ಕಾರ್ಕಳ : ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರ್ ಲಾರಿಯನ್ನು ಮರಳು ಸಹಿತ ಕಾರ್ಕಳ ನಗರ ಪೊಲೀಸರು ವಶಪಡಿಸಿಕೊಂಡಿರುವ ಘಟನೆ ಜ. 5ರಂದು ನಡೆದಿದೆ. ವಿನ್ಸೆಂಟ್ ಎಂಬಾತ ಬ್ರಹ್ಮಾವರ ತಾಲೂಕಿನ ಚೆರ್ಕಾಡಿ ಇರ್ಮುಗೋಡು ಎಂಬಲ್ಲಿ ಹರಿಯುತ್ತಿರುವ ಸರಕಾರಿ ಹೊಳೆಯಿಂದ ಅಕ್ರಮವಾಗಿ ಕಳವು ಮಾಡಿ ದಾಸ್ತಾನು ಇರಿಸಿದ ಮರಳನ್ನು KA 19 AE 9401ನೇ ನಂಬ್ರದ ಟಿಪ್ಪರ್ ಲಾರಿಯಲ್ಲಿ ಮಾಲಕ ಮಹಮ್ಮದ್ ಇರ್ಫಾನ್ ತಿಳಿಸಿದಂತೆ ಚಾಲಕ ಸಮ್ಯೇಗ್ದ್ ಜೈನ್ ಯಾವುದೇ ಪರವಾನಿಗೆ ಹೊಂದದೇ ಅಕ್ರಮವಾಗಿ ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಕಾಬೆಟ್ಟು ಅತ್ತೂರು ಚರ್ಚ್ ದ್ವಾರದ ಬಳಿ ಬಂಗ್ಲೆಗುಡ್ಡೆ ಕಡೆಯಿಂದ ಪುಲ್ಕೇರಿ ಕಡೆಗೆ ಸಾಗಾಟ ಮಾಡುತ್ತಿರುವಾಗ ಕಾರ್ಕಳ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಮುರಳಿಧರ್ ನಾಯ್ಕ್ ದಾಳಿ ನಡೆಸಿ 5,00,000 ರೂ. ಮೌಲ್ಯದ ಟಿಪ್ಪರ್ ಲಾರಿ ಹಾಗೂ ಅದರಲ್ಲಿ ತುಂಬಿಸಿದ್ದ ಸುಮಾರು 9000 ರೂ. ಮೌಲ್ಯದ ಮರಳನ್ನು ಸ್ವಾದೀನಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಅಕ್ರಮವಾಗಿ ಮರಳು ಸಾಗಾಟ – ಟಿಪ್ಪರ್ ಸಹಿತ ಮರಳು ವಶಕ್ಕೆ























































































