ಬ್ರಹ್ಮಶ್ರೀ ನಾರಾಯಣಗುರು ಧರ್ಮ ಪರಿಪಾಲನಾ ಸಂಘ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾಗಿ ಮಂಜುಳಾ

ಕಾರ್ಕಳ : ಬ್ರಹ್ಮಶ್ರೀ ನಾರಾಯಣಗುರು ಧರ್ಮ ಪರಿಪಾಲನಾ ಸಂಘ (ಬಿ.ಎಸ್.ಎನ್.ಡಿ.ಪಿ.) ಇದರ ಮಹಿಳಾ ಘಟಕದ ಉಡುಪಿ ಜಿಲ್ಲಾಧ್ಯಕ್ಷರಾಗಿ ಕಾರ್ಕಳ ತಾಲೂಕು ನೂರಾಳ್‌ಬೆಟ್ಟು ಗ್ರಾಮದ ಮಂಜುಳಾ ಆಯ್ಕೆಯಾಗಿದ್ದಾರೆ.

ಅ. 30ರಂದು ಬೆಂಗಳೂರಿನಲ್ಲಿ ದಿ. ಗ್ರೀನ್ ಪಾತ್ ಹೊಟೇಲ್‌ನಲ್ಲಿ ಬ್ರಹ್ಮಶ್ರೀ ನಾರಾಯಣಗುರು ಧರ್ಮ ಪರಿಪಾಲನಾ ಸಂಘದ ರಾಜ್ಯಾಧ್ಯಕ್ಷ ಸೈದಪ್ಪ ಕೆ. ಗುತ್ತೇದಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಬಿ.ಎಸ್.ಎನ್.ಡಿ.ಪಿ.ಯ ರಾಜ್ಯ ಮಟ್ಟದ ಸಮಾವೇಶದಲ್ಲಿ ಜಿಲ್ಲಾವಾರು ಘಟಕಗಳ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಮಂಜುಳಾ ನೂರಾಳ್‌ಬೆಟ್ಟು ಗ್ರಾಮದ ಮುಜಿಲೆ ವಿಶ್ವನಾಥ ಪೂಜಾರಿಯವರ ಪತ್ನಿ. ತಾಲೂಕು ಪಂಚಾಯತ್ ಮಾಜಿ ಸದಸ್ಯೆಯಾಗಿರುವ ಇವರು ಪ್ರಸ್ತುತ ಬಿಜೆಪಿ ಕಾರ್ಕಳ ಮಂಡಲ ಕಾರ್ಯಕಾರಣಿ ಸದಸ್ಯೆಯಾಗಿದ್ದು, ಕರ್ನಾಟಕ ಸ್ಟೇಟ್ ಟ್ರೈಲರ್ ಅಸೋಸಿಯೇಶನ್‌ನ ವಲಯ ಮಟ್ಟದ ಪ್ರಧಾನ ಕಾರ್ಯದರ್ಶಿ ಹಾಗೂ ನೂರಾಳ್ ಬೆಟ್ಟು ಗ್ರಾಮದ ಬಿಲ್ಲವ ಸಂಘದ ಜೊತೆ ಕಾರ್ಯದರ್ಶಿಯಾಗಿದ್ದಾರೆ.































































































error: Content is protected !!
Scroll to Top