ಮಟ್ಕಾ ಕಿಂಗ್ ಪಿನ್ ಲಿಯೋ ಅಂದರ್‌

ಉಡುಪಿ : ಮಟ್ಕಾ ಕಿಂಗ್ ಪಿನ್ ಲಿಯೋ ಕರ್ನೆಲಿಯೋನಿಗೆ ಎರಡನೇ ಹೆಚ್ಚುವರಿ ಸಿವಿಲ್ ಹಾಗೂ ಜೆಎಮ್‌ಎಫ್‌ಸಿ ನ್ಯಾಯಾಲಯವು ಸೋಮವಾರ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ. ಕಾಪು ಠಾಣಾ ವ್ಯಾಪ್ತಿಯಲ್ಲಿನ ಪ್ರಕರಣವೊಂದರಲ್ಲಿ ವಾರೆಂಟ್ ಮೇಲೆ ಆತನನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಈತನ ವಿರುದ್ಧ ಉಡುಪಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಮಟ್ಕಾ ಸಂಬಂಧ 34 ಪ್ರಕರಣಗಳು ದಾಖಲಾಗಿತ್ತು. ಈ ಹಿಂದೆ ಜೂನ್‌ ಪ್ರಥಮ ವಾರದಲ್ಲಿ ಶಿರ್ವ ಠಾಣಾ ವ್ಯಾಪ್ತಿಯ ಶಂಕರಪುರದಲ್ಲಿ ಮಟ್ಕಾ ಅಡ್ಡೆಗೆ ಪೋಲಿಸರು ದಾಳಿ ನಡೆಸಿದ್ದು ಲಿಯೋ ಕರ್ನೆಲೋ ಹಾಗೂ ವಿಠ್ಠಲನನ್ನು ಬಂಧಿಸಿದ್ದರು. ಅಂದು ಕಾರ್ಕಳ ಎಎಸ್ಪಿ ಹರ್ಷಪ್ರಿಯಂವದ ಅವರ ಮಾರ್ಗದರ್ಶನದಲ್ಲಿ ಶಿರ್ವ ಠಾಣಾಧಿಕಾರಿ ಮಂಜುನಾಥ್ ಮರಬದ ಮತ್ತವರ ತಂಡ ಕಾರ್ಯಾಚರಣೆ ನಡೆಸಿತ್ತು.





























































































































error: Content is protected !!
Scroll to Top