ಮನೆಯ ಬಾಗಿಲು ಮುರಿದು ಬೆಳ್ಳಿ-ಚಿನ್ನಾಭರಣಗಳ ಕಳವು

ಕಾರ್ಕಳ : ಮನೆಯ ಬಾಗಿಲು ಮುರಿದು ಬೆಳ್ಳಿಯ ಸಾಮಾಗ್ರಿಗಳು ಮತ್ತು ಚಿನ್ನಾಭರಣವನ್ನು ಕಳವುಗೈದ ಘಟನೆ ಕುಕ್ಕುಂದೂರು ಗ್ರಾಮದ ನಕ್ರೆ ಪರಪ್ಪುವಿನಲ್ಲಿ ನಡೆದಿದೆ. ಶ್ರೀನಿವಾಸ ನಾರಾಯಣ ಮೂಲ್ಯ ಅವರು ಮಂಗಳೂರು ತೇಜಸ್ವಿನಿ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದು, ಪರಪ್ಪುವಿನಲ್ಲಿರುವ ಅವರ ಮನೆಯಲ್ಲಿ ಜ. 1ರಿಂದ ಜ. 7ರ ಮದ್ಯಾವಧಿಯಲ್ಲಿ ಕಳ್ಳತನವಾಗಿದೆ. ಕಳ್ಳರು ಮನೆಯ ಬಾಗಿಲನ್ನು ಯಾವುದೋ ಸಾಧನದಿಂದ ಮೀಟಿ ತೆರೆದು ಒಳಪ್ರವೇಶಿಸಿ ಬೆಡ್‌ ರೂಮ್‌ನಲ್ಲಿದ್ದ ಕಪಾಟನ್ನು ತೆರೆದು ಅದರೊಳಗೆ ಇಟ್ಟಿದ್ದ ಬೆಳ್ಳಿಯ ಸಣ್ಣ ದೀಪ -2, ಬೆಳ್ಳಿಯ ದೊಡ್ಡ ದೀಪ -2, ಬೆಳ್ಳಿಯ ಚೆಂಬು -1, ಬೆಳ್ಳಿಯ ತಟ್ಟೆ-1 ಹಾಗೂ 3 ಗ್ರಾಂ ತೂಕದ ಒಂದು ಚಿನ್ನದ ಒಡ್ಡುಂಗುರವನ್ನು ಕಳವು ಮಾಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.















































































































































































error: Content is protected !!
Scroll to Top