ಪರವಾನಿಗೆ ರಹಿತ ಕಲ್ಲು ಸಾಗಾಟವೆಂದು ಲಾರಿ ಚಾಲಕನ ವಿರುದ್ಧವೂ ಪ್ರಕರಣ ದಾಖಲು
ಹೆಬ್ರಿ : ಕೆಂಪು ಕಲ್ಲು ತುಂಬಿದ್ದ ಟಿಪ್ಪರ್ ಲಾರಿಗೆ ಬಸ್ಸು ಡಿಕ್ಕಿಯಾದ ಘಟನೆ ಸೆ. 24ರಂದು ಹೆಬ್ರಿಯಲ್ಲಿ ಸಂಭವಿಸಿದೆ. ವರಂಗ ಕಡೆಯಿಂದ ಬಲ್ಲಾಡಿ ಅಡ್ಕ ರಸ್ತೆ ಕಡೆಗೆ ಹೋಗುತ್ತಿದ್ದ ಕೆಂಪು ಕಲ್ಲು ತುಂಬಿದ್ದ ಟಿಪ್ಪರ್ ಲಾರಿಗೆ ಓವರ್ ಟೇಕ್ ಮಾಡುವ ಭರದಲ್ಲಿ ರೇಷ್ಮಾ ಬಸ್ ಡಿಕ್ಕಿಯಾಗಿದೆ. ಪರಿಣಾಮವಾಗಿ ಲಾರಿ ಚಾಲಕ ಗಾಯಗೊಂಡಿದ್ದು, ಎರಡು ವಾಹನಗಳು ಜಖಂ ಆಗಿರುತ್ತದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಪರವಾನಿಗೆ ರಹಿತ ಕಲ್ಲು ಸಾಗಾಟ
ತನಿಖೆಗಾಗಿ ಹೆಬ್ರಿ ಪೊಲೀಸರು ಅಪಘಾತವಾದ ಸ್ಥಳಕ್ಕೆ ಹೋದಾಗ ಲಾರಿಯಲ್ಲಿದ್ದ ಕೆಂಪು ಕಲ್ಲುಗಳ ಬಗ್ಗೆ ಚಿಕಿತ್ಸೆಗಾಗಿ ಆಸ್ಪತ್ರೆ ದಾಖಲಾಗಿದ್ದ ಲಾರಿ ಚಾಲಕ ಪ್ರಭಾಕರ ಕುಲಾಲ್ ಅವರಲ್ಲಿ ಪೋನ್ ಮಾಡಿ ವಿಚಾರಿಸಿದ್ದು, ಕಲ್ಲುಗಳನ್ನು ಸಾಗಾಟ ಮಾಡಲು ಯಾವುದೇ ಪರವಾನಗಿ ಇಲ್ಲದಿರುವುದು ಗಮನಕ್ಕೆ ಬಂದಿರುತ್ತದೆ. ಲಾರಿಯಲ್ಲಿ ಅಂದಾಜು 12,500 ರೂ. ಮೌಲ್ಯದ ಸುಮಾರು 250 ಕೆಂಪು ಕಲ್ಲುಗಳು ಇದ್ದು, ಎಲ್ಲಿಂದಲೋ ಕಳವು ಮಾಡಿ ತಂದಿರುವುದಾಗಿ ಪ್ರಭಾಕರ್ ಕುಲಾಲ್ ವಿರುದ್ಧ ಪ್ರಕರಣ ದಾಖಲಾಗಿದೆ.

























