ಪ್ರಬಂಧ ಸ್ಪರ್ಧೆ : ಜ್ಞಾನಸುಧಾದ ಪ್ರಜ್ಞಾ ಮೋಹನ್‌ಗೆ ತೃತೀಯ ಸ್ಥಾನ

ಕಾರ್ಕಳ : ತುಮಕೂರಿನ ಎಂಪ್ರೈಸ್‌ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಸಹಯೋಗದಲ್ಲಿ ನಡೆದ ಪದವಿ ಪೂರ್ವ ಕಾಲೇಜಿನ ರಾಜ್ಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ-2025ರ ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಜ್ಞಾನಸುಧಾ ಕಾಲೇಜಿನ ಪ್ರಜ್ಞಾ ತೃತೀಯ ಸ್ಥಾನ ಪಡೆದಿರುತ್ತಾರೆ. ಈಕೆ ಹಾಸನದ ಮೋಹನ್‌ ಕುಮಾರ್ ಮತ್ತು ಶೀಲಾ ದಂಪತಿಯ ಪುತ್ರಿ.

ಇಬ್ಬನಿ ಜಿಲ್ಲಾ ಮಟ್ಟಕ್ಕೆ

ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ಸರಕಾರಿ ಪದವಿ ಪೂರ್ವ ಕಾಲೇಜು ಬಜಗೋಳಿಯಲ್ಲಿ ನಡೆದ ಕಾರ್ಕಳ ತಾಲೂಕು ಮಟ್ಟದ ಕನ್ನಡ ಪ್ರಬಂಧ ಸ್ಪರ್ದೆಯಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ಇಬ್ಬನಿ ದ್ವಿತೀಯ ಸ್ಥಾನಿಯಾಗಿ ಉಡುಪಿ ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ.

ಸಾಧಕ ವಿದ್ಯಾರ್ಥನಿಯರಿಗೆ ಅಜೆಕಾರ್ ಪದ್ಮಗೋಪಾಲ್‌ ಎಜ್ಯುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿಯವರು ಅಭಿನಂದಿಸಿದ್ದಾರೆ.































































































error: Content is protected !!
Scroll to Top