ದಯಾನಾಯಕ್‌ ಪುತ್ರನ ಅದ್ಧೂರಿ ಆರತಕ್ಷತೆ – ಬಾಲಿವುಡ್‌ ಸೆಲೆಬ್ರಿಟಿಗಳು ಭಾಗಿ

ಮುಂಬೈ : ಎನ್‌ಕೌಂಟರ್‌ ಸ್ಪೆಷಲಿಸ್ಟ್‌ ಖ್ಯಾತಿಯ ದಯಾನಾಯಕ್‌ ಅವರ ಪುತ್ರ ಚೈತನ್ಯ ನಾಯಕ್ ಅವರ ವಿವಾಹವು ಜೂಹಿ ಅವರೊಂದಿಗೆ ಡಿ. 10ರಂದು ಮುಂಬೈಯ ಜೂಹು ಇಸ್ಕಾನ್‌ ಮಂದಿರದಲ್ಲಿ ನೆರವೇರಿದ್ದು ಆರತಕ್ಷತೆ ಅಂಧೇರಿಯ ಸಹಾರ‌ ಸ್ಟಾರ್‌ ಹೊಟೇಲ್‌ನಲ್ಲಿ ಶನಿವಾರ ನಡೆಯಿತು. ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ, ಬಾಲಿವುಡ್‌ ಸೆಲೆಬ್ರಿಟಿಗಳಾದ ಸಲ್ಮಾನ್‌ ಖಾನ್‌, ಅನಿಲ್‌ ಕಪೂರ್‌, ಅಕ್ಷಯ್‌ ಕುಮಾರ್‌, ಸುನಿಲ್‌ ಶೆಟ್ಟಿ, ಶಿಲ್ಪಾ ಶೆಟ್ಟಿ, ಗೋವಿಂದ, ರಣದೀಪ್‌ ಹೂಡ, ಚಿತ್ರ ನಿರ್ದೇಶಕ ರೋಹಿತ್‌ ಶೆಟ್ಟಿ, ಮಧೂರ್‌ ಭಂಡಾರ್ಕರ್‌, ಸಾಜಿದ್ ನಾಡಿಯಾಡ್ವಾಲಾ, ನಾನಾ ಪಾಟೇಕರ್‌, ವಿಕ್ಕಿ ಕೌಶಲ್‌, ಜಾನಿ ಲಿವರ್‌, ರಾಜ್‌ಪಾಲ್‌ ಯಾದವ್‌, ಬೋನಿ ಕಪೂರ್‌, ಜಾಕಿ ಶ್ರಾಫ್, ಟೈಗರ್‌ ಶ್ರಾಫ್‌, ಮನೋಜ್ ಬಾಜ್ಪಾಯಿ, ವರುಣ್‌ ಧವನ್‌, ಗಾಯಕ ಅನು ಮಲಿಕ್‌, ಗಣೇಶ್‌ ಆಚಾರ್ಯ, ಎಸಿಪಿ ಪ್ರಕಾಶ್‌ ಭಂಡಾರಿ, ಮುಂಬೈ ಕಮೀಷನರ್‌ ದಿವೇನ್‌ ಭಾರತಿ, ಕರ್ನಾಟಕದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌, ಹೊಟೇಲ್‌ ಉದ್ಯಮಿ ಮಹೇಶ್‌ ಶೆಟ್ಟಿ ಕುಡುಪುಲಾಜೆ, ಬೋಳ ಶ್ರೀನಿವಾಸ್‌ ಕಾಮತ್‌, ಜಾಗೃತಿ ಫೌಂಡೇಶನ್‌ ಸಂಚಾಲಕ ಸಿಯಾ ಸಂತೋಷ್‌ ನಾಯಕ್‌, ಉದ್ಯಮಿಗಳಾದ ಸಂತೋಷ್‌ ವಾಘ್ಲೆ, ನವೀನ್‌ ನಾಯಕ್‌, ಮಹೇಶ್‌ ಬೈಲೂರು ಮೊದಲಾದವರು ಆರತಕ್ಷತೆಯಲ್ಲಿ ಪಾಲ್ಗೊಂಡರು.

ಮೊಮ್ಮಗನಿಗೆ ಅಜ್ಜಿಯ ಆಶೀರ್ವಾದ
ದಯಾ ನಾಯಕ್‌ ಅವರ ತಾಯಿ 99 ವರ್ಷದ ರಾಧಾ ನಾಯಕ್‌ ಅವರು ಮೊಮ್ಮಗ ಚೈತನ್ಯ ಹಾಗೂ ಜೂಹಿಯನ್ನು ಆಶೀರ್ವದಿಸಿದರು.

































































































error: Content is protected !!
Scroll to Top