ಕಾರ್ಕಳ : ಮನೆಯ ಬಾಗಿಲಿಗೆ ಹಾಕಿದ್ದ ಚಿಲಕ ಮುರಿದು ಕಳ್ಳತನಕ್ಕೆ ಯತ್ನಗೈದಿರುವ ಘಟನೆ ಆ. 12ರಂದು ಕಸಬಾ ಗ್ರಾಮದಲ್ಲಿ ಸಂಭವಿಸಿದೆ. ಗಣೇಶ್ ಎಂಬವರ ಮನೆಗೆ ಮಂಗಳವಾರ ಮಧ್ಯಾಹ್ನ 2:45 ಗಂಟೆಯಿಂದ ಸಂಜೆ 5:30 ಗಂಟೆಯ ಮದ್ಯಾವಧಿಯಲ್ಲಿ ಯಾರೋ ಕಳ್ಳರು ಬಂದು ಮನೆಯ ಎದುರಿನ ಬಾಗಿಲಿಗೆ ಹಾಕಿದ ಚಿಲಕವನ್ನು ಮುರಿದು ಒಳಪ್ರವೇಶಿಸಿ ಹಾಲ್ ಮತ್ತು ಬೆಡ್‌ರೂಮ್‌ನಲ್ಲಿದ್ದ ಕಪಾಟ್‌ಗಳನ್ನು ತೆರೆದು ಅದರೊಳಗೆ ಇದ್ದ ಬಟ್ಟೆಗಳನ್ನು ಚೆಲ್ಲಾಪಿಲ್ಲಿ ಮಾಡಿ, ಕಳವು ಮಾಡಲು ಪ್ರಯತ್ನಿಸಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಮನೆಗೆ ಹಾಕಿದ್ದ ಬೀಗ ಮುರಿದು ಕಳ್ಳತನಕ್ಕೆ ಯತ್ನ




























































