಕೆಂಜೂರು ಜಯಕರ ಶೆಟ್ಟಿಯವರು ಪಾದೆ ಮಠದಲ್ಲಿ ಕೋಳಿ ಅಂಕ ಪಡೆಗೆ ರೈಡ್ ಮಾಡಿಸಿರುವುದಾಗಿ ಆರೋಪಿಸಿ ಅವಾಚ್ಯವಾಗಿ ಬೈದು ಹಲ್ಲೆ ಮಾಡಿ ಬೆದರಿಕೆ ಹಾಕಿರುವುದಾಗಿ ವಿಠಲ ಅವರು ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಕೋಳಿ ಅಂಕಕ್ಕೆ ದಾಳಿ ಮಾಡಿಸಿರುವ ಆರೋಪ – ವ್ಯಕ್ತಿಯ ಮೇಲೆ ಹಲ್ಲೆ



















