ಕಾರ್ಕಳ : ಇಂಡಿಯನ್ ಯೂತ್ ಸ್ಪೋರ್ಟ್ಸ್ ಉಪಾಧ್ಯಕ್ಷ ಡಾ. ಜಿ. ಪ್ರವೀಣ್ ಶೆಟ್ಟಿ ಅವರು ಯೋಗಗುರು ನರೇಂದ್ರ ಕಾಮತ್ ಅವರನ್ನು ಅಭಿನಂದಿಸಿದರು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಬೆಟ್ಟುವಿನಲ್ಲಿ ಶಿಕ್ಷಕರಾಗಿದ್ದ ನರೇಂದ್ರ ಕಾಮತ್ ಅವರು ಇತ್ತೀಚೆಗೆ ನಿವೃತ್ತಿ ಹೊಂದಿದ್ದರು. ಸಾವಿರಾರು ವಿದ್ಯಾರ್ಥಿಗಳಿಗೆ ಯೋಗಶಿಕ್ಷಣ ನೀಡಿರುವ ನರೇಂದ್ರ ಕಾಮತ್ ಅವರ ಸೇವೆ, ಸಾಧನೆಯನ್ನು ಪರಿಗಣಿಸಿ ಪ್ರವೀಣ್ ಶೆಟ್ಟಿ ಹಾಗೂ ವಿಜೇಂದ್ರ ಪ್ರಭು ಅವರು ಕಾಮತ್ ದಂಪತಿಯನ್ನು ಸನ್ಮಾನಿಸಿದರು.




















