ನಾಲ್ಕೂರು ನರಸಿಂಗ ರಾವ್ ಸ್ಮಾರಕ ಸ. ಪ. ಪೂ. ಕಾಲೇಜು – ಪ್ರೌಢಶಾಲೆಯಲ್ಲಿ ಸ್ವರ್ಣ ಪದಕ ಪ್ರದಾನ

ಕಾರ್ಕಳ : ನಾಲ್ಕೂರು ನರಸಿಂಗ ರಾವ್ ಸ್ಮಾರಕ ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲಾ ವಿಭಾಗ ಶಿರ್ಲಾಲು ಇದರ 2024-25ನೇ ಸಾಲಿನ ಎಸ್ಸೆಸೆಲ್ಸಿ ಪಬ್ಲಿಕ್ ಪರೀಕ್ಷೆಯಲ್ಲಿ ತರಗತಿಗೆ ಪ್ರಥಮ ಸ್ಥಾನಿಗಳಾದ ಓರ್ವ ಬಾಲಕ ಮತ್ತು ಬಾಲಕಿಗೆ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನಿಗಳಾದ ವಿದ್ಯಾರ್ಥಿಗಳಿಗೆ ಸ್ವರ್ಣ ಪದಕ ಪ್ರದಾನ ಕಾರ್ಯಕ್ರಮ, ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅಭಿನಂದನೆ ಮತ್ತು ಲೆಕ್ಕ ಪರಿಶೋಧಕ ಕೆ. ಕಮಲಾಕ್ಷ ಕಾಮತ್ ಕಾರ್ಕಳ ಅವರು ಶಾಲಾ ಸಭಾಂಗಣಕ್ಕೆ ನೀಡಿರುವ ಫ್ಯಾನ್ ಹಾಗೂ ಹ್ಯಾಲೋಜನ್ ದೀಪದ ಉದ್ಘಾಟನಾ ಸಮಾರಂಭ ಆ. 2ರಂದು ಜರುಗಿತು.

ನೂತನವಾಗಿ ಅಳವಡಿಸಿದ ಫ್ಯಾನ್ ಹಾಗೂ ಹ್ಯಾಲೋಜನ್ ದೀಪವನ್ನು ಉದ್ಘಾಟಿಸಿ ಮಾತನಾಡಿದ ಕೆ. ಕಮಲಾಕ್ಷ ಕಾಮತ್, ವಿದ್ಯಾರ್ಥಿಗಳು ಗುರು ಹಿರಿಯರ ಆದರ್ಶವನ್ನು ಪಾಲಿಸುತ್ತಾ, ಅವರು ತೋರಿದ ಸನ್ಮಾರ್ಗದಲ್ಲಿ ನಡೆದು ಸಂಸ್ಕಾರಯುತ ಜೀವನವನ್ನು ನಡೆಸಬೇಕು ಎಂದು ಹೇಳಿದರು.

ಸುಮಂಗಲ ಚಾರಿಟೇಬಲ್ ಟ್ರಸ್ಟ್ (ರಿ.) ಶಿರ್ಲಾಲು ಇದರ ವತಿಯಿಂದ ಅಧ್ಯಕ್ಷ ಕೆ. ಗುಣಪಾಲ ಕಡಂಬ ಮತ್ತವರ ಪುತ್ರ ಜೀವಿತೇಶ್ ಕಡಂಬ, ಪುತ್ರಿ ಸುನೈನಾ ಪ್ರೀತಂ ಹಾಗೂ ಅಳಿಯ ಪ್ರೀತಮ್ ಜೊತೆ ಸೇರಿ ಎಸ್ಸೆಸೆಲ್ಸಿಯಲ್ಲಿ ಪ್ರಥಮ ಸ್ಥಾನಿಗಳಾದ ಪ್ರಗತಿ ಶೆಟ್ಟಿ ಮತ್ತು ಧನುಷ್ ವಿ. ಕುಲಾಲ್ ಅವರಿಗೆ ಬಂಗಾರದ ಪದಕವನ್ನಿತ್ತು ಸನ್ಮಾನಿಸಿದರು. ಆಸ್ಪೈರ್ ಟ್ರಸ್ಟ್(ರಿ.) ಮಣಿಪಾಲ ಇದರ ಪ್ರವರ್ತಕರಾದ ಸುಭಾಷ್ ಚಂದ್ರ ಸಂಕಲ್ಕರ್, ತೃಪ್ತಿ ನಾಯಕ್ ಹಾಗೂ ಡಾ. ಗಿರೀಶ್ ಮೆನನ್ ಜೊತೆ ಸೇರಿ ವಾಣಿಜ್ಯ ಹಾಗೂ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನಿಗಳಾದ ಸುವೀಕ್ಷಾ ಹಾಗೂ ಪ್ರಜ್ಞಾ ಅವರಿಗೆ ಚಿನ್ನದ ಪದಕವನ್ನಿತ್ತು ಗೌರವಿಸಿದರು. ಇದೇ ಸಂದರ್ಭ ಶಾಲಾ ಹಳೆ ವಿದ್ಯಾರ್ಥಿ ಸಂಘ ವತಿಯಿಂದ ಎಸ್ಸೆಸೆಲ್ಸಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಾದ ಸಮೀಕ್ಷಾ ಎಸ್. ಪೂಜಾರಿ, ನಿಕಿತಾ, ನವ್ಯ, ರಕ್ಷಾ, ಸುರಕ್ಷಾ ಕುಲಾಲ್ ಮತ್ತು ಸಿಂಚನಾ ಅವರನ್ನು ಸನ್ಮಾನಿಸಲಾಯಿತು.

ರಾಜ್ಯಶಾಸ್ತ್ರ ಉಪನ್ಯಾಸಕಿ ಬಬಿತಾ ಪ್ರಸಾದ್ ಮತ್ತು ಮಂಜುನಾಥ ಪ್ರಸಾದ್ ದಂಪತಿ ಅವರ ತಂದೆ ತಾಯಿಯ ಹೆಸರಿನಲ್ಲಿ ವಾಣಿಜ್ಯ ಹಾಗೂ ಕಲಾ ವಿಭಾಗದಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಾದ ಸಾಕ್ಷಿ ಶೆಟ್ಟಿ, ಸ್ವಾತಿ ದೇವಾಡಿಗ, ಮಹಮ್ಮದ್ ಸುಹೈಲ್, ಸ್ವಾತಿ ನಾಯ್ಕ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ಲೋಕೇಶ್ ಹಾಗೂ ಪದವಿ ಪೂರ್ವ ಇಲಾಖೆ ಉಪ ನಿರ್ದೇಶಕ ಮಾರುತಿ, ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜಮ್ಮ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ರವಿಚಂದ್ರ ಕಾರಂತ್ ಭಾಗವಹಿಸಿದ್ದರು. ವೇದಿಕೆಯಲ್ಲಿ ರೋಟರಿ ಕ್ಲಬ್‌ನ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಾಂತಿರಾಜ್ ಜೈನ್, ವಕೀಲ ಸೂರಜ್ ಜೈನ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶೀತಲ್ ಜೈನ್ ಉಪಸ್ಥಿತರಿದ್ದರು. ಪ್ರಾಂಶುಪಾಲ ಬೇಬಿ ಕೆ. ಈಶ್ವರ ಮಂಗಲ ಪ್ರಾಸ್ತಾವಿಕವಾಗಿ ಸ್ವಾಗತಿಸಿದರು. ಶಿಕ್ಷಕರಾದ ನಾರಾಯಣ ಪೂಜಾರಿ ಎನ್., ಮಹಾಲಕ್ಷ್ಮಿ ಹಾಗೂ ಉಪನ್ಯಾಸಕ ಉದಯ್ ದೇವಾಡಿಗ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಶಿಕ್ಷಕ ಸತೀಶ್ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಶಿಕ್ಷಕ ನರಸಿಂಹ ನಾಯಕ್ ವಂದಿಸಿದರು. ಶಿಕ್ಷಕಿ ವಿಜಯಲಕ್ಷ್ಮಿ ಸಹಕರಿಸಿದರು.





























































































































error: Content is protected !!
Scroll to Top