ಗುರುಕುಲ ಶಾಲೆಯಲ್ಲಿ ವಿಶ್ವ ಮಹಿಳಾ ದಿನಾಚರಣೆ

ಕಾರ್ಕಳ : ಮಾಳ ಗ್ರಾಮದ ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವದ ಕೃತಜ್ಞತಾ ಸಭೆ ಮತ್ತು ವಿಶ್ವ ಮಹಿಳಾ ದಿನಾಚರಣೆ ಮಾ. 8 ರಂದು ಶಾಲೆಯ ಅಮೃತ ಮಹೋತ್ಸವ ಸಭಾಂಗಣದಲ್ಲಿ ನಡೆಯಿತು. ಸಮಿತಿ ಅಧ್ಯಕ್ಷ ಡಾ. ಎಂ. ಪ್ರಭಾಕರ ಜೋಶಿ, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಸ್ಮರಣ ಸಂಚಿಕೆ ಸಂಪಾದಕ ಮಂಡಳಿಯ ಅರವಿಂದ ಚಿಪ್ಳೂಣ್ಕರ್ ಮೊದಲಾದವರು ಈ ಸಂದರ್ಭದಲ್ಲಿದ್ದರು.
ವಿಶ್ವ ಮಹಿಳಾ ದಿನದ ಅಂಗವಾಗಿ ಮುಖ್ಯಶಿಕ್ಷಕಿ ಪೂರ್ಣಿಮಾ ಶೆಣೈ, ದೈವ ಸಂದಿ ಹೇಳುವ ವನಜಾ ಪರವ ಅವರನ್ನು ಗೌರವಿಸಲಾಯಿತು.
ವೇದಗಣಿತ ಮತ್ತು ಅಬಾಕಸ್ ನಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಗಳಿಸಿದ ಶಾಲಾ ವಿದ್ಯಾರ್ಥಿಗಳಾದ ಶರಣ್ಯಾ ಜೋಶಿ, ಅಪೇಕ್ಷಾ ಕಾಮತ್, ಸಮೃದ್ಧಿ, ಸಮೀರಣ ಮರಾಠೆ ಅವರನ್ನು ಅಭಿನಂದಿಸಲಾಯಿತು.
ಶಾಲಾ ಅಧ್ಯಕ್ಷ ಗಜಾನನ ಮರಾಠೆ ಅಮೃತ ಮಹೋತ್ಸವ ಯಶಸ್ಸಿಗೆ ಕಾರಣಕರ್ತರಾದವರನ್ನು ಅಭಿನಂದಿಸಿದರು. ಸಭಾಧ್ಯಕ್ಷ ನಾಗಭೂಷಣ ಜೋಶಿ ಅಮೃತ ಮಹೋತ್ಸವ ಮೆಲುಕು ಹಾಕಿದರು.
ಕಾರ್ಯದರ್ಶಿ ಗೀತಾ ಸೇರಿಗಾರ್ ಅಮೃತ ಮಹೋತ್ಸವದ ಲೆಕ್ಕಪತ್ರ ಮಂಡಿಸಿದರು. ಬಜಗೋಳಿಯ ವೈದ್ಯರಾದ ಡಾ. ವೆಂಕಟಗಿರಿ ರಾವ್, ಸ್ಮರಣ ಸಂಚಿಕೆಯ ಸಂಪಾದಕ ಮಂಡಳಿಯ ಸದಸ್ಯ ಸಂತೋಷ್ ಪೂಜಾರಿ, ಅಮೃತ ಮಹೋತ್ಸವ ಸಮಿತಿಯ ಉಪಾಧ್ಯಕ್ಷೆ ಸುಮನಾ ಘಾಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಕ್ಷಕಿ ಅನುಪಮಾ, ಸಮಿತಿ ಸದಸ್ಯರಾದ ವಸಂತಿ, ರವೀಂದ್ರನಾಥ ಜೋಶಿ, ವಸಂತ ಶೇರಿಗಾರ್ ಸನ್ಮಾನ ಪತ್ರ ವಾಚಿಸಿದರು. ಶಿಕ್ಷಕಿ ಶೋಭಾ ಅಬಾಕಸ್ ವಿಜೇತ ವಿದ್ಯಾರ್ಥಿಗಳ ಪುರಸ್ಕಾರ ನಿರ್ವಹಿಸಿದರು.
ಸಮಿತಿ ಸದಸ್ಯರಾದ ಸುಧಾಕರ ಡೋಂಗ್ರೆ, ವಸಂತಿ, ವೆಂಕಟೇಶ ಗೋರೆ, ಡಾ. ದಿನಕರ ಡೋಂಗ್ರೆ, ದಿನೇಶ್, ಅಶೋಕ್, ಚಿನ್ನು, ವಿಶ್ವಾಸ್, ಶಿಕ್ಷಕರಾದ ಜ್ಯೋತಿ, ದೀಪಾ, ಶಿಲ್ಪಾ, ವಸಂತಿ, ಶುಭಾ, ಪ್ರಜ್ಞಾ, ಅಡುಗೆ ಸಹಾಯಕರಾದ ವನಿತಾ ಶೆಟ್ಟಿ, ಲಕ್ಷ್ಮೀ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಆಡಳಿತ ಮಂಡಳಿ ಸದಸ್ಯ ರಘುಪತಿ ಕಾಮತ್ ಕಾರ್ಯಕ್ರಮ ನಿರ್ವಹಿಸಿದರು. ಪ್ರಧಾನ ಕಾರ್ಯದರ್ಶಿ ರಾಮ ಸೇರಿಗಾರ್ ವಂದಿಸಿದರು.





































error: Content is protected !!
Scroll to Top