ನವದೆಹಲಿ : ಕರ್ನಾಟಕದ ನವೋದ್ಯಮ ಕಂಪನಿ ನ್ಯೂರಾಲಿಕ್ಸ್ ಎಐ, ದೇಶದ ಮೊದಲ ದೇಶೀಯ ರಕ್ಷಣಾ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ದೆಹಲಿಯ ಮಾಣಿಕ್ ಶಾ ಕೇಂದ್ರದಲ್ಲಿ ಆಯೋಜಿಸಲಾದ ಚಾಣಕ್ಯ ರಕ್ಷಣಾ ಸಂವಾದದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾರತದ ಮೊದಲ ಸಂಪೂರ್ಣ ದೇಶೀಯ ರಕ್ಷಣಾ AI-as-a-Service ನ್ನು ಬಿಡುಗಡೆ ಮಾಡಿದರು.
ಕನ್ನಡಿಗರು ಸ್ಥಾಪಿಸಿದ ಡೀಪ್ ಟೆಕ್ ಕಂಪನಿ ನ್ಯೂರಾಲಿಕ್ಸ್, ರಕ್ಷಣಾ ಸಚಿವಾಲಯದ IDEX ADITY 2.0 ಉಪಕ್ರಮದ ಅಡಿಯಲ್ಲಿ ಭಾರತೀಯ ಸೇನೆಗಾಗಿ ಎಐ
ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ದೇಶೀಯ ನಾವೀನ್ಯತೆಯ ಮೂಲಕ ಮುಂದಿನ ಪೀಳಿಗೆಯ ರಕ್ಷಣಾ ಸಾಮರ್ಥ್ಯವನ್ನು ನಿರ್ಮಿಸಲು ಕೇಂದ್ರ ಸರಕಾರ ಅಡಿಪಾಯ ಹಾಕಿದೆ ಎಂದು ನ್ಯೂರಾಲಿಕ್ಸ್ ತಿಳಿಸಿದೆ.
ಈ ಯೋಜನೆಯನ್ನು ಸ್ಥಳೀಯ ಲಾರ್ಜ್ ಲ್ಯಾಂಗ್ವೇಜ್ ಮಾಡ್ಯೂಲ್ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಎಐ ತಂತ್ರಜ್ಞಾನ ಕಮಾಂಡ್ ಸಪೋರ್ಟ್, ಡಾಕ್ಯುಮೆಂಟ್ ಇಂಟೆಲಿಜೆನ್ಸ್, ಸ್ಪೀಚ್ ಇಂಟರ್ಫೇಸ್, ಅನುವಾದ ಎಂಜಿನ್, ಆಪರೇಷನಲ್ ಅನಾಲಿಟಿಕ್ಸ್, ವಿದೇಶಿ ಕ್ಲೌಡ್ ಸೇವೆಗಳು, ಇಂಟರ್ನೆಟ್ ಸಂಪರ್ಕ, ಡೇಟಾ ಏಕೀಕರಣ ಮುಂತಾದ ಅನ್ವಯಿಕೆಗಳಲ್ಲಿ ಸಹಾಯ ಮಾಡುತ್ತದೆ. ಇದು ಸಶಸ್ತ್ರ ಪಡೆಗಳು ಸ್ವಾವಲಂಬಿ, ಭವಿಷ್ಯ-ಸಿದ್ಧ ಡಿಜಿಟಲ್ ಅನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಇದು ಕಾರ್ಯಾಚರಣೆಯ ಸಿದ್ಧತೆ ಮತ್ತು ಕಾರ್ಯಾಚರಣೆಗಳಿಗಾಗಿ ಆಮದು ಮಾಡಿಕೊಂಡ ತಂತ್ರಜ್ಞಾನದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ.
ಕರ್ನಾಟಕ ಮೂಲದ ನ್ಯೂರಾಲಿಕ್ಸ್‌ನಿಂದ ಮೊದಲ ದೇಶೀಯ ರಕ್ಷಣಾ ಎಐ ತಂತ್ರಜ್ಞಾನ ಅಭಿವೃದ್ಧಿ



















