ಕಾರ್ಕಳ : ಮನೆಯಂಗಳಕ್ಕೆ ಅಕ್ರಮವಾಗಿ ಪ್ರವೇಶಿಸಿ ಚಾಕು ಹಿಡಿದು ಜೀವ ಬೆದರಿಕೆ ಹಾಕಿದ್ದಲ್ಲದೆ ದ್ವಿಚಕ್ರ ವಾಹನಕ್ಕೆ ಹಾನಿಯುಂಟು ಮಾಡಿರುವ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಆಪಾದಿತರಾದ ಶಿಫಾ ಫಾತಿಮಾ, ಅನೀಕ್ ಮತ್ತು ಜೈನಬ ಜ. 5ರಂದು ಕುಕ್ಕುಂದೂರು ಗ್ರಾಮದ ತಾಹಿರ ಬಾನು ಅವರ ವಾಸದ ಮನೆಯ ಅಂಗಳಕ್ಕೆ ಚಾಕು ಹಿಡಿದುಕೊಂಡು ಅಕ್ರಮವಾಗಿ ಪ್ರವೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾರೆ. ಅಲ್ಲದೆ ಮನೆಯ ಬಾಗಿಲಿಗೆ ಒದ್ದು, ಕಿಟಕಿ ಗಾಜು ಹಾಗೂ ದ್ವಿಚಕ್ರ ವಾಹನಕ್ಕೆ ರಾಡ್ ಮತ್ತು ಕಲ್ಲಿನಿಂದ ಒಡೆದು ಹಾನಿ ಮಾಡಿದ್ದು, 60,000 ರೂ. ನಷ್ಟವನ್ನುಂಟಾಗಿದೆ ಎಂದು ತಾಹಿರ ಬಾನು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಮನೆಯಂಗಳಕ್ಕೆ ಅಕ್ರಮವಾಗಿ ಪ್ರವೇಶಿಸಿ ಚಾಕು ಹಿಡಿದು ಜೀವ ಬೆದರಿಕೆ – ವಾಹನಕ್ಕೆ ಹಾನಿ























































































