ಚಿನ್ನದ ದರದಲ್ಲಿ ಭಾರೀ ಏರಿಕೆ – ಒಂದೇ ದಿನದಲ್ಲಿ ಪ್ರತಿ ಗ್ರಾಂ ಮೇಲೆ ಸಾವಿರದಷ್ಟು ಹೆಚ್ಚಳ

ಬೆಂಗಳೂರು : ಕಳೆದ ಕೆಲವು ದಿನಗಳಿಂದ ಚಿನ್ನದ ದರ ಏರುತ್ತಲೇ ಹೋಗುತ್ತಿದೆ. ಇದೀಗ ಆಭರಣ ಚಿನ್ನವೂ ಒಂದೇ ದಿನದಲ್ಲಿ 1,080ರಷ್ಟು ಏರಿಕೆ ಕಂಡು 16 ಸಾವಿರದ ಗಡಿ ದಾಟಿದೆ. ಇಂದು ದೇಶದಲ್ಲಿ 1 ಗ್ರಾಂ ಆಭರಣ ಚಿನ್ನದ ಬೆಲೆ 16,395 ರೂ. ಆಗಿದೆ. ಜ. 28ರ ಮಧ್ಯಾಹ್ನ ಇದರ ಬೆಲೆ 15,140 ರೂ. ರಷ್ಟಿತ್ತು. ಸಂಜೆ ವೇಳೆ ಸ್ವಲ್ಪ ಏರಿಕೆ ಕಂಡಿತ್ತು. ಒಟ್ಟಿನಲ್ಲಿ, ನಿನ್ನೆ ಕೊನೆಗೊಂಡ ಬೆಲೆಗೆ ಹೋಲಿಸಿದರೆ ಇಂದು ಹನ್ನೊಂದು ಗಂಟೆಯ ವಹಿವಾಟಿನಲ್ಲಿ ಆಭರಣ ಚಿನ್ನದ ಬೆಲೆ 1,080 ರೂ. ಏರಿಕೆಯಾಗಿ 16 ಸಾವಿರದ ಗಡಿ ದಾಟಿದೆ.

ಗುರುವಾರ ಚಿನ್ನದ ಬೆಲೆ ಔನ್ಸ್‌ಗೆ 5,500 ಡಾಲರ್ ಮೀರಿ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ. ಅಮೆರಿಕದ ಫೆಡ್ ದರಗಳನ್ನು ಕಾಯ್ದುಕೊಂಡ ಮೇಲೆ ಏಷ್ಯಾದ ಷೇರು ಮಾರುಕಟ್ಟೆಗಳು ಮಿಶ್ರ ವಹಿವಾಟು ನಡೆಸುತ್ತಿರುವ ಕಾರಣದಿಂದ ಚಿನ್ನದ ಬೆಲೆ ಶೇ. 3ರಷ್ಟು ಹೆಚ್ಚು ಜಿಗಿದು ಹೊಸ ಗರಿಷ್ಠ ಮಟ್ಟವನ್ನು ತಲುಪಿದೆ. ಗುರುವಾರ ಅಮೆರಿಕದ ಫೆಡರಲ್ ರಿಸರ್ವ್ ತನ್ನ ಮಾನದಂಡ ದರವನ್ನು ಶೇ. 3.5ರಿಂದ 3.75ರ ಗುರಿಯ ವ್ಯಾಪ್ತಿಯಲ್ಲಿ ಸ್ಥಿರವಾಗಿರಿಸಿರುವುದು ಸ್ಪಾಟ್ ಚಿನ್ನದ ಬೆಲೆಗಳ ಹೊಸ ದಾಖಲೆ ಏರಿಕೆಗೆ ಕಾರಣವಾಗಿದೆ.

ಮಂಗಳೂರಿನಲ್ಲಿ ಇಂದಿನ ಚಿನ್ನದ ದರ
ಜ. 29ರಂದು ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 17,885 ರೂ., ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 16,395 ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 13,414 ರೂ.









error: Content is protected !!
Scroll to Top