ಕಾರ್ಕಳ : ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ರಿ. ದಕ್ಷಿಣ ಕನ್ನಡ -ಉಡುಪಿ ಜಿಲ್ಲೆ ಇದರ 2025-27ನೇ ಸಾಲಿನ ಜಿಲ್ಲಾ ಉಪಾಧ್ಯಕ್ಷರಾಗಿ ದತ್ತಾತ್ರೇಯ ಆಯ್ಕೆಯಾಗಿದ್ದಾರೆ. ನ.25ರಂದು ಸಹೋದಯ ಸಭಾಭವನ ಬಲ್ಮಠ ಮಂಗಳೂರು ಇಲ್ಲಿ ನಡೆದ ಎಸ್ಕೆಪಿಎ ಸಭೆಯಲ್ಲಿ ಜಿಲ್ಲಾ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ದತ್ತಾತ್ರೇಯ ಅವರು ಈ ಹಿಂದೆ ಜಿಲ್ಲಾ ಸಮಿತಿಯ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ, ಜೊತೆ ಕಾರ್ಯದರ್ಶಿಯಾಗಿ ಹಾಗೂ ಕಾರ್ಕಳ ವಲಯದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.





































