ಅಧ್ಯಕ್ಷರಾಗಿ ಶಾಕೀರ್ ಹುಸೈನ್ – ಕಾರ್ಯದರ್ಶಿಯಾಗಿ ದಿನೇಶ್ ಆರ್. ಶೆಟ್ಟಿ
ಕಾರ್ಕಳ : ಕಾರ್ಕಳ ಕ್ರಿಕೆಟ್ ಅಸೋಸಿಯೇಷನ್ನ ನೂತನ ಅಧ್ಯಕ್ಷರಾಗಿ ಶಾಕೀರ್ ಹುಸೈನ್, ಕಾರ್ಯದರ್ಶಿಯಾಗಿ ದಿನೇಶ್ ಆರ್. ಶೆಟ್ಟಿ ಆಯ್ಕೆಯಾಗಿದ್ದಾರೆ. ಅ. 14ರಂದು ಅಸೋಸಿಯೇಷನ್ನ ಕಚೇರಿಯಲ್ಲಿ 2025-26ರ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಗೌರವಾಧ್ಯಕ್ಷರಾಗಿ ಅವಿನಾಶ್ ಜಿ. ಶೆಟ್ಟಿ, ಸುಕೇಶ್ ಈಶ್ವರ್, ಉಪಾಧ್ಯಕ್ಷರಾಗಿ ಸುಧೀರ್ ಉಚ್ಚಂಗಿ, ಗಪೂರ್ ಗಾಂಧಿಮೈದಾನ, ಜತೆ ಕಾರ್ಯದರ್ಶಿಯಾಗಿ ನವೀನ್ ಶೆಟ್ಟಿ ಮುನಿಯಾಲು ಮತ್ತು ತೌಸಿಫ್ ಕಾರ್ಕಳ ಆಯ್ಕೆಯಾಗಿದ್ದಾರೆ.





































