ಜೇಸಿಐ ಕಾರ್ಕಳ ರೂರಲ್‌ ಘಟಕಕ್ಕೆ ತರಬೇತಿ ವಿಭಾಗದಲ್ಲಿ ಅತ್ಯುತ್ತಮ ಘಟಕ ಪ್ರಶಸ್ತಿ

ಕಾರ್ಕಳ : ಜೇಸಿಐ ಭಾರತದ ವಲಯ 15ರ ತರಬೇತಿ ವಿಭಾಗದಲ್ಲಿ ಜೆಸಿಐ ಕಾರ್ಕಳ ರೂರಲ್ ಘಟಕ ಅತ್ಯುತ್ತಮ ಘಟಕ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಇತ್ತೀಚೆಗೆ ಕಾರ್ಕಳದಲ್ಲಿ ನಡೆದ ವಲಯದ ಅಭಿವೃದ್ಧಿ ಮತ್ತು ಬೆಳವಣಿಗೆ ಹಾಗೂ ತರಬೇತಿ ಸಮ್ಮೇಳನದಲ್ಲಿ ವಲಯಾಧ್ಯಕ್ಷ ಅಭಿಲಾಷ್ ಬಿ.ಎ. ಅವರು ಘಟಕದ ಅಧ್ಯಕ್ಷ ಅರುಣ್ ಪೂಜಾರಿ ಮಾಂಜ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಈ ಸಂದರ್ಭ ವಲಯ ಉಪಾಧ್ಯಕ್ಷ ಪ್ರಶಾಂತ್‌ ಕುಮಾರ್‌, ವಲಯ ತರಬೇತಿ ನಿರ್ದೇಶಕಿ ಅಕ್ಷತಾ ಶೆಟ್ಟಿ, ವಲಯ ಅಭಿವೃದ್ಧಿ ಮತ್ತು ಬೆಳವಣಿಗೆ ನಿರ್ದೇಶಕ ವಿಘ್ನೇಶ್ ರಾವ್, ವಲಯಾಧಿಕಾರಿ ಮಂಜುನಾಥ್ ಕೋಟ್ಯಾನ್, ಘಟಕದ ಸ್ಥಾಪಕರಾದ ಸತೀಶ್ ಪೂಜಾರಿ ಕಲತ್ರಪಾದೆ, ಮಾರ್ಗದರ್ಶಕ ಪ್ರಕಾಶ್, ಕೆ.ಪಿ. ಪೂರ್ವಾಧ್ಯಕ್ಷರಾದ ‌ಮೋಹನ್ ನಕ್ರೆ, ಕೃಷ್ಣ ಪವಾರ್, ವೀಣಾ ರಾಜೇಶ್‌ ಭಂಡಾರಿ, ಜೂನಿಯರ್ ಜೇಸಿ ಅಧ್ಯಕ್ಷೆ ದಿಯಾ ರಾಜೇಶ್ ಭಂಡಾರಿ, ಸದಸ್ಯರಾದ ಹರಿಣಿ ಬಂಗೇರ, ಸುಧೀರ್ ಪೂಜಾರಿ, ಶ್ವೇತಾ ಅರುಣ್‌, ವರ್ಷಿತ್, ವಿನಿಷ್ ಅವಿಷ್ಕ ಉಪಸ್ಥಿತರಿದ್ದರು.



































































































error: Content is protected !!
Scroll to Top