ಕಾಪು ಲೈಟ್‌ ಹೌಸ್‌ ಬೀಚ್‌ನಲ್ಲಿ ಮಗುಚಿದ ದೋಣಿ – 7 ಮಂದಿ ಮೀನುಗಾರರ ರಕ್ಷಣೆ

ಉಡುಪಿ : ಕಾಪು ಲೈಟ್ ಹೌಸ್ ಬೀಚ್ ಬಳಿ ಬೀಸಿದ ಗಾಳಿಗೆ ಮೀನುಗಾರರ ದೋಣಿ ಮಗುಚಿ ಬಿದ್ದು, ಅದೃಷ್ಟವಶಾತ್‌ ಮೀನುಗಾರರು ಬದುಕುಳಿದಿದ್ದಾರೆ. ಮಗುಚಿ ಬಿದ್ದ ದೋಣಿಯಲ್ಲಿ 7 ಮಂದಿ ಮೀನುಗಾರರಿದ್ದರು. ಅವರ ಕೂಗು ದಡದಲ್ಲಿದ್ದವರಿಗೆ ಕೇಳಿಸಿತು. ತಕ್ಷಣವೇ ದಡದಲ್ಲಿದ್ದವರು ಹಗ್ಗ ಹಾಕಿ ಆ ಏಳೂ ಮಂದಿ ಮೀನುಗಾರರನ್ನು ರಕ್ಷಿಸುವ ಕಾರ್ಯಕ್ಕೆ ಮುಂದಾದರು. ಕೊನೆಗೂ ಆ ಎಲ್ಲ ಏಳು ಜನರನ್ನು ರಕ್ಷಿಸಿ ದಡಕ್ಕೆ ಸೇರಿಸುವಲ್ಲಿ ಯಶಸ್ವಿಯಾದರು.

ಸಮುದ್ರದಲ್ಲಿ ಅವಘಡ ಉಂಟಾದಾಗ ಮೀನುಗಾರರು ಜೀವದ ಹಂಗು ತೊರೆದು ಹೋರಾಡಬೇಕಾಗುತ್ತದೆ. ಎಂತಹ ಅನುಭವಿ ಈಜುಗಾರರೇ ಆದರೂ ಅಪಾಯ ತಪ್ಪಿದ್ದಲ್ಲ.

ಸ್ಥಳಕ್ಕೆ ಧಾವಿಸಿದ ತಹಶಿಲ್ದಾರ್
ಸುದ್ದಿ ತಿಳಿದ ತಕ್ಷಣ ಕಾಪು ತಹಶೀಲ್ದಾರ್ ಪ್ರತಿಭಾ ಆರ್. ಘಟನಾ ಸ್ಥಳಕ್ಕೆ ಧಾವಿಸಿದರು. ಜೀವ ಉಳಿಸಿಕೊಂಡು ನಿಂತಿದ್ದ ಮೀನುಗಾರರಿಗೆ ಧೈರ್ಯ ತುಂಬಿದರು. ಮುಂದಿನ ದಿನಗಳಲ್ಲಿ ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಿದರು.
ಕಾಪು ತಾಲೂಕಿನಲ್ಲಿ ಪ್ರಾಕೃತಿಕ ವಿಪತ್ತು ನಿರ್ವಹಣೆಗಾಗಿ ತಹಶಿಲ್ದಾರ್ ನೇತೃತ್ವದಲ್ಲಿ‌ ಸಕಲ ಮುನ್ನೆಚ್ಚರಿಕೆ ವಹಿಸಲಾಗಿತ್ತು. ಅವಘಡ ನಡೆದ ಸ್ಥಳದಲ್ಲಿ ಕೂಡ ಗೃಹರಕ್ಷಕ ದಳದ ಸಿಬ್ಬಂದಿ ನಿಯೋಜಿಸಲಾಗಿತ್ತು. ಜೊತೆಗೆ ಸ್ಥಳೀಯರನ್ನೂ ವಿಶ್ವಾಸಕ್ಕೆ ಪಡೆದು ಪ್ರಾಕೃತಿಕ ವಿಪತ್ತು ನಿರ್ವಹಣೆ ಸಂದರ್ಭ ಕೈ ಜೋಡಿಸುವಂತೆ ಮನವಿ ಮಾಡಿಕೊಳ್ಳಲಾಗಿತ್ತು. ಕಂದಾಯ ನಿರೀಕ್ಷಕ ಇಜ್ಜಾರ್ ಸಾಬಿರ್, ಗ್ರಾಮಾಡಳಿತಾಧಿಕಾರಿ ಶ್ರೀನಿವಾಸ್, ಗ್ರಾಮ ಸಹಾಯಕರಾದ ದಿಲೀಪ್ ಈ ಸಂದರ್ಭದಲ್ಲಿದ್ದರು.





























































































































error: Content is protected !!
Scroll to Top