ಮಿಯ್ಯಾರು ಸೇವಾ ಭಾರತ್‌ – ರಕ್ತದಾನ ಶಿಬಿರ

ಕಾರ್ಕಳ : ಸೇವಾ ಭಾರತ್ ರಿ. ಮಿಯ್ಯಾರು ಇವರ ನೇತೃತ್ವದಲ್ಲಿ ಹಲವು ಸಂಘಟನೆಗಳ ಆಶ್ರಯದಲ್ಲಿ ಜಿಲ್ಲಾ ಆಸ್ಪತ್ರೆ ರಕ್ತ ನಿಧಿ ವಿಭಾಗ ಅಜ್ಜರ ಕಾಡು ಉಡುಪಿ ಇವರ ಸಹಯೋಗದೊಂದಿಗೆ ಸೆ. 14ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲಗುಪ್ಪೆ ಜೋಡುಕಟ್ಟೆ ಇಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು. ಇದೇ ಸಂದರ್ಭ ಪ್ರಾಥಮಿಕ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಕುಂಟಿಬೈಲ್ ಮಿಯ್ಯಾರು ಇವರ ಸಹಯೋಗದಲ್ಲಿ ರಕ್ತದೊತ್ತಡ ಮತ್ತು ಮಧುಮೇಹ ತಪಾಸಣೆ ಶಿಬಿರ ನಡೆಯಿತು.

ಶಾಲಾ ಮುಖ್ಯ ಶಿಕ್ಷಕ ಮನೋಹರ್ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಸೇವಾ ಭಾರತ್‌ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸೇವಾ ಭಾರತ್ ಮಿಯ್ಯಾರ್ ಇದರ ಅಧ್ಯಕ್ಷ ಪೂರ್ಣನಂದ ಪ್ರಭು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಿಯ್ಯಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ತಾರಾನಾಥ್ ಕೋಟ್ಯಾನ್, ಮಿಯ್ಯಾರು ಗ್ರಾಮ ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷ ಗಿರೀಶ್ ಅಮೀನ್, ಮಿಯ್ಯಾರು ಮಹಾಲಿಂಗೇಶ್ವರ ದೇವಸ್ಥಾನದ ನಿಕಟ ಪೂರ್ವ ಅಧ್ಯಕ್ಷ ಸತ್ಯೇಂದ್ರ ನಾಯಕ್, ಜಿಲ್ಲಾ ಆಸ್ಪತ್ರೆ ರಕ್ತ ನಿಧಿ ವಿಭಾಗ ಅಜ್ಜರ ಕಾಡು ಉಡುಪಿ ಇಲ್ಲಿನ ಡಾ. ವೀಣಾ ಕುಮಾರಿ ಎಂ., ಉದ್ಯಮಿಗಳಾದ ರಾಜು ಎಂ. ಶೆಟ್ಟಿ ರಾಯಿ ಮನೆ, ಮಂಜುನಾಥ್ ನಾಯಕ್ ಕುಂಟಿಬೈಲ್, ಬೋರ್ಕಟ್ಟೆ ಅನ್ಕಡಿ ಫ್ರೆಂಡ್ಸ್ ಅಧ್ಯಕ್ಷ ಮುಕೇಶ್ ಶೆಟ್ಟಿ, ಕುಂಟಿಬೈಲು ಗಣೇಶೋತ್ಸವ ಸಮಿತಿ ಅಧ್ಯಕ್ಷ ಮಿಥುನ್ ಶೆಟ್ಟಿ, ನೆಲ್ಲಿಗುಡ್ಡೆ ಫ್ರೆಂಡ್ಸ್ ಮಿಯ್ಯಾರು ಇದರ ಅಧ್ಯಕ್ಷ ಪ್ರಶಾಂತ್ ಪೂಜಾರಿ, ಜವನೆರ ಕೂಟ ಮನ್ನಡ್ಕ ಬೋರ್ಕಟ್ಟೆ ಇದರ ಅಧ್ಯಕ್ಷ ಸುಧೀರ್ ಪೂಜಾರಿ ಅಮ್ಮಾಸ್, ಸೂರಲ್ ಗ್ರಾಮ ಸೇವಾ ಟ್ರಸ್ಟ್(ರಿ) ಕಾರ್ಕಳ ಇದರ ಅಧ್ಯಕ್ಷ ಉಮೇಶ್ ಪೂಜಾರಿ, ಶಾಲಾ ಹಳೆ ವಿದ್ಯಾರ್ಥಿ ಸಂಘ ಜೋಡುಕಟ್ಟೆಯ ಅಧ್ಯಕ್ಷ ಸುಜಿತ್‌ ಕುಮಾರ್, ಎಸ್‌ಡಿಎಂ ಅಧ್ಯಕ್ಷ ಗಣೇಶ್ ಸಾಲಿಯಾನ್ ಉಪಸ್ಥಿತರಿದ್ದರು. ಮಿಯ್ಯಾರು ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಆರೋಗ್ಯ ಅಧಿಕಾರಿಗಳಾದ ಮೆಹತಾಬ್ ಮತ್ತು ಶ್ಯಾಮಲಾ ಅವರನ್ನು ಸನ್ಮಾನಿಸಲಾಯಿತು. ಅನನ್ಯ ಮತ್ತು ಶ್ರಾವ್ಯ ಪ್ರಾರ್ಥಿಸಿದರು. ನಿತಿನ್ ಪೂಜಾರಿ ಕಾರ್ಯಕ್ರಮ ನಿರ್ವಹಿಸಿ, ಅನನ್ಯ ವಂದಿಸಿದರು.

























































































































error: Content is protected !!
Scroll to Top