ಫೆ. 8 : ಕಾರ್ಕಳ ತಾಲೂಕು ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ರಜತ ಸಂಭ್ರಮ – ಸಾಮೂಹಿಕ ಬ್ರಹ್ಮೋಪದೇಶ

ಕಾರ್ಕಳ : ಕಾರ್ಕಳ ತಾಲೂಕು ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ರಜತ ಸಂಭ್ರಮ ಪ್ರಯುಕ್ತ ಫೆ. 8ರಂದು ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ವಿಶ್ವಕರ್ಮ ಸಮಾಜದ ವಟುಗಳಿಗೆ ಸಾಮೂಹಿಕ ಬ್ರಹ್ಮೋಪದೇಶ ಜರುಗಲಿದೆ.

ಸಭಾ ಕಾರ್ಯಕ್ರಮ
ಅಂದು ಬೆಳಗ್ಗೆ 10 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಆನೆಗುಂದಿ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಆಶೀರ್ವಚನ ನೀಡಲಿರುವರು. ಕಾರ್ಕಳ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಎಂ. ರಮೇಶ್‌ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ವಿ. ಸುನಿಲ್ ಕುಮಾರ್, ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಸುಜ್ಞಾನ ಮೂರ್ತಿ, ನೆಕ್ಲಾಜೆ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಶಿಲ್ಪಿ ರಾಮಚಂದ್ರ ಆಚಾರ್ಯ, ಮುನಿಯಾಲು ಉದಯಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್‌ ಟ್ರಸ್ಟ್‌ ಅಧ್ಯಕ್ಷ ಉದಯಕುಮಾರ್‌ ಶೆಟ್ಟಿ, ಮಂಗಳೂರು ವಿಶ್ವಕರ್ಮ ಸಹಕಾರ ಬ್ಯಾಂಕ್‌ ಅಧ್ಯಕ್ಷ ಎಸ್‌.ಆರ್.‌ ಹರೀಶ್‌, ಉಡುಪಿ ಜಿಲ್ಲಾ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ರವಿಚಂದ್ರ ಆಚಾರ್ಯ ಮಾರಾಳಿ, ಪೆರ್ವಾಜೆ ವಿ.ಬಿ.ಎಸ್.‌ ಸಭಾ ಅಧ್ಯಕ್ಷ ಬಿ. ಪ್ರಕಾಶ್‌ ಆಚಾರ್ಯ, ರಥಶಿಲ್ಪಿ ರಾಜಗೋಪಾಲ ಆಚಾರ್ಯ, ಶೇಖರ್‌ ಆಚಾರ್ಯ ಮುಂಬೈ, ಉಷಾ ಜ್ಯುವೆಲ್ಲರ್ಸ್‌ನ ಅಮಿತ್‌, ದ.ಕ. ಜಿಲ್ಲಾ ಚಿ.ಬೆ.ಕೆ.ಸಂ. ಅಧ್ಯಕ್ಷ ಕೆ.ಎಲ್.‌ ಹರೀಶ್‌, ನೆಕ್ಲಾಜೆ ಕಾಳಿಕಾಂಬಾ ದೇವಸ್ಥಾನದ ಜೊತೆ ಮೊಕ್ತೇಸರರಾದ ಪಿ. ರವಿ ಆಚಾರ್ಯ ಪೆರ್ವಾಜೆ, ಸುರೇಶ್‌ ಆಚಾರ್ಯ ನಿಟ್ಟೆ, ಕುಂದಾಪುರ ಚಿ.ಬೆ.ಕೆ.ಸಂ. ಅಧ್ಯಕ್ಷ ಬಿ. ಕುಶ ಕುಮಾರ್‌, ಕರ್ನಾಟಕ ಜ್ಯುವೆಲ್ಲರ್ಸ್‌ನ ಹರ್ಷವರ್ಧನ ಆಚಾರ್ಯ, ಚಿ.ಬೆ.ಕೆ. ಹಿತರಕ್ಷಣಾ ವೇದಿಕೆ ಮೂಡುಬಿದಿರೆಯ ಅಧ್ಯಕ್ಷ ನವೀನ್‌ ಆಚಾರ್ಯ, ಕೆ. ಕರುಣಾಕರ ಆಚಾರ್ಯ, ಚಿ.ಬೆ.ಕೆ.ಸಂ. ಕಾರ್ಕಳದ ಮಾಜಿ ಅಧ್ಯಕ್ಷ ಕೆ. ಕಿಶೋರ್‌ ಆಚಾರ್ಯ ಭಾಗವಹಿಸಲಿದ್ದಾರೆ.

ಗೌರವ ಸಮರ್ಪಣೆ
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ದಾಮೋದರ ಆಚಾರ್ಯ ಬೈಲೂರು (ಜಿಲ್ಲಾ ರಾಜ್ಯೋತ್ಸವ ಪುರಸ್ಕೃತರು), ಶ್ಯಾಮರಾಯ ಆಚಾರ್ಯ ಜಾರ್ಕಳ ಬೈಲೂರು (ಸ್ವರ್ಣ ಶಿಲ್ಪ), ಪದ್ಮನಾಭ ಆಚಾರ್ಯ ಸಾಣೂರು (ಕಾಷ್ಠ ಶಿಲ್ಪ), ಪ್ರಕಾಶ್‌ ಆಚಾರ್ಯ ಕುಕ್ಕುಂದೂರು (ಶಿಲಾ ಶಿಲ್ಪ), ಪ್ರಕಾಶ್‌ ಆಚಾರ್ಯ ಆನೆಕೆರೆ (ಎರಕ ಶಿಲ್ಪ), ಸೂರ್ಯ ಪೂರೋಹಿತ್‌ (ರಂಗೋಲಿ ಕಲಾವಿದ), ಸುರೇಂದ್ರ ಆಚಾರ್ಯ ನೂರಾಳ್‌ಬೆಟ್ಟು (ಪೆನ್ಸಿಲ್‌ ಕಲಾವಿದ), ಪದ್ಮನಾಭ ಆಚಾರ್ಯ ಪೆರ್ವಾಜೆ (ಸಮಾಜ ಸೇವೆ), ಅನುಶ್ರೀ ರಿಷಬ್‌ ಆಚಾರ್ಯ ನಿಟ್ಟೆ (ಸಿಎ ಅಂತಿಮ ಪರೀಕ್ಷೆ ತೇರ್ಗಡೆ), ಲಾವಣ್ಯ ಯು.ಕೆ. ಕುಕ್ಕುಂದೂರು (ಸಿಎ ಅಂತಿಮ ಪರೀಕ್ಷೆ ತೇರ್ಗಡೆ) ಅವರನ್ನು ಗೌರವಿಸಲಾಗುವುದು.

ಯಕ್ಷಗಾನ
ಮಧ್ಯಾಹ್ನ 2.30ರಿಂದ ವೈವಿಧ್ಯಮಯ ಕಾರ್ಯಕ್ರಮ ನಡೆಯಲಿದ್ದು, ಸಂಜೆ 6 ಗಂಟೆಗೆ ಬ್ರಾಹ್ಮಿ ಯಕ್ಷ ಕಲಾವೃಂದ ಹೆನ್ನಾಬೈಲ್‌ ಕುಂದಾಪುರ ಹಾಗೂ ದಕ್ಷಿಣೋತ್ತರ ಜಿಲ್ಲೆಯ ಅತಿಥಿ ಕಲಾವಿದರಿಂದ ರಾಜ ರುದ್ರ ಕೋಪ ಎಂಬ ಯಕ್ಷಗಾನ ಪ್ರಸಂಗ ಪ್ರದರ್ಶನಗೊಳ್ಳಲಿದೆ.

































































































error: Content is protected !!
Scroll to Top