ಕುಸಿದ ಕೂಂಜಾಜೆ ಕಾಲು ಸಂಕ – ಹಾನಿಗೊಂಡ ಬೇಲಾಡಿ ಮೋರಿ

ಕಾರ್ಕಳ : ತಾಲೂಕಿನಲ್ಲಿ ಸುರಿದ ಭಾರಿ ಮಳೆಗೆ ಹೊಳೆ, ತೋಡುಗಳಲ್ಲಿ ಧುಮ್ಮಿಕ್ಕಿ ನೀರು ಹರಿಯುತ್ತಿದ್ದು ನೀರಿನ ಪ್ರವಾಹಕ್ಕೆ ಕಾರ್ಕಳ ತಾಲೂಕು ನೂರಾಲ್‌ಬೆಟ್ಟು ಕೂಂಜಾಜೆಯಲ್ಲಿನ ಕಾಲು ಸಂಕ ಕುಸಿದು ಬಿದ್ದಿದೆ. ಸುಮಾರು 12 ವರ್ಷಗಳ ಹಿಂದೆ ಈ ಕಾಲು ಸಂಕ ನಿರ್ಮಾಣವಾಗಿತ್ತು ಎಂದು ಸ್ಥಳೀಯರು ತಿಳಿಸಿರುತ್ತಾರೆ. ಕಾಲು ಸಂಕ ಕುಸಿದ ಪರಿಣಾಮ ಇನ್ನೊಂದು ಮಗ್ಗುಲಿನಲ್ಲಿರುವ 5 ಮನೆಯವರಿಗೆ ತೊಂದರೆಯಾಗಿದೆ. ಇದೀಗ ಅಲ್ಲಿನ ನಿವಾಸಿಗಳು ಅದೇ ಪರಿಸರದಲ್ಲಿರುವ ಮತ್ತೊಂದು ಸೇತುವೆ ಮೂಲಕ ಪೇಟೆ ಸಂಪರ್ಕಿಸುತ್ತಾರೆ.

ಕಾಂತಾವರ ಗ್ರಾಮದ ಬೇಲಾಡಿ ಹೊಳೆ ಬದಿ ರಸ್ತೆಯ ಮೋರಿ ನೀರಿನ ಪ್ರವಾಹಕ್ಕೆ ಕುಸಿದಿದೆ. ಈ ಮೋರಿ ಗ್ರಾಮ ಪಂಚಾಯತ್‌ ವತಿಯಿಂದ ನಿರ್ಮಾಣವಾಗಿತ್ತು.





























































































error: Content is protected !!
Scroll to Top