ಉಡುಪಿ : ಯುವತಿಯ ಅತ್ಯಾಚಾರಗೈದು ಕೊಲೆ ಯತ್ನ ಆರೋಪದಡಿ ಬಂಧಿತನಾಗಿರುವ ಪೆರ್ಡೂರಿನ ಪ್ರದೀಪ್ ಪೂಜಾರಿಗೂ ಹಿಂದು ಜಾಗರಣ ವೇದಿಕೆಗೂ ಯಾವುದೇ ಸಂಬಂಧವಿರುವುದಿಲ್ಲವೆಂದು ಉಡುಪಿ ಜಿಲ್ಲಾ ಹಿಂದು ಜಾಗರಣ ವೇದಿಕೆ ಸ್ಪಷ್ಟನೆ ನೀಡಿದೆ. ನ. 30ರಂದು ನಡೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿವಿಧ ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿದೆ. ಹಿಂದೂ ಸಂಘಟನೆಗಳ ವಿರೋಧಿ ಮನಸ್ಥಿತಿಯುಳ್ಳ ಯಾರೋ ಇದನ್ನು ಉದ್ದೇಶ ಪೂರ್ವಕವಾಗಿಯೇ ಮಾಧ್ಯಮಗಳಲ್ಲಿ ಪ್ರಕಟವಾಗುವ ಹಾಗೆ ಮಾಡಿದ್ದಾರೆ. ಇದು ಅಕ್ಷಮ್ಯ. ಈತ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತ ಅಲ್ಲದಿದ್ದರೂ ಇಂತಹ ಹೇಳಿಕೆಗಳನ್ನು ಪತ್ರಿಕಾ ಮಾಧ್ಯಮಗಳಲ್ಲಿ ಪ್ರಕಟಿಸಿರುವುದನ್ನು ಹಿಂದು ಜಾಗರಣ ವೇದಿಕೆ ಬಲವಾಗಿ ಖಂಡಿಸುತ್ತದೆ. ಅಷ್ಟೇ ಅಲ್ಲದೇ ಇಂತಹ ಹೇಳಿಕೆಗಳನ್ನು ಪ್ರಕಟಿಸದಂತೆ ಆಗ್ರಹಪಡಿಸುತ್ತದೆ ಎಂದು ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಯೋಜಕ ರಾಜೇಶ್ ಉಚ್ಚಿಲ ಅವರು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.
ಕೊಲೆ ಯತ್ನ ಆರೋಪದಡಿ ಬಂಧಿತನಾದ ಪ್ರದೀಪ್ ಪೂಜಾರಿಗೂ – ಹಿಂದು ಜಾಗರಣ ವೇದಿಕೆಗೂ ಸಂಬಂಧವಿಲ್ಲ : ಹಿಂದೂ ಜಾಗರಣಾ ವೇದಿಕೆ ಸ್ಪಷ್ಟನೆ










































































